
ಲಕ್ನೋ : ಉತ್ತರ ಪ್ರದೇಶದ ದೇವಾಲಯವೊಂದರಲ್ಲಿ ಮಹಿಳಾ ಎಂಎಲ್ ಎ ಪ್ರವೇಶಿಸಿದ್ದಕ್ಕೆ ಗಂಗಾ ಜಲವನ್ನು ಹಾಕಿ ಶುದ್ಧ ಮಾಡಿದ ಘಟನೆಯೊಂದು ನಡೆದಿದೆ.
ಇಲ್ಲಿನ ಹಮೀರ್ ಪುರ್ ಪ್ರದೇಶದಲ್ಲಿ ಧರ್ಮ್ ರಿಶಿ ದೇವಾಲಯಕ್ಕೆ ಬಿಜೆಪಿ ಶಾಸಕಿ ಅನುರಾಗಿ ಭೇಟಿ ನೀಡಿದ್ದರಿಂದ ದೇವಾಲಯ ಅಪವಿತ್ರವಾಗಿದೆ ಎಂದು ಶುದ್ಧ ಮಾಡಲಾಗಿದೆ. ಈ ದೇವಾಲಯಕ್ಕೆ ಮಹಿಳಾ ಪ್ರವೇಶವನ್ನು ನಿಷೇಧಿಸಲಾಗಿದ್ದು ಈ ನಿಟ್ಟಿನಲ್ಲಿ ಈ ರೀತಿ ಮಾಡಲಾಗಿದೆ.
ಕಳೆದ ಜುಲೈ 12 ರಂದು ರಥೋತ್ಸವದ ವೇಳೆ ಈ ಮಹಿಳೆ ದೇವಾಲಯವನ್ನು ಪ್ರವೇಶ ಮಾಡಿದ್ದರು. ಶಾಲಾ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ದೇವಾಲಯಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು.
ದೇವಾಲಯಕ್ಕೆ ಮಹಿಳೆ ಪ್ರವೇಶ ಮಾಡಿದ್ದರಿಂದ ಸ್ಥಳೀಯರು ಸೇರಿ ಗಂಗಾ ಜಲ ಹಾಕಿ ಶುದ್ಧ ಮಾಡಿದ್ದಾರೆ. ಅಲ್ಲದೇ ಆಕೆಗೆ ದೇವಾಲಯಕ್ಕೆ ಹೇಗೆ ಪ್ರವೇಶ ನೀಡಲಾಯಿತು ಎನ್ನುವುದನ್ನು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಇದೀಗ ಶಾಸಕಿ ಅನುರಾಗಿ ಪ್ರತಿಕ್ರಿಯೆ ನೀಡಿದ್ದು ಈ ಘಟನೆಯಿಂದ ತಮಗೆ ಅತ್ಯಂತ ನೋವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.