ಜಗತ್ತಿನ ಅತಿ ಹಳೆಯ ಯುದ್ಧ ನೌಕೆ 'INS ವಿರಾಟ್'ನ ಪ್ರಯಾಣ ಅಂತ್ಯ

By Suvarna Web DeskFirst Published Mar 6, 2017, 3:54 AM IST
Highlights

ಭಾರತೀಯ ಸೇನೆಗೆ ಅದೆಷ್ಟೋ ಯುದ್ಧ ವಿಮಾನಗಳು, ಯುದ್ಧ ನೌಕೆಗಳು ಬಲ ತುಂಬಿದೆ. ಅದರಲ್ಲೂ ಕೆಲ ಯುದ್ಧ ನೌಕೆಗಳ ಕೊಡುಗೆ ಮರೆಯಲು ಅಸಾಧ್ಯ. ಇಂತಹ ಯುದ್ಧ ನೌಕೆಗಳ ಪೈಕಿಯಲ್ಲಿ ಅದ್ವಿತೀಯ ಸಾಲಿನಲ್ಲಿ ನಿಲ್ಲುವ ನೌಕೆ ಎಂದರೆ ಅದು ಐಎನ್ಎಸ್ ವಿರಾಟ್. ಹಲವು ಯುದ್ಧ ವಿಮಾನಗಳನ್ನ ಹೊತ್ತೊಯ್ಯಬಲ್ಲ ಸಾಮಾರ್ಥ್ಯ ಹೊಂದಿದ್ದ ಜಗತ್ತಿನ ಅತಿ ಹಳೆಯ ಯುದ್ಧ ನೌಕೆ ಎಂದೇ ಹೇಳಲಾಗುವ, ಭಾರತದ ಅತಿ ದೊಡ್ಡ ಯುದ್ಧ ನೌಕೆ ಇಂದಿನಿಂದ ಚಿರ ವಿಶ್ರಾಂತಿಗೆ ಜಾರಲಿದೆ.

ಮುಂಬೈ(ಮಾ.06): ಭಾರತೀಯ ಸೇನೆಗೆ ಅದೆಷ್ಟೋ ಯುದ್ಧ ವಿಮಾನಗಳು, ಯುದ್ಧ ನೌಕೆಗಳು ಬಲ ತುಂಬಿದೆ. ಅದರಲ್ಲೂ ಕೆಲ ಯುದ್ಧ ನೌಕೆಗಳ ಕೊಡುಗೆ ಮರೆಯಲು ಅಸಾಧ್ಯ. ಇಂತಹ ಯುದ್ಧ ನೌಕೆಗಳ ಪೈಕಿಯಲ್ಲಿ ಅದ್ವಿತೀಯ ಸಾಲಿನಲ್ಲಿ ನಿಲ್ಲುವ ನೌಕೆ ಎಂದರೆ ಅದು ಐಎನ್ಎಸ್ ವಿರಾಟ್. ಹಲವು ಯುದ್ಧ ವಿಮಾನಗಳನ್ನ ಹೊತ್ತೊಯ್ಯಬಲ್ಲ ಸಾಮಾರ್ಥ್ಯ ಹೊಂದಿದ್ದ ಜಗತ್ತಿನ ಅತಿ ಹಳೆಯ ಯುದ್ಧ ನೌಕೆ ಎಂದೇ ಹೇಳಲಾಗುವ, ಭಾರತದ ಅತಿ ದೊಡ್ಡ ಯುದ್ಧ ನೌಕೆ ಇಂದಿನಿಂದ ಚಿರ ವಿಶ್ರಾಂತಿಗೆ ಜಾರಲಿದೆ.

ಐಎಎಸ್ ವಿರಾಟ್, ಈ ನೌಕೆ ಸೇನೆಗೆ ಅದೆಷ್ಟೋ ಅನೆಗಳ ಬಲ ತುಂಬುತ್ತಿತ್ತು. ದೇಶದ ರಕ್ಷಣೆಯಲ್ಲಿ ಈ ಯುದ್ಧ ನೌಕೆಯ ಪಾತ್ರ ಅತಿಮುಖ್ಯವಾಗಿತ್ತು. ಇದೀಗ ಐಎನ್ಎಸ್ ವಿರಾಟ್ ಸತತ ಮೂರು ದಶಕಗಳ ಕಾಲ ಭಾರತೀಯ ಸೇನೆಗೆ ನೀಡಿದ್ದ ಸೇವೆಯಿಂದ ನಿವೃತ್ತಿಗೊಳ್ಳುತ್ತಿದೆ.

