ಹರೀಶ್ ಜೊತೆ ಚೆನ್ನಾಗಿದ್ದೆ ಎಂದು ನಟಿ ಮೇಘನಾ ಹೇಳಿದ್ದು ಸುಳ್ಳೇ? ಇಲ್ಲಿದೆ ಆಕೆಯ ಸಂಭಾಷಣೆಯ ಸಾಕ್ಷ್ಯ

Published : Nov 06, 2016, 02:16 AM ISTUpdated : Apr 11, 2018, 01:07 PM IST
ಹರೀಶ್ ಜೊತೆ ಚೆನ್ನಾಗಿದ್ದೆ ಎಂದು ನಟಿ ಮೇಘನಾ ಹೇಳಿದ್ದು ಸುಳ್ಳೇ? ಇಲ್ಲಿದೆ ಆಕೆಯ ಸಂಭಾಷಣೆಯ ಸಾಕ್ಷ್ಯ

ಸಾರಾಂಶ

ಕಿರುತೆರೆ ನಟಿ ಮೇಘನಾ ಮೇಲಿನ ಹಲ್ಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಲಿವಿಂಗ್ ಟು ಗೆದರ್​ ಟೈಮ್ನಲ್ಲಿ ಹರೀಶ್ ಜೊತೆ ಎಲ್ಲವೂ ಚೆನ್ನಾಗಿತ್ತು ಅಂತ ನಟಿಮಣಿ ಪೊಲೀಸರ ಬಳಿ ಹೇಳಿದ್ದಳು. ಆದ್ರೆ, ಸುವರ್ಣ ನ್ಯೂಸ್​​​ಗೆ ಸಿಕ್ಕಿರೋ ಆಡಿಯೋ ಕ್ಲಿಪ್​ ಇದೆಲ್ಲವನ್ನೂ ಸುಳ್ಳು ಮಾಡಿದೆ.

ಬೆಂಗಳೂರು(ನ. 06): ತನ್ನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಅಂತ ದೂರು ಕೊಟ್ಟಿದ್ದ ಅರಗಿಣಿ ಧಾರವಾಹಿ ನಟಿ ಮೇಘನಾ ಅಸಲಿ ಬಣ್ಣ ಬಯಲಾಗಿದೆ. ನಿಜಕ್ಕೂ ಹರೀಶ್ ಹಾಗೂ ಮೇಘನಾ ಮಧ್ಯೆ ಎಲ್ಲವೂ ಸರಿಯಿರಲಿಲ್ಲ. ಇದಕ್ಕೆ ಸಾಕ್ಷಿಯಂತಿರುವ ಫೋನ್ ಸಂಭಾಷಣೆಯೊಂದು ಸುವರ್ಣನ್ಯೂಸ್'ಗೆ ಸಿಕ್ಕಿದೆ. ಅವರಿಬ್ಬರ ಮಧ್ಯೆ ನಡೆದ ಆ ಸಂಭಾಷಣೆಯ ಪಠ್ಯ ರೂಪಾಂತರ ಇಲ್ಲಿದೆ.

ಹರೀಶ್(ದಿವಂತ) :  ಹಲೋ

ಮೇಘನಾ(ಕಿರುತೆರೆ ನಟಿ) : ಏನು ?

ಹರೀಶ್ : ಏನ್ ಮಾಡ್ತಿದ್ದೆ?

ಮೇಘನಾ : ನಾನ್ ಏನಾದ್ರೂ ಮಾಡ್ತೀನಿ? ಏನಕ್ಕೆ ಫೋನ್ ಮಾಡ್ದೆ?

ಹರೀಶ್ : ಎಲ್ಲಿದ್ದೀಯಾ?

ಮೇಘನಾ : ಎಲ್ಲಾದ್ರೂ ಇರ್ತೀನಿ, ಏನಕ್ಕೆ ಫೋನ್​ ಮಾಡ್ದೆ ಅಂತ ಹೇಳು?

