ಸಾವಿನ ಆಟ 'ಬ್ಲೂ ವೇಲ್'ನ 50 ಭಯಾನಕ ಟಾಸ್ಕ್'ಗಳು! ಮಕ್ಕಳೇ ಏಕೆ ಬಲಿಯಾಗುತ್ತಾರೆ ಗೊತ್ತಾ?

Published : Aug 14, 2017, 02:11 PM ISTUpdated : Apr 11, 2018, 01:00 PM IST
ಸಾವಿನ ಆಟ 'ಬ್ಲೂ ವೇಲ್'ನ 50 ಭಯಾನಕ ಟಾಸ್ಕ್'ಗಳು! ಮಕ್ಕಳೇ ಏಕೆ ಬಲಿಯಾಗುತ್ತಾರೆ ಗೊತ್ತಾ?

ಸಾರಾಂಶ

ಬ್ಲೂ ವೇಲ್ ಚಾಲೆಂಜ್ ಇದು ಆ ಎನ್ನುವುದಕ್ಕಿಂತ ಆತ್ಮಹತ್ಯೆ ಎಂದರೆ ಅತಿ ಸೂಕ್ತವಾಗುತ್ತದೆ. ಯಾಕೆಂದರೆ 50 ಹಂತಗಳಿರುವ ಈ ಆಟವನ್ನು ಪ್ರಾರಂಭಿಸುವಾಗ 'ಜೀವಂತ'ವಾಗಿರುವವರು 50ನೇ ಹಂತ ಮುಗಿಸುವಷ್ಟರಲ್ಲಿ ತಮ್ಮ ಜೀವನದ ಪಯಣವನ್ನೇ ಮುಗಿಸಿರುತ್ತಾರೆ. ಯಾಕೆಂದರೆ ಈ ಆಡದ ಕೊನೆಯ ಹಂತವೇ ಆತ್ಮಹತ್ಯೆ!. ಆಟದಲ್ಲಿ ಗೆಲ್ಲಬೇಕಾದರೆ ತಮ್ಮ ಜೀವವನ್ನೇ ಕಳೆದುಕೊಳ್ಳುವಂತೆ ಮಾಡುವ ಭಯಾನಕ ಆಟವಿದು. ರಷ್ಯಾದ ನ್ಯೂಸ್ ವೆಬ್'ಸೈಟ್ ಒಂದು ಬ್ಲೂ ವೇಲ್'ನಲ್ಲಿ ನೀಡಲಾಗುವ 50 ಟಾಸ್ಕ್'ಗಳ ಕುರಿತಾಗಿ ಬರೆದುಕೊಂಡಿದೆ. ಈ 50 ಟಾಸ್ಕ್'ಗಳನ್ನು ಕೇಳಿದರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ?

ನವದೆಹಲಿ(ಆ.14): ಬ್ಲೂ ವೇಲ್ ಸದ್ಯ ಜಗತ್ತಿನಾದ್ಯಂತ ಹೆತ್ತವರನ್ನು ಬೆಚ್ಚಿ ಬೀಳಿಸಿರುವ ಸಾವಿನ ಆಟ. ಭಾರತಕ್ಕೂ ಲಗ್ಗೆ ಇಟ್ಟಿರುವ ಈ ಆಟ ಈಗಾಗಲೇ ಹಲವಾರು ಮಕ್ಕಳನ್ನು ಬಲಿ ಪಡೆದಿದೆ. ಈ ಭಯಾನಕ ಆಟದ ಮೋಹಕ್ಕೆ ಎಲ್ಲಿ ತಮ್ಮ ಮಕ್ಕಳೂ ಬಲಿಯಾಗುತ್ತಾರೋ ಎಂಬ ಭಯ ಸದ್ಯ ಪೋಷಕರನ್ನು ಕಾಡಲಾರಂಭಿಸಿದೆ. ಇನ್ನು ಈ ಆಟಕ್ಕೆ ಬಲಿಯಾಗುತ್ತಿರುವವರೆಲ್ಲರೂ 16 ವರ್ಷಕ್ಕಿಂತ ಕಿರಿಯರು ಎಂಬುವುದು ಮತ್ತೊಂದು ಆಘಾತಕಾರಿ ವಿಚಾರ. ಇದರಲ್ಲಿ ನೀಡಲಾಗುತ್ತದೆ ಎನ್ನುವ ಆ 50 ಭಯಾನಕ ಟಾಸ್ಕ್'ಗಳು ಯಾವುದು? ಮಕ್ಕಳೇ ಯಾಕೆ ಬಲಿಯಾಗುತ್ತಾರೆ ಎಂಬ ಕುತೂಹಲಕಾರಿ ಪ್ರಶ್ನೆಗಳು ಸಾಮಾನ್ಯವಾಗಿ ಕಾಡುತ್ತವೆ. ಈ ಕುತೂಹಲಕ್ಕೆ ತೆರೆ ಎಳೆಯಲಿವೆ ಈ ಕೆಳ ನೀಡಿರುವ ಮಾಹಿತಿ

