ಏಪ್ರಿಲ್- ಜೂನ್‌ನಲ್ಲಿ ಭಾರೀ ಬಿಸಿಲು!

By Suvarna Web DeskFirst Published Apr 2, 2018, 12:39 PM IST
Highlights

ಈ ಬೇಸಿಗೆಯಲ್ಲಿ ದೇಶದ ಬಹುತೇಕ ಕಡೆಗಳಲ್ಲಿ ಭಾರೀ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ. ಏಪ್ರಿಲ್‌ನಿಂದ- ಜೂನ್ ಅವಧಿಯಲ್ಲಿ ತಾಪಮಾನ ಸಾಮನ್ಯಕ್ಕಿಂತ ಅಧಿಕವಾಗಿರಲಿದೆ

ನವದೆಹಲಿ: ಈ ಬೇಸಿಗೆಯಲ್ಲಿ ದೇಶದ ಬಹುತೇಕ ಕಡೆಗಳಲ್ಲಿ ಭಾರೀ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ. ಏಪ್ರಿಲ್‌ನಿಂದ- ಜೂನ್ ಅವಧಿಯಲ್ಲಿ ತಾಪಮಾನ ಸಾಮನ್ಯಕ್ಕಿಂತ ಅಧಿಕವಾಗಿರಲಿದೆ. ಆದರೆ, ಓಡಿಶಾ, ಆಂಧ್ರ ಕರಾವಳಿ ಮತ್ತು ತೆಲಂಗಾಣದಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಕೊಂಚ ಕಡಿಮೆ ಇರುವ ನಿರೀಕ್ಷೆ ಇದೆ. ಹೀಗಾಗಿ ಮುಂಗಾರು ನಿಗದಿತ ಸಮಯಕ್ಕೆ ಆಗಮಿಸುವ ಸೂಚನೆ ಲಭಿಸಿದೆ. 

ಉತ್ತರ ಮತ್ತು ಕೇಂದ್ರ ಭಾರತದಲ್ಲಿ ಹಿಂದಿನ ವರ್ಷಗಳಂತೆ ಈ ವರ್ಷವೂ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ. ೨೦೧೭ ಇದುವೆರಿಗಿನ ಅತ್ಯಧಿಕ ಬಿಸಿಲಿನ ವರ್ಷ ಎನಿಸಿಕೊಂಡಿದೆ. 2006ರಲ್ಲಿ ರಾಜಸ್ಥಾನದ ಫಾಲ್ಗೋಡಿಯಲ್ಲಿ 51 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಭಾರತದಲ್ಲಿ ದಾಖಲಾದ ಅತ್ಯಧಿಕ ಉಷ್ಣಾಂಶ ಎನಿಸಿಕೊಂಡಿದೆ. ಈ ವರ್ಷ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿದ್ದರೂ, 2017ರ ತಾಪಮಾನಕ್ಕಿಂತ ಕಡಿಮೆ ಯಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

2013ರಿಂದ 2017ರ ಅವಧಿಯಲ್ಲಿ ಓಡಿಶಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಉಂಟಾದ ಭೀಕರ ಉಷ್ಣ ಮಾರುತದಿಂದ 4,624 ಜನರು ಸಾವನ್ನಪ್ಪಿದ್ದರು. 
 

click me!