ಎಸ್'ಎಂಕೆಯನ್ನು ಬಿಜೆಪಿಗೆ ಆಹ್ವಾನಿಸಿದ ಬಿ'ಎಸ್'ವೈ :ಕಮಲದಲ್ಲಿ ಆರಂಭವಾಗುತ್ತಾ ‘ಕೃಷ್ಣ’ಯುಗ?

Published : Mar 06, 2017, 03:53 AM ISTUpdated : Apr 11, 2018, 12:56 PM IST
ಎಸ್'ಎಂಕೆಯನ್ನು ಬಿಜೆಪಿಗೆ ಆಹ್ವಾನಿಸಿದ ಬಿ'ಎಸ್'ವೈ :ಕಮಲದಲ್ಲಿ ಆರಂಭವಾಗುತ್ತಾ ‘ಕೃಷ್ಣ’ಯುಗ?

ಸಾರಾಂಶ

ಶೀಘ್ರದಲ್ಲೇ ಎಸ್​​.ಎಂ. ಕೃಷ್ಣ  ಬಿಜೆಪಿ ಸೇರುವ ವಿಶ್ವಾಸವಿದೆ.

ಬೆಂಗಳೂರು(ಮಾ.06): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ  ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.  

ಸದಾಶಿವನಗರದ ಕೃಷ್ಣರವರ ನಿವಾಸಕ್ಕೆ ಬಿಜೆಪಿ ಮುಖಂಡರೊಂದಿಗೆ ತೆರಳಿದ ಬಿಎಸ್'ವೈ ಅವರನ್ನು ಎಸ್'ಎಂಕೆ ದಂಪತಿ ಆಹ್ವಾನಿಸಿ ಸೌಜನ್ಯಯುತವಾಗಿ ಮಾತುಕತೆ ನಡೆಸಿದರು. ಆದರೆ ಬಿಜೆಪಿ ಸೇರ್ಪಡೆಯ ಖಚಿತತೆಯ ಬಗ್ಗೆ ಕಾಂಗ್ರೆಸ್ ನಿರ್ಗಮಿತ ಹಿರಿಯ ನಾಯಕ ಸ್ಪಷ್ಟಪಡಿಸಿಲ್ಲ.

ನಂತರ ಮಾತನಾಡಿದ ಬಿಎಸ್'ವೈ'ಎಸ್.ಎಂ. ಕೃಷ್ಣರನ್ನು ಬಿಜೆಪಿಗೆ ಬರುವಂತೆ ಮುಕ್ತಕಂಠದಿಂದ ಆಹ್ವಾನಿಸಿದ್ದೇವೆ.ಶೀಘ್ರದಲ್ಲೇ ಎಸ್​​.ಎಂ. ಕೃಷ್ಣ ಅವರು ಬಿಜೆಪಿ ಸೇರುವ ವಿಶ್ವಾಸವಿದೆ. ಅವರು ಕೂಡ ಬಿಜೆಪಿ ಕಡೆ ಒಲವು ತೋರಿಸಿದ್ದಾರೆ. ಬಿಜೆಪಿ ಸೇರುವ ಪೂರ್ಣ ವಿಶ್ವಾಸವಿದೆ. ಮುಂದಿನ ವಿಚಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಮಾತನಾಡಿ, ಕೃಷ್ಣ ಸೇರ್ಪಡೆಯಾದರೆ ಬಿಜೆಪಿಗೆ ಮತ್ತಷ್ಟು ಶಕ್ತಿ ಬರಲಿದೆ.ಹಳೆ ಮೈಸೂರು ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಶಕ್ತಿ ಹೆಚ್ಚಲಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲೆಕ್ಟ್ರಾನಿಕ್‌ ಯುದ್ಧ ನಡೆಸಬಲ್ಲ ಸಮರ್ಥಕ್‌ 16ಕ್ಕೆ ಕಾರವಾರದಲ್ಲಿ ನೌಕಾಪಡೆಗೆ ಸೇರ್ಪಡೆ
Sting Operation in Karnataka: ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು? ಈಗ ಎಲ್ಲಿದ್ದಾರೆ? ಆರ್ ಅಶೋಕ್ ಹೇಳಿಕೆ ಸಂಚಲನ!