ಬ್ಲೂ ವೇಲ್ ಚಾಲೆಂಜ್ ಇದು ಆ ಎನ್ನುವುದಕ್ಕಿಂತ ಆತ್ಮಹತ್ಯೆ ಎಂದರೆ ಅತಿ ಸೂಕ್ತವಾಗುತ್ತದೆ. ಯಾಕೆಂದರೆ 50 ಹಂತಗಳಿರುವ ಈ ಆಟವನ್ನು ಪ್ರಾರಂಭಿಸುವಾಗ 'ಜೀವಂತ'ವಾಗಿರುವವರು 50ನೇ ಹಂತ ಮುಗಿಸುವಷ್ಟರಲ್ಲಿ ತಮ್ಮ ಜೀವನದ ಪಯಣವನ್ನೇ ಮುಗಿಸಿರುತ್ತಾರೆ. ಯಾಕೆಂದರೆ ಈ ಆಡದ ಕೊನೆಯ ಹಂತವೇ ಆತ್ಮಹತ್ಯೆ!. ಆಟದಲ್ಲಿ ಗೆಲ್ಲಬೇಕಾದರೆ ತಮ್ಮ ಜೀವವನ್ನೇ ಕಳೆದುಕೊಳ್ಳುವಂತೆ ಮಾಡುವ ಭಯಾನಕ ಆಟವಿದು.

ರಷ್ಯಾದ ನ್ಯೂಸ್ ವೆಬ್'ಸೈಟ್ ಒಂದು ಬ್ಲೂ ವೇಲ್'ನಲ್ಲಿ ನೀಡಲಾಗುವ 50 ಟಾಸ್ಕ್'ಗಳ ಕುರಿತಾಗಿ ಬರೆದುಕೊಂಡಿದೆ. ಈ 50 ಟಾಸ್ಕ್'ಗಳನ್ನು ಕೇಳಿದರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ?

1. ಬ್ಲೇಡ್'ನಿಂದ ನಿಮ್ಮ ಕೈಯೊಂದರ ಮೇಲೆ 'f57' ಎಂದು ಕುಯ್ದುಕೊಳ್ಳಬೇಕು ಮತ್ತು ಇದರ ಆನ್'ಲೈನ್'ನಲ್ಲೇ ಫೋಟೋ ನಿಮ್ಮ ಮೇಲೆ ನಿಗಾ ಇರಿಸಿರುವ ನಿರ್ವಾಹಕನಿಗೆ ಕಳುಹಿಸಬೇಕು.

2. ಬೆಳಗ್ಗಿನ ಜಾವ 04.30ಕ್ಕೆ ಎದ್ದು, ನಿರ್ವಾಹಕ ಕಳುಹಿಸುವ ಮನಸ್ಸನ್ನು ಕೆಡಿಸುವ ಮತ್ತು ಹಾರರ್ ಸಿನಿಮಾಗಳನ್ನು ನೋಡಬೇಕು.

3. ನಿಮ್ಮ ನರ ಸೇರಿದಂತೆ ಕೈಗಳನ್ನು ಬ್ಲೇಡ್'ನಿಂದ ಮೂರು ಗೆರೆಗಳಲ್ಲಿ ಕುಯ್ದುಕೊಳ್ಳಬೇಕು ಆದರೆ ಗಾಯ ಹೆಚ್ಚು ಆಳವಾಗಿರಬಾರದು. ಬಳಿಕ ಇದರ ಫೋಟೋ ನಿರ್ವಾಹಕನಿಗೆ ಕಳುಹಿಸಬೇಕು.

