ಸಖಿಯರ ಜೊತೆ ರಾಜ ಕ್ವಾರಂಟೈನ್, ನಾಯಿ ಸಾವಿನಿಂದ ನಟಿ ರಮ್ಯಾಗೆ ಡಿಪ್ರೆಶನ್; ಮಾ.30ರ ಟಾಪ್ 10 ಸುದ್ದಿ!

By Suvarna News  |  First Published Mar 30, 2020, 5:13 PM IST

ಕೊರೋನಾ ವೈರಸ್ ಲಕ್ಷಣಗಳಿದ್ದರೆ ಕ್ವಾರಂಟೈನ್ ಅಗತ್ಯ. ಆದರೆ ಇಲ್ಲೊರ್ವ ಮಹರಾಜ ಕೊರೋನಾ ಕ್ವಾರಂಟೈನ್ ನೆಪದಲ್ಲಿ 20 ಸಖಿಯರ ಜೊತೆ ಹೊಟೆಲ್ ರೊಂ ಸೇರಿಕೊಂಡಿದ್ದಾರೆ. ಭಾರತದಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಬೀದಿಗಳಿಯುವವರ ವಿರುದ್ಧ ಕೇಸ್ ದಾಖಲಿಸಲು ನಿರ್ಧರಿಸಲಾಗಿದೆ. ಇಷ್ಟೇ ಅಲ್ಲ ಲಾಕ್‌ಡೌನ್ ವಿಸ್ತರಿಸುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಮದ್ದಿನ ನಾಕಿ ಸಾವಿನಿಂದ ನಟಿ, ನಿರ್ಮಾಪಕಿ ರಮ್ಯಾ ಡಿಪ್ರೆಶನ್‌ಗೆ ಹೋಗಿದ್ದರು ಅನ್ನೋ ಮಾಹಿತಿ ಹೊರಬಿದ್ದಿದೆ. ಮಾರ್ಚ್ 30ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಕೊರೋನಾ ಕುಂಟು ನೆಪ, 20 ಸಖಿಯರ ಜೊತೆ ಸ್ಟಾರ್ ಹೋಟೆಲ್ ಕೋಣೆ ಸೇರಿದ ಮಹಾರಾಜ!...

Latest Videos

undefined

ಕೊರೋನಾ ವೈರಸ್ ವಿಶ್ವದಾದ್ಯಂತ ಹರಡಿಕೊಂಡಿರುವ ಹಿನ್ನೆಲೆ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಕೊರೋನಾ ವೇಗವಾಗಿ ಹರಡುತ್ತಿರುವುದರಿಂದ ಎಲ್ಲಾ ರಾಷ್ಟ್ರಗಳಿಗೂ ಇದೊಂದು ಸಂಕಷ್ಟದ. ಹೀಗಿರುವಾಗ ಜನ ಸಾಮಾನ್ಯರಿಗೆ ಇಂತಹ ಸಮಯದಲ್ಲಿ ತಮ್ಮ ನಾಯಕರ ಬೆಂಬಲ ಅತಿ ಅಗತ್ಯ. ಆದರೆ ಇಲ್ಲೊಬ್ಬ ರಾಜ ಇಂತಹ ಪರಿಸ್ಥಿತಿಯಲ್ಲೂ ಐಷಾರಾಮಿ ಹೋಟೆಲ್‌ನಲ್ಲಿ ಇಪ್ಪತ್ತು ಯುವತಿಯರೊಂದಿಗೆ ಐಸೋಲೇಷನ್‌ನಲ್ಲಿದ್ದಾರೆ.


ಲಾಕ್‌ಡೌನ್‌ ವಿಸ್ತರಣೆ ವದಂತಿ ಅಲ್ಲಗೆಳೆದ ಭಾರತ ಸರ್ಕಾರ!...

ಸದ್ಯ ಭಾರತದಾದ್ಯಂತ 21 ದಿನಗಳ ಲಾಕ್‌ಡೌನ್ ಹೇರಲಾಗಿದೆ. ಜನರೆಲ್ಲಾ ಮನೆಯೊಳಗೇ ಉಳಿದಿದ್ದಾರೆ.  ಹೀಗಿದ್ದರೂ ಕೆಲವರು ರಸ್ತೆಗಿಳಿಯುವ ದುಸ್ಸಾಹಸ ಮಾಡಿದ್ದಾರೆ. ಈ ನಡುವೆ ಲಾಕ್‌ಡೌನ್ ಇನ್ನು ಕೆಲವು ದಿನ ಮುಂದುವರೆಯುತ್ತೆ ಎಂಬ ಸುದ್ದಿಯೂ ಸದ್ದು ಮಾಡಿದೆ. ಹೀಗಿರುವಾಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಂದ್ರ ಸಚಿವರು ಸ್ಪಷ್ಟನೆ ನೀಡಿದ್ದಾರೆ.