ಹರೀಶ್ : ನನಗೂ ಹುಷಾರಿಲ್ಲ ಮಲಕ್ಕೊಂಡಿದ್ದೆ..

ಮೇಘನಾ : ಓ ಹೌದಾ..? ತಮಾಷೆ ಮಾಡ್ತಾ ಇದೀಯಾ ಅಂತ ಅಂದುಕೊಂಡಿದ್ದೆ.

ಹರೀಶ್ : ಎಲ್ಲಿದ್ದೀಯಾ..?

ಮೇಘನಾ : ಏನಕ್ಕೆ

ಹರೀಶ್ : ಡೋಂಟ್​ ವರಿ, ನಾನೇನ್​ ಮತ್ತೆ ಬಂದು ನಿನ್​ ಜೊತೆ ಇರ್ತೀನಿ ಅಂತ ಅಂದುಕೋಬೇಡ

ಮೇಘನಾ : ಮತ್ತೆ ಏನಕ್ಕೆ ಫೋನ್ ಮಾಡಿದ್ದೀಯಾ?

ಹರೀಶ್: ರಾತ್ರಿ ಎಷ್ಟೊತ್ತಾದ್ರೂ ಆನ್'ಲೈನ್'ನಲ್ಲೇ ಇರ್ತೀಯಲ್ಲಾ.. ಗಂಟೆಗಟ್ಟಲೆ ವಾಟ್ಸಾಪ್ ಚಾಟಿಂಗ್ ಮಾಡುತಿರ್ತೀಯಲ್ಲಾ..

ಮೇಘನಾ : ನನ್ನ ಫೋನು ನನ್ನ ಇಷ್ಟ ನೀನು ಯಾರು ಕೇಳೋದಿಕ್ಕೆ?

ಹರೀಶ್ : ಅಟ್​ಲೀಸ್ಟ್​ ನಾವ್ ದೂರ ಆಗೋವರೆಗಾದ್ರೂ ಸ್ವಲ್ಪ ಸಮಾಧಾನವಾಗಿ ಇರಮ್ಮ.

ಮೇಘನಾ : ಏನ್ ದೂರ ಆಗೋದು, ನಾನ್ಯಾವತ್ತು ನಿನ್ನನ್ನ ಹತ್ತಿರಾನೇ ತಗೊಂಡಿಲ್ಲ, ದೂರ ಆಗೋಕೆ.

ಹರೀಶ್ : ಹಂಗಂದ್ರೆ ನೀನು ಯಾರ್​ ಜೊತೆನೋ ಕಮಿಟ್ ಆಗಿದ್ದೀಯಾ ಅಂಥಾ ಆಯ್ತು..!

ಮೇಘನಾ : ನಾನ್​ ಯಾರ್​ ಜೊತೆನಾದ್ರೂ ಇರ್ತೀನಿ, ಹೆಂಗಾದ್ರೂ ಲೈಫ್ ಲೀಡ್​ ಮಾಡ್ಕೋತೀನಿ ನೀನ್ಯಾರ್ ನನಗೆ ಕೇಳೋದಿಕ್ಕೆ. ನನಗೆ ಗೊತ್ತಿದೆ ನಾನು ಹೆಂಗೆ ಬದುಕಬೇಕು ಅಂತ. ನಿನ್ ಹತ್ರ ಹೇಳಿಸಿಕ್ಕೊಂಡು ಬದುಕ ಬೇಕಾಗಿರೋದು ಇನ್ನೂ ಬಂದಿಲ್ಲ. ಯಾರ್​ ಜೊತೆನೋ ಆಫೇರ್ ಇಟ್ಟುಕೊಂಡಿದ್ದೀನಿ ಅಂತ, ನೀನು ನನಗೆ ಹೇಳೋಕೆ ಬರಬೇಡ

ಹರೀಶ್ : ಲೇ ನನ್ನ ಪರಿಸ್ಥಿತಿ ಹೆಂಗಿದೆ ಅಂತ ನೀನೇ ನೋಡಿದೀಯಾ..