4. ವೇಲ್ ಮೀನಿನ ಫೋಟೋ ಪೇಪರ್ ಒಂದರ ಮೇಲೆ ಬಿಡಿಸಿ ನಿರ್ವಾಹಕನಿಗೆ ಕಳುಹಿಸಬೇಕು.

5. ಒಂದು ವೇಳೆ ಆಟಗಾರ 'ವೇಲದ ಆಗಲು ತಯಾರಾಗಿದ್ದರೆ', ಕೈಗಳ ಮೇಲೆ YES ಎಂದು ಬ್ಲೇಡ್'ನಿಂದ ಕುಯ್ದುಕೊಳ್ಳಬೇಕು. ವೇಲ್ ಆಗಲು ಇಷ್ಟವಿಲ್ಲದಿದ್ದ ಪಕ್ಷದಲ್ಲಿ ನಿನ್ನನ್ನು ನೀನು ಹಳವಾರು ಬಾರಿ ಕುಯ್ದುಕೊಂಡು ಶಿಕ್ಷಿಸಬೇಕು.

6. ಸೈಫರ್(ಕೋಡ್ ವರ್ಡ್'ಗಳನ್ನು ವಿಚಿತ್ರವಾಗಿ ಬರೆಯುವ ರೀತಿ)ನೊಂದಿಗೆ ಟಾಸ್ಕ್

7. ಕೈಗಳ ಮೇಲೆ 'f40' ಎಂದು ಬ್ಲೇಡ್'ನಿಂದ ಕೊಯ್ದುಕೊಳ್ಳಬೇಕು.

8. '#_iam_whale" ಎಂದು ನಿಮ್ಮ VKontakte ಸ್ಟೇಟಸ್'ನಲ್ಲಿ ಟೈಪ್ ಮಾಡಬೇಕು.

9. ನಿಮ್ಮ ಭಯಗಳನ್ನು ಮೆಟ್ಟಿ ನಿಲ್ಲಬೇಕು

10. ಬೆಳಗ್ಗಿನ ಜಾವ 4.20ಕ್ಕೆ ಎದ್ದು ಮಹಡಿಗೆ ಹೋಗಬೇಕು(ಎಷ್ಟು ಎತ್ತರಕ್ಕೆ ಹೋಗುತ್ತೀರೋ ಅಷ್ಟು ಉತ್ತಮ)

11. ಕೈಗಳ ಮೇಲೆ ಬ್ಲೇಡ್'ನಿಂದ ವೇಲ್ ಮೀನಿನ ಚಿತ್ರ ಚಿಡಿಸಿ ನಿರ್ವಾಹಕರಿಗೆ ಫೋಟೋ ಕಳುಹಿಸಬೇಕು.

12. ದಿನವಿಡೀ ಮನಸ್ಸು ಕೆಡಿಸುವ ಮತ್ತು ಹಾರರ್ ಸಿನಿಮಾಗಳನ್ನು ನೋಡಬೇಕು.

13. ನಿರ್ವಾಹಕ ಕಳುಹಿಸುವ ಹಾಡುಗಳನ್ನು ಕೇಳಬೇಕು.

14. ನಿಮ್ಮ ತುಟಿಗಳನ್ನು ತುಂಡರಿಸಬೇಕು.

15. ನಿಮ್ಮ ಕೈಗಳ ಮೇಲೆ ಹಲವಾರು ಬಾರಿ ಸೂಜಿಯಿಂದ ಚುಚ್ಚಿಕೊಳ್ಳಬೇಕು.

16. ನಿಮಗೆ ನೋವು ನೀಡುವ ಕಾವುದೇ ಕೆಲಸ ಮಾಡಬಹುದು. ಇದರಿಂದ ನೀವು ಅನಾರೋಗಕ್ಕೀಡಾಬೇಕು.

17. ನಿಮಗೆ ಕಾಣುವ ಅತಿ ಎತ್ತರದಲ್ಲಿರುವ ಮಹಡಿಗೆ ತೆರಳಿ, ಮಹಡಿಯ ಅಂಚಿನಲ್ಲಿ ಕೆಲ ಸಮಯ ನಿಂತುಕೊಳ್ಳಬೇಕು.

18. ಸೇತುವೆಯ ತುದಿಯಲ್ಲಿ ನಿಂತುಕೊಳ್ಳಬೇಕು.