ಮನೆಯಿಂದ ಹೊರಬಂದರೆ ಇಂದಿನಿಂದ ಕೇಸು, ನೆಪ ಹೇಳಿದರೆ ಕೇಳೋದಿಲ್ಲ!...

ಕೊರೋನಾ ಸೋಂಕು ಹರಡದಂತೆ ಕಡಿವಾಣ ಹಾಕಲು ಜನಸಂಚಾರ ನಿರ್ಬಂಧಕ್ಕೆ ವಿಧಿಸಿರುವ ಲಾಕ್‌ ಡೌನ್‌ ಅನ್ನು ಸೋಮವಾರದಿಂದ ರಾಜ್ಯವ್ಯಾಪಿ ಮತ್ತಷ್ಟು ಬಿಗಿಗೊಳಿಸಲು ಪೊಲೀಸ್‌ ಮಹಾನಿರ್ದೇಶಕರು ನಿರ್ಧರಿಸಿದ್ದು, ಮನೆಯಿಂದ ಅನಗತ್ಯವಾಗಿ ಹೊರಬಂದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

ಬೀದಿಗಿಳಿಯುತ್ತಿರುವವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಮೋದಿ!

ಕೊರೋನಾ ಭಯವಿಲ್ಲದೇ ಬೀದಿ ಬೀದಿ ಅಲೆಯುತ್ತಿರುವವರಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕೆಲಸ ಮಾಡುವವರಿಗೆ ಬೆನ್ನು ತಟ್ಟಿದ್ದಾರೆ. ಮನ್‌ ಕಿ ಬಾತ್‌ನಲ್ಲಿ ಕೊರೋನಾದಿಂದ ಪಾರಾಗುವ ಮಂತ್ರವನ್ನು ಹೇಳಿದ್ದಾರೆ. ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. 

COVID-19 ಲಾಕ್‌ಡೌನ್ ನಡುವೆ ಈ ದಿನ ಮರೆಯಲು ಸಾಧ್ಯವೆ?...


  
ದೇಶವೇ ಸಂಪೂರ್ಣ ಬಂದ್ ಆಗಿದೆ. ಬಹುತೇಕರು ತಮ್ಮ ತಮ್ಮ ಮನೆಯಲ್ಲಿ ಸ್ವಯಂ ದಿಗ್ಬಂದನಕ್ಕೆ ಒಳಗಾಗಿದ್ದಾರೆ. ಯಾರಿಗೇ ಫೋನ್ ಮಾಡಿದರೂ ಹೇಳುವುದೊಂದೆ ಮಾತು, ಕೊರೋನಾ, ಕೊರೋನಾ, ಏನ್ ಮಾಡ್ಲಿ, ಮನೆಯಿಂದ ಮಾತ್ರ ಹೊರಬರ್ಬೇಡಿ. ಕೊರೋನಾ ಮಹಾಮಾರಿಯ ಆತಂಕ ನಡುವೆಯೂ ಇಂದಿನ ದಿನವನ್ನೂ ಭಾರತೀಯ ಕ್ರಿಕೆಟ್ ಅಭಿಮಾನಿ ಮರೆಯುವುದಿಲ್ಲ. ಕಾರಣ ನಮಗಿಂದು ಯುದ್ಧಗೆದ್ದ ಸಂಭ್ರಮ.

ಮುದ್ದಿನ ನಾಯಿ ಇನ್ನಿಲ್ಲ; ಡಿಪ್ರೆಶನ್‌ಗೆ ಹೋದ ನಟಿ ರಮ್ಯಾ!.