ಮೇಘನಾ : ಪರಿಸ್ಥಿತಿ, ಏನೇ ಇರಲಿ ಅದು ಸೆಕೆಂಡ್ರಿ.. ನಾವ್ ನೋಡ್ಕೋತೀವಿ ಅಂದ್ರೆ ಅದಕ್ಕೊಂದು ಬೆಲೆ ಇರುತ್ತೆ ಅಲ್ಲಿ. ನಿನ್ನ ನೋಡ್ಕೊಂಡು ನಿನ್ನ ಚಾಕರಿ ಮಾಡ್ಕೊಂಡು ನಿನ್ನಂದ ಅನ್ನಿಸಿಕೊಳ್ಳೋ ಕರ್ಮ ನನಗೆ ಬಂದಿಲ್ಲ.

ಹರೀಶ್ : ಅದನ್ನ ದೂರ ಮಾಡಬೇಕು ಅಂತ ನಾನು ಅಂದುಕೊಂಡಿದ್ದೀನಿ. ನೀನು ಅದನ್ನ ಬೇರೆ ಥರ ಅರ್ಥ ಮಾಡಿಕೊಂಡಿದ್ದೀಯಾ..?

ಮೇಘನಾ : ಓಕೆ. ನಿನಗೆ ಜಸ್ಟಿಫಿಕೇಷನ್ ಕೊಡೋ ನೆಸೆಸಿಟಿ ನನಗಿಲ್ಲ. ನನಗೆ ಗೊತ್ತಿದೆ, ನಾನೇನು ಅಂತ..I know. ಅದು ನಿನ್ನ ಹತ್ರ ಎಸ್ಪೆಷಲಿ ನಿನ್ನ ಹತ್ರ. ನಾನು ಸರಿಯಿದ್ದು ಬೇರೆಯವರಿಗೆ ಹೇಳ್ತೀನಿ ಅಂದ್ರೆ, ಅದ್ರಲ್ಲಿ ಒಂದು ನ್ಯಾಯ ಇರುತ್ತೆ. ನೀನೇ ಸರಿಯಿಲ್ಲ..

-----

ಹರೀಶ್ : ಚುನ್ನಿ ಚೆನ್ನಾಗ್ ಇರ್ತಾನೆ ಬಿಡು. ಓಕೆ ನೀನ್ ಯಾವಾಗ ಹೋಗ್ತಾ ಇದೀಯಾ..? ಊರಲ್ಲಿದೀಯಾ ಎಲ್ಲಿದ್ದೀಯಾ..?

ಮೇಘನಾ : ನಾನು ಊರಲ್ಲೇ ಇದೀನಿ, ನಾಳೇನೆ ಹೊರಡ್ತಾ ಇದೀನಿ

ಹರೀಶ್: ಸರಿ, ಬರೋದು

ಮೇಘನಾ : ಬರೋದು ಲೇಟು

ಹರೀಶ್: ಬರಬಹುದಾ ನಾನು ಒಂದು ದಿನ ಅಥವಾ ಎರಡು ದಿನ

ಮೇಘನಾ :  ಏನಕ್ಕೆ?

ಹರೀಶ್ : ನನ್ನ ಲಗೇಜ್ ಇದೆ, ನನ್ನ ಗಾಡಿಯಿದೆ

ಮೇಘನಾ : ತಗೊಂಡು ಹೋಗು ಯಾರ್ ಬೇಡ ಅಂಥಾರೆ ನಾನ್ ಹೋದ್​ ಮೇಲೆ ಬಾ. ನಾಳೆ ನಾನ್​ ಹೋಗ್ತೀನಿ. ನಾಡಿದ್ದು ಬಾ ತಗೊಂಡು ಹೋಗ್ತಾ ಇರು. ಬೀಗ ಅಲ್ಲಿ ಕೆಳಗಿನ ಮನೆಗೆ ಕೊಟ್