19. ಕ್ರೇನ್ ಮೇಲೆ ಹತ್ತಿ ನಿಲ್ಲಬೇಕು. ಸಾಧ್ಯವಿಲ್ಲವೆಂದಾದರೆ ಕಡೆಯ ಪಕ್ಷ ಅದನ್ನು ಹತ್ತಲು ಪ್ರಯತ್ನಿಸಬೇಕು. 

20. ನೀವು ವಿಶ್ವಾಸವಿರಿಸಲು ಅರ್ಹ ವ್ಯಕ್ತಿ ಹೌದೋ ಅಲ್ಲವೋ ಎಂಬುವುದನ್ನು ನಿರ್ವಾಹಕ ಪರೀಕ್ಷಿಸುತ್ತಾರೆ.

21. ಮತ್ತೊಂದು ವೇಲ್(ಮತ್ತೊಬ್ಬ ಆಟಗಾರ ಇಲ್ಲವೇ ನಿರ್ವಾಹಕ)ನೊಂದಿಗೆ ಸ್ಕೈಪ್ ಮೂಲಕ ಮಾತುಕತೆ

22. ಎತ್ತರದಲ್ಲಿರುವ ಮಹಡಿಗೆ ಹೋಗಿ ತುದಿಯಲ್ಲಿ ಕಾಲು ಜೋತು ಹಾಕಿ ಕೆಲ ಸಮಯ ಕುಳಿತುಕೊಳ್ಳಬೇಕು.

23. ಸೈಫರ್(ಕೋಡ್ ವರ್ಡ್'ಗಳನ್ನು ವಿಚಿತ್ರವಾಗಿ ಬರೆಯುವ ರೀತಿ)ನೊಂದಿಗೆ ಮತ್ತೊಂದು ಟಾಸ್ಕ್

24. ರಹಸ್ಯ ಟಾಸ್ಕ್

25. ವೇಲ್(ಬೇರೆ ಆಟಗಾರ)ನೊಂದಿಗೆ ಮೀಟಿಂಗ್

26. ನಿರ್ವಾಹಕ ನೀವು ಸಾಯುವ ದಿನಾಂಕವನ್ನು ತಿಳಿಸುತ್ತಾರೆ. ಇದನ್ನು ನೀವು ಒಪ್ಪಿಕೊಳ್ಳಲೇಬೇಕು

27. ಬೆಳಗ್ಗಿನ ಜಾವ 04.20ಕ್ಕೆ ಎದ್ದು ರೈಲು ಹಳಿಯ ಮೇಲೆ ನಡೆಯಬೇಕು

28. ಇಡೀ ದಿನ ಯಾರೊಂದಿಗೂ ಮಾತನಾಡಬಾರದು

29. 'ನಾನೊಬ್ಬ ವೇಲ್' ಎಂದು ಪ್ರತಿಜ್ಞೆ ಮಾಡಬೇಕು

30-40: ಮುಂದಿನ 10 ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 04.20ಕ್ಕೆ ಎದ್ದು ಹಾರರ್ ಸಿನಿಮಾಗಳನ್ನು ನೋಡಬೇಕು, ನಿರ್ವಾಹಕ ಕಳುಹಿಸುವ ಹಾಡುಗಳನ್ನು ಕೇಳಬೇಕು, ನಿಮ್ಮ ದೇಹದ ಮೇಲೆ ಬ್ಲೇಡ್'ನಿಂದ ಕುಯ್ದುಕೊಳ್ಳಬೇಕು.

50. ಅತಿ ಎತ್ತರದ ಕಟ್ಟಡದಿಂದ ಕೆಳಗೆ ಜಿಗಿಯಬೇಕು. ನಿಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕು.

ಇಂತಹ ಆಟ ಆಡಬೇಕೆಂಬ ಕುತೂಹಲದಲ್ಲಿ ಇಲ್ಲವೇ ಇಂತಹ ಆಟ ನಿಜಕ್ಕೂ ಇದೆಯಾ ಎಂದು ಪರಿಶೀಲಿಸಲು ಈ ಗೇಮ್'ನ್ನು ಬಹುತೇಕ ಮಂದಿ ಹುಡುಕಾಡಿದ್ದಾರೆ. ಆದರೆ ಈ ಆಟ ಗೂಗಲ್ ಮತ್ತು ಫೇಸ್'ಬುಕ್'ನಲ್ಲಿ ನಿಮಗೆ ಸಿಗುವುದಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳನ್ವಯ ಈ ಆಟ Closed group ಮತ್ತು ಪ್ರೈವೇಟ್ ಮೆಸೇಜ್'ಗಳಲ್ಲಿ ಸಿಗುತ್ತದೆ ಎನ್ನಲಾಗಿದೆ.