ಮುದ್ದಿನ ನಾಯಿ ಇನ್ನಿಲ್ಲ; ಡಿಪ್ರೆಶನ್‌ಗೆ ಹೋದ ನಟಿ ರಮ್ಯಾ..ಸ್ಯಾಂಡಲ್‌ವುಡ್‌ ಬ್ಯೂಟಿ ಕ್ವೀನ್‌ ರಮ್ಯಾ ನಾಯಿ ಸಾಕಿದ್ರಾ? ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರಾ? ಇಲ್ವಲ್ಲಾ?  ಏನ್‌ ಹೇಳುತ್ತಿದ್ದೀರಾ? ನಿಮ್ಮೆಲ್ಲಾ ಕನ್ಫ್ಯೂಷನ್‌ಗೆ ಇಲ್ಲಿದೆ ಉತ್ತರ...

ನಿರ್ಗತಿಕರಿಗೆ 'ನಟ ಭಯಂಕರ' ಚಿತ್ರ ತಂಡದ ಮಹಾನ್ ಸಹಾಯ!.

ಸ್ಯಾಂಡಲ್‌ವುಡ್‌ ಹೆಸರಾಂತ ನಟ ಕಮ್ ಬಿಗ್ ಬಾಸ್‌ ಸೀಸನ್‌-4  ವಿನ್ನರ್ ಒಳ್ಳೆ ಹುಡುಗ ಪ್ರಥಮ್‌ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಆಹಾರಕ್ಕಾಗಿ ಕಷ್ಟ ಪಡುತ್ತಿರುವ ದಿನಗೂಲಿ ಕಾರ್ಮಿಕರಿಗೆ ದಿನದ ಅಗತ್ಯ ವಸ್ತುಗಳನ್ನು 'ನಟ ಭಯಂಕರ' ಚಿತ್ರ ತಂಡದ ಜೊತೆ ಕೈ ಜೋಡಿಸಿ ವಿತರಿಸುತ್ತಿದ್ದಾರೆ. 

ಲಾಕ್‌ಡೌನ್ ನಡುವೆ ನೂತನ ಹ್ಯುಂಡೈ ವರ್ನಾ ಫೇಸ್‌ಲಿಫ್ಟ್ ಕಾರು ಬಿಡುಗಡೆ!

ಕೊರೋನಾ ವೈರಸ್ ಆತಂಕ, ಭಾರತ ಲಾಕ್‌ಡೌನ್ ನಡುವೆ ಸದ್ದಿಲ್ಲದೆ ಹ್ಯುಂಡೈ ಇಂಡಿಯಾ ನೂತನ ವರ್ನಾ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ. ಹೊಸತನ, ಎಂಜಿನ್ ಅಪ್‌ಗ್ರೇಡ್, ಹೊಸ ಫೀಚರ್ಸ್ ಹಾಗೂ ಆಕರ್ಷಕ ಬೆಲೆಯೊಂದಿಗೆ ನೂತನ ಕಾರು ಬಿಡುಗಡೆಯಾಗಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾ ಇಡುವುದಕ್ಕೆ App; ಬೆಳ್ತಂಗಡಿಯಲ್ಲಿ ಮೊದಲ ಪ್ರಯೋಗ

ಹೋಂ ಕ್ವಾರಂಟೈನ್ ವ್ಯಕ್ತಿಗಳ ಮೇಲೆ ನಿಗಾ ಇಡುವುದಕ್ಕೆ GPS ಆಧಾರಿತ App ವೊಂದನ್ನು ತಯಾರಿಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಪ್ರಯೋಗಿಸಲಾಗುತ್ತಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ App ಬಿಡುಗಡೆ ಮಾಡಲಾಗಿದೆ. ಈ App ಹೇಗೆ ಕರ್ಯ ನಿರ್ವಹಿಸುತ್ತದೆ ಎಂಬುದನ್ನು ಹರೀಶ್ ಪೂಂಜಾ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.  

ಲಾಕ್ ಡೌನ್ ಅವಧಿ ಬೇಗನೆ ಮುಗಿಯಲು ಇಷ್ಟು ಮಾಡಿದರೆ ಸಾಕು!

ಲಾಕ್ ಡೌನ್ ಸರಿಯಾಗಿ ಪಾಲಿಸಿ ಎಂದು ಜನರಿಗೆ ಬೇಡಿಕೊಂಡಿದ್ದು ಆಯಿತು, ಲಾಠಿ ಬೀಸಿದ್ದು ಆಯಿತು ಆದರೆ ಜನರು ಮಾತ್ರ ಇನ್ನು ಅಲ್ಲಲ್ಲಿ ತಿರುಗಾಡುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

click me!