ನಂಜನಗೂಡಿನಲ್ಲಿ ಶ್ರೀನಿವಾಸಪ್ರಸಾದ್'ಗೆ ಹೀನಾಯ ಸೋಲು; ಕಳಲೆ ಜಯಭೇರಿ

By Suvarna Web DeskFirst Published Apr 13, 2017, 7:58 AM IST
Highlights

ಸಿದ್ದರಾಮಯ್ಯ ಮೇಲಿನ ಸಿಟ್ಟಿನಿಂದ ಅವರು ತೊರೆದುಬಂದಿದ್ದರಿಂದ ನಂಜನಗೂಡು ಚುನಾವಣೆಯು ಶ್ರೀನಿವಾಸಪ್ರಸಾದ್ ವರ್ಸಸ್ ಸಿದ್ದರಾಮಯ್ಯ ನಡುವಿನ ಫೈಟ್ ಎನಿಸಿತ್ತು. ಈಗ ಕಳಲೆ ಕೇಶವಮೂರ್ತಿ ಗೆಲುವು ಸಾಧಿಸಿರುವುದರೊಂದಿಗೆ ಕಾಂಗ್ರೆಸ್ ನಿಟ್ಟುಸಿರುಬಿಟ್ಟಿದೆ.

ಮೈಸೂರು(ಏ. 13): ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ವಿ.ಶ್ರೀನಿವಾಸಪ್ರಸಾದ್'ಗೆ ಮುಖಭಂಗವಾಗಿದೆ. ಕಾಂಗ್ರೆಸ್'ನ ಕಳಲೆ ಕೇಶವಮೂರ್ತಿ 21,334 ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ. ಕಳಲೆ 86,212 ಮತ ಪಡೆದರೆ, ಶ್ರೀನಿವಾಸಪ್ರಸಾದ್ 64,878 ಮತಗಳನ್ನು ಪಡೆದಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಎಂದಿಗೂ ಚುನಾವಣೆಯಲ್ಲಿ ಸೋಲನುಭವಿಸಿರಲಿಲ್ಲ. ಈ ಚುನಾವಣೆ ಅವರಿಗೆ ಬಹಳ ಪ್ರತಿಷ್ಠೆಯ ವಿಷಯವಾಗಿತ್ತು. ಮಾಜಿ ಸಚಿವರನ್ನು ಸೇರಿಸಿಕೊಂಡಿದ್ದ ಬಿಜೆಪಿಗೂ ಈ ಚುನಾವಣೆ ಪ್ರತಿಷ್ಠೆಯ ಪಣವಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷ ಬಿಎಸ್'ವೈ ಅವರಿಗೂ ಇದು ಬಹಳ ಮಹತ್ವದ್ದಾಗಿತ್ತು.

ಸಿದ್ದರಾಮಯ್ಯ ಮೇಲಿನ ಸಿಟ್ಟಿನಿಂದ ಅವರು ತೊರೆದುಬಂದಿದ್ದರಿಂದ ನಂಜನಗೂಡು ಚುನಾವಣೆಯು ಶ್ರೀನಿವಾಸಪ್ರಸಾದ್ ವರ್ಸಸ್ ಸಿದ್ದರಾಮಯ್ಯ ನಡುವಿನ ಫೈಟ್ ಎನಿಸಿತ್ತು. ಈಗ ಕಳಲೆ ಕೇಶವಮೂರ್ತಿ ಗೆಲುವು ಸಾಧಿಸಿರುವುದರೊಂದಿಗೆ ಕಾಂಗ್ರೆಸ್ ನಿಟ್ಟುಸಿರುಬಿಟ್ಟಿದೆ.

ನಂಜನಗೂಡು: ಮತಗಳ ವಿವರ
ಕಾಂಗ್ರೆಸ್'ನ ಕಳಲೆ ಕೇಶವಮೂರ್ತಿ: 86,212
ಬಿಜೆಪಿಯ ಶ್ರೀನಿವಾಸಪ್ರಸಾದ್: 64,878
ನೋಟಾ: 1,665

click me!