ಪ್ರಧಾನಿ ಮೋದಿಯನ್ನು ದತ್ತು ಪಡೆಯಲು ಮುಂದಾದ ಈ ದಂಪತಿ..!

By Suvarna Web DeskFirst Published Feb 24, 2017, 3:59 PM IST
Highlights

‘ನೀವು ಉತ್ತರ ಪ್ರದೇಶದ ದತ್ತು ಮಗ ಎಂದು ಸಾಬೀತುಪಡಿಸುವ ದಾಖಲೆ ನೀಡಿ’ ಎಂದು ನೋಟಿಸ್‌'ನಲ್ಲಿ ತಿಳಿಸಿದ್ದಾರೆ

ಲಖನೌ(ಫೆ.24): ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತಾವು ಉತ್ತರಪ್ರದೇಶದ ದತ್ತು ಪುತ್ರ ಇದ್ದಂತೆ ಎಂದಿದ್ದರು. ಅದಕ್ಕೆಂದೇ ರಾಜ್ಯದ ಪ್ರಮುಖ ನಗರವಾದ ಗಾಜಿಯಾಬಾದ್‌'ನ ದಂಪತಿಯೊಬ್ಬರು ಮೋದಿ ಅವರನ್ನು ದತ್ತು ಪಡೆಯಲು ಹೋಗಿ ನಿರಾಸೆಗೀಡಾಗಿದ್ದಾರೆ.

79 ವರ್ಷದ ಯೋಗೇಂದರ್ ಪಾಲ್ ಸಿಂಗ್ ಹಾಗೂ ಅತರ್ ಕಾಳಿ ಎಂಬ ದಂಪತಿಯೇ ಮೋದಿ ಅವರನ್ನು ದತ್ತು ಪಡೆಯಲು ಯತ್ನಿಸಿದವರು.

ಪ್ರಧಾನಿಯವರು ಇತ್ತೀಚೆಗೆ ಚುನಾವಣಾ ಸಮಾವೇಶವೊಂದರಲ್ಲಿ ನೀಡಿದ ‘ದತ್ತು ಮಗ’ ಹೇಳಿಕೆಯನ್ನು ಗಮನಿಸಿದ ಈ ದಂಪತಿ, ಗಾಜಿಯಾಬಾದ್‌ನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದತ್ತು ಪಡೆಯಲು ಬೇಕಾದ ಅರ್ಜಿ ಸಲ್ಲಿಸಿದರು. ಆದರೆ ಇದಕ್ಕೆ ಫೆ.21ರಂದು ನೋಂದಣಾಧಿಕಾರಿ ಕಚೇರಿಯಿಂದ ‘ತಿರಸ್ಕರಿಸಲಾಗಿದೆ’ ಎಂಬ ಪತ್ರ ಬಂದಿದೆ.

ಇದರಿಂದ ಯೋಗೇಂದರ್ ಈಗ ನೊಂದಿದ್ದು, ಪ್ರಧಾನಿಗೇ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ‘ನೀವು ಉತ್ತರ ಪ್ರದೇಶದ ದತ್ತು ಮಗ ಎಂದು ಸಾಬೀತುಪಡಿಸುವ ದಾಖಲೆ ನೀಡಿ’ ಎಂದು ನೋಟಿಸ್‌'ನಲ್ಲಿ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

click me!