ಪೊಲೀಸರ ಮನೆಗೆ ನುಗ್ಗಿ 9 ಜನರ ಅಪಹರಣ: ಸೇನೆಗೆ ಸವಾಲೊಡ್ಡಿದ ಉಗ್ರರು!

By Web DeskFirst Published Aug 31, 2018, 12:25 PM IST
Highlights

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ! ಪೊಲೀಸರ ಮನೆಗಳಿಗೆ ನುಗ್ಗಿ 9 ಜನರ ಅಪಹರಣ! ಉಗ್ರರ ಮೆನೆ ಧ್ವಂಸಗೊಳಿಸಿದ್ದ ಸೇನೆಯ ಕ್ರಮಕ್ಕೆ ಪ್ರತೀಕಾರ! ಪೊಲೀಸರು, ಸಂಬಂಧಿಕರನ್ನು ಕಿಡ್ನ್ಯಾಪ್ ಮಾಡಿದ ಉಗ್ರರು

ಶ್ರೀನಗರ(ಆ.31): ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, 5 ಪೊಲೀಸರ ಮನೆಗಳಿಗೆ ನುಗ್ಗಿರುವ ಉಗ್ರರು, 9 ಮಂದಿಯನ್ನು ಅಪಹರಣ ಮಾಡಿ ಭದ್ರತಾ ಪಡೆಗಳಿಗೆ ಸವಾಲು ಹಾಕಿದ್ದಾರೆ. 

ಶೋಪಿಯಾನ್, ಕುಲ್ಗಾಮ್, ಅನಂತ್ ನಾಗ್ ಮತ್ತು ಅವಂತಿಪೋರಾದಲ್ಲಿರುವ ಪೊಲೀಸರ ಮನೆಗಳಿಗೆ ನಿನ್ನೆ ತಡರಾತ್ರಿ ರಾತ್ರಿ ನುಗ್ಗಿರುವ ಉಗ್ರರು, 9 ಮಂದಿಯನ್ನು ಅಪಹರಣ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.  

ಅಹಕರಣಕ್ಕೊಳಗಾಗಿರುವವರನ್ನು ಅರಾವಾನಿ ನಿವಾಸಿಯಾಗಿರುವ ಪೊಲೀಸ್ ಮೊಹಮ್ಮದ್ ಮುಕ್ಭೂಲ್ ಭಟ್ ಪುತ್ರ ಜುಬೈರ್ ಅಹ್ಮದ್ ಭಟ್, ಪೊಲೀಸ್ ಅಧಿಕಾರಿ ನಾಝೀರ್ ಅಹ್ಮದ್ ಶಂಕರ್ ಸಹೋದರ ಆರೀಫ್ ಅಹ್ಮದ್ ಸಂಕರ್, ಪೇದೆ ಬಶೀರ್ ಅಹ್ಮದ್ ಮಕ್ರೋ ಪುತ್ರ ಫೈಜಾನ್ ಅಹ್ಮದ್ ಮಕ್ರೋ, ಪೊಲೀಸ್ ಅಬ್. ಸಲಾರ್ ರಥೆರ್ ಪುತ್ರ ಸುಮರ್ ಅಹ್ಮದ್ ರಾಥೆರ್, ಡಿಎಸ್'ಪಿ ಐಜಾಜ್ ಸಹೋದರ ಗೊಹೆರ್ ಅಹ್ಮದ್ ಮಲಿಕ್, ಪೊಲೀಸ್ ಅಧಿಕಾರಿ ಬಷೀರ್ ಅಹ್ಮದ್ ಭಟ್ ಅವರ ಪುತ್ರ ಯಾಸಿರ್ ಅಹ್ಮದ್ ಭಟ್, ಪೊಲೀಸರಾದ ನಾಸೀರ್ ಅಹ್ಮದ್ ಮತ್ತು ಶಬೀರ್ ಅಹ್ಮದ್ ಜರ್ಗರ್, ಆಸೀಫ್ ಅಹ್ಮದ್ ರಾಥೆರ್ ಎಂದು ಗುರುತಿಸಲಾಗಿದೆ. 

ದಕ್ಷಿಣ ಕಾಶ್ಮೀರ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ನಾಲ್ವರು ಪೊಲೀಸರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಉಗ್ರರ ಮನೆಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೆ, ಅವರ ಸಂಬಂಧಿಕರನ್ನು ಬಂಧನಕ್ಕೊಳಪಡಿಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇದೀಗ ಉಗ್ರರು ಪೊಲೀಸರು ಹಾಗೂ ಅವರ ಸಂಬಂಧಿಕರನ್ನು ಅಪಹರಣ ಮಾಡಿದ್ದಾರೆಂದು ಹೇಳಲಾಗುತ್ತಿದೆ. 

click me!