ಈ ಸಾವಿನ ಆಟಕ್ಕೆ ಬಲಿಯಾದವರೆಲ್ಲರೂ 16 ವಯಸ್ಸಿಗಿಂತ ಕಿರಿಯರು ಎಂಬುವುದು ಬೆಚ್ಚಿ ಬೀಳಿಸುವ ವಿಚಾರ. ಹಾಗಾದ್ರೆ ಮಕ್ಕಳೆ ಏಕೆ ಬಲಿಪಶುಗಳಾಗುತ್ತಾರೆ ಎಂದು ಯೋಚಿಸಿದರೆ ಸಿಗುವುದು ಕೇವಲ ಒಂದೇ ಉತ್ತರ.... ಬಿಡುವಿಲ್ಲದ ಜೀವನದಿಂದ ದಿನದಿಂದ ದಿನಕ್ಕೆ ಮಕ್ಕಳ ಚಟುವಟಿಕೆಗಳ ಮೇಲೆ ಹೆತ್ತವರ ಗಮನ ಕುಂಟಿತವಾಗುತ್ತಿದೆ. ಅಲ್ಲದೇ ಮಕ್ಕಳ ಮೇಲಿನ ಅಂಧ ಪ್ರೀತಿಯಿಂದ ಪ್ರತಿಯೊಂದೂ ಬೇಡಿಕೆಗಳನ್ನು ತಂದೆ ತಾಯಿ ಪೂರೈಸುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ತಂದೆ ತಾಯಿಯ ಪ್ರೀತಿಯೊಂದು ಬಿಟ್ಟು ಉಳಿದೆಲ್ಲವೂ ಸಿಗುತ್ತಿದೆ. ಎಲ್ಲೋ ಒಂದೆಡೆ ಈ ಪ್ರೀತಿಯಿಂದ ದೂರ ಸರಿದ ಮಕ್ಕಳಲ್ಲಿ ಒಂಟಿತನದ ಭಾವನೆ ಮೂಡುವುದರಲ್ಲಿ ಅನುಮಾನ ಮತ್ತು ಆಶ್ಚರ್ಯವಿಲ್ಲ. ಇದೇ ಕಾರಣದಿಂದ ಮಕ್ಕಳ ಗಮನ ಇಂತಹ ಮನ ಕೆಡಿಸುವ ವಿಚಾರಗಳ ಮೇಲೆ ಹೆಚ್ಚಾಗುತ್ತಿದೆ.

ಹೀಗಾಗಿ ಹೆತ್ತವರೂ ತಮ್ಮ ಕೆಲಸಕ್ಕೂ ಕೊಂಚ ಬ್ರೇಕ್ ನೀಡಿ, ಮಕ್ಕಳ ಮೇಲೆ ಗಮನಹರಿಸುವುದು ಅತಿ ಅಗತ್ಯ. ಅವರಿಗೂ ನಿಮ್ಮ ಪ್ರೀತಿಯ ಅಗತ್ಯವಿದೆ. ಕೆಲಸ, ಹಣ ಇಂದು ಇಲ್ಲವಾದರೆ ನಾಳೆ ಬರುತ್ತದೆ ಆದರೆ ಕಳೆದುಕೊಂಡ ಜೀವವನ್ನು ಬದುಕಿಸುವುದು ಅಸಾಧ್ಯ. ಹೀಗಾಗಿ ಮಕ್ಕಳೆಡೆ ನಿಮ್ಮ ಗಮನವಿರಲಿ ಅವರ ಬೇಡಿಕೆಗಳನ್ನು ಪೂರೈಸುವುದಕ್ಕೂ ಮುನ್ನ ಅವರಿಗೆ ನಿಜಕ್ಕೂ ಅದರ ಅಗತ್ಯವಿದೆಯೇ ಎಂಬುವುದನ್ನು ಪರಿಶೀಲಿಸಲು ಮರೆಯದಿರಿ. ಇಲ್ಲವೆಂದಾದರೆ ನಿಮ್ಮ ಮಕ್ಕಳ ಆತ್ಮಹತ್ಯೆಗೆ ನೀವೇ ಕಾರಣರಾದಂತಾಗುತ್ತೀರಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