ಪ್ರಧಾನಿಯಿಂದ ಕೊಯಮತ್ತೂರಿನಲ್ಲಿ 112 ಅಡಿ ಬೃಹತ್ ಶಿವನ ಪ್ರತಿಮೆ ಅನಾವರಣ

By Suvarna Web DeskFirst Published Feb 24, 2017, 3:54 PM IST
Highlights

ಮಹಾ ಶಿವರಾತ್ರಿಯಾದ ಇಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ 112 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ. ದಿ ಇಶಾ ಫೌಂಡೇಶನ್ ನವರು ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ನವದೆಹಲಿ (ಫೆ.24): ಮಹಾ ಶಿವರಾತ್ರಿಯಾದ ಇಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ 112 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ. ದಿ ಇಶಾ ಫೌಂಡೇಶನ್ ನವರು ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮೋದಿ ಯೋಗ ಮತ್ತು ಅದರ ಮಹತ್ವಗಳ ಬಗ್ಗೆ ಮಾತನಾಡಿದ್ದಾರೆ. ಭಾರತವು ಜಗತ್ತಿಗೆ ಯೋಗವನ್ನು ಕೊಡುಗೆಯಾಗಿ ನೀಡಿದೆ. ಯೋಗಭ್ಯಾಸ ಮಾಡುವುದರಿಂದ ಎಲ್ಲರೂ ಒಂದೇ  ಎನ್ನುವ ಭಾವ ಮೂಡಿದೆ. ಇಂದು ಇಡೀ ಜಗತ್ತು ಶಾಂತಿಯನ್ನು ಬಯಸುತ್ತಿದೆ. ಕೇವಲ ಯುದ್ಧಗಳಿಂದ, ಕಲಹಗಳಿಂದ ಮಾತ್ರವಲ್ಲ ಒತ್ತಡಗಳಿಂದ ಮುಕ್ತಿ ಬೇಕಾಗಿದೆ. ಯಾವುದೇ ವಿಚಾರ ಹಳೆಯದು ಎಂದು ತಿರಸ್ಕರಿಸುವುದು ಅಷ್ಟೇ ಅಪಾಯಕಾರಿ ಎಂದು ಶಿವನ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದ್ದಾರೆ.  

ಈ ಪ್ರತಿಮೆಯನ್ನು ನಿರ್ಮಿಸಿದ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, ಇದೇ ರೀತಿಯ ಶಿವನ ಮೂರ್ತಿಯನ್ನು ದೇಶದ ಪೂರ್ವ, ಪಶ್ಚಿಮ, ಉತ್ತರ ದಿಕ್ಕಿನಲ್ಲಿ ಇಶಾ ಫೌಂಢೇಶನ್ ಸ್ಥಾಪಿಸಲಿದೆ. ಪೂರ್ವದಲ್ಲಿರುವ ವಾರಣಾಸಿ, ಪಶ್ಚಿಮದಲ್ಲಿರುವ ಮುಂಬೈಯಲ್ಲಿ ಸ್ಥಾಪಿಸಲಿದೆ.

ಶಿವನ 112 ಅಡಿಯಿರುವ ಈ ಪ್ರತಿಮೆಯನ್ನು ವಿನ್ಯಾಸಗೊಳಿಸಲು ಎರಡೂವರೆ ವರ್ಷ ತೆಗೆದುಕೊಂಡಿದೆ. ಆದರೆ ಕೇವಲ 8 ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ. ಶಿವನ ಮುಖವನ್ನು ಉಕ್ಕಿನಿಂದ ಮಾಡಲಾಗಿದೆ. ಒಟ್ಟು 500 ಟನ್ ಭಾರವಿದೆ ಎಂದು ಅಂದಾಜಿಸಲಾಗಿದೆ.

click me!