ಪ್ರಯಾಣ ಮುಗಿಸಿದ 1987ರಲ್ಲಿ ಭಾರತೀಯ ಸೇನೆಗೆ ಸೇರಿದ್ದ ವಿರಾಟ್

ಶ್ರೀಲಂಕಾದಲ್ಲಿ 1988ರಲ್ಲಿ ಉದ್ಭವಿಸಿದ ಬಿಕ್ಕಟಿನ ವೇಳೆಯಲ್ಲಿ ಶಾಂತಿ ಕಾಪಾಡಲು ಆಪರೇಶನ್ ಜುಪೀಟರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ವಿರಾಟ್, 1999ರ ಕಾರ್ಗಿಲ್ ಯುದ್ಧದ ಆಪರೇಶನ್ ವಿಜಯ್ ನಲ್ಲೂ ಪಾಲ್ಗೊಂಡಿತ್ತು, ಇನ್ನು, 2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆದಾಗ ಉಗ್ರರ ವಿರುದ್ಧದ ಆಪರೇಶನ್ ಪರಾಕ್ರಮ್ ಕಾರ್ಯಾಚರಣೆಯಲ್ಲೂ ಪಾಲ್ಗೊಂಡಿತ್ತು.

INS ವಿರಾಟ್ ಯುದ್ಧನೌಕೆಯ ಮೂಲ ಬ್ರಿಟನ್: 1959ರಲ್ಲಿ ಬ್ರಿಟೀಷ್ ಸೇನೆ ಸೇರಿದ್ದ ವಿರಾಟ್

ಹೌದು, ಐಎನ್ಎಸ್ ವಿರಾಟ್, ಭಾರತೀಯ ಸೇನೆಗೆ ಸೇರುವ ಮುನ್ನ ಇದು ಇದ್ದಿದ್ದು, ಬ್ರಿಟೀಷ್ ಸೇನೆಯಲ್ಲಿ, HMS ಹರ್ಮಿಸ್ ಎಂಬ ಹೆಸರಿಂದ ಕರೆಯಲ್ಪಟ್ಟಿದ್ದ ನೌಕೆಯನ್ನ ಬ್ರಿಟನ್ ಸರ್ಕಾರ, 1987ರಲ್ಲಿ ಡಿಕಮಿಷನ್ ಮಾಡಿದ ಮೇಲೆ ಭಾರತ ಸರ್ಕಾರ ಅದನ್ನ ಖರೀದಿಸಿತ್ತು. ಇದೀಗ ಭಾರತೀಯ ನೌಕಾಪಡೆಯಲ್ಲಿ ಸತತ 3 ದಶಕಗಳ ಕಾಲ ಸೇವೆಯನ್ನ ನೀಡಿದ ಬಳಿಕ ಅಂತಿಮ ಪ್ರಯಾಣವನ್ನ ಮುಗಿಸಿದೆ.

ಯುದ್ಧ ವಿಮಾನಗಳನ್ನ ಹೊತ್ತೊಯ್ಯ ಬಲ್ಲ ಸಾರ್ಮರ್ಥ್ಯ ಹೊಂದಿದ್ದ ಐಎನ್ಎಸ್ ವಿರಾಟ್ ಇಂದು ಮುಂಬಯಿಯ ನೌಕಾನೆಲೆಯಲ್ಲಿ ಭಾರತೀಯ ನೌಕಾ ಪಡೆಯಿಂದ ಸೇವೆಯಿಂದ ನಿವೃತ್ತಿಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನೌಕಾನೆಲೆಯಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿದ್ದು, ಭಾರತೀಯ ಸೇನೆಗೆ ತನ್ನದೇ ಆದ ಸೇವೆ ನೀಡಿದ ಯುದ್ಧ ನೌಕೆಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಇನ್ನು, ಈ ಯುದ್ಧ ನೌಕೆಯನ್ನ ಸಮುದ್ರದ ಮೇಲೆಯೇ ಮ್ಯೂಸಿಯಂ ಮಾಡುವ ಸಾಧ್ಯತೆ ಇದ್ದು, ಸರ್ಕಾರದ ಅಂತಿಮ ಮುದ್ರೆಯೊಂದೇ ಬಾಕಿಯಿದೆ.

click me!