ಸರ್ಜಿಕಲ್‌ ದಾಳಿಯಲ್ಲಿ ನಾಶವಾದ 10 ಉಗ್ರ ನೆಲೆಗಳು ಮತ್ತೆ ಸಕ್ರಿಯ: ಸೇನೆ

By Suvarna Web DeskFirst Published Apr 13, 2017, 8:01 AM IST
Highlights

‘ಈಗ ಚಳಿ ಕಮ್ಮಿಯಾಗತೊಡಗಿದ್ದು, ಹಿಮ ಕರಗು​ತ್ತಿದೆ. ಇದು ಉಗ್ರರನ್ನು ಕಾಶ್ಮೀರದೊಳಗೆ ಕಳಿಸಲು ಪ್ರಶಸ್ತವಾದ ಸಮ​ಯ ಎಂದು ಗಡಿಯಾಚೆಯ ಉಗ್ರ ಸಂಘಟನೆಗಳು ಭಾವಿಸುತ್ತವೆ.'

ನವದೆಹಲಿ: ಜಮ್ಮು-ಕಾಶ್ಮೀರದ ಉರಿ ಸೇನಾನೆಲೆ ಮೇಲೆ ನಡೆದ ದಾಳಿಯ ನಂತರ ಭಾರತ ನಡೆಸಿದ ಸರ್ಜಿಕಲ್‌ ದಾಳಿಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಪಾಕಿಸ್ತಾನಿ ಉಗ್ರರ ನೆಲೆಗಳು ಧ್ವಂಸಗೊಂಡಿದ್ದವು. ಆದರೆ ಈ ನೆಲೆಗಳು ಈಗ ಮತ್ತೆ ಸಕ್ರಿಯವಾಗತೊಡಗಿದ್ದು, ಭಾರತದೊಳಗೆ ಉಗ್ರರನ್ನು ಕಳಿಸಲು ಸಿದ್ಧತೆ ನಡೆಸುತ್ತಿವೆ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಬಾರಾಮುಲ್ಲಾದಲ್ಲಿರುವ 19ನೇ ಸೇನಾ ವಿಭಾಗದ ಮುಖ್ಯಸ್ಥ ಮೇ|ಜ| ಆರ್‌.ಪಿ. ಕಲಿತಾ ಎನ್‌'ಡಿಟೀವಿ ಜೊತೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ. ‘ಈಗ ಚಳಿ ಕಮ್ಮಿಯಾಗತೊಡಗಿದ್ದು, ಹಿಮ ಕರಗು​ತ್ತಿದೆ. ಇದು ಉಗ್ರರನ್ನು ಕಾಶ್ಮೀರದೊಳಗೆ ಕಳಿಸಲು ಪ್ರಶಸ್ತವಾದ ಸಮ​ಯ ಎಂದು ಗಡಿಯಾಚೆಯ ಉಗ್ರ ಸಂಘಟನೆಗಳು ಭಾವಿಸುತ್ತವೆ. ನಾವು ಸರ್ಜಿಕಲ್‌ ದಾಳಿಯಲ್ಲಿ ನಾಶ ಮಾಡಿದ 10 ಉಗ್ರರ ಕ್ಯಾಂಪ್‌ಗಳು ಈಗ ಮತ್ತೆ ಕಾರಾರ‍ಯಚರಣೆ ಆರಂಭಿಸಿವೆ ಎಂದು ತಿಳಿದುಬಂದಿದೆ' ಎಂದಿದ್ದಾರೆ.

(ಸಾಂದರ್ಭಿಕ ಚಿತ್ರ)

click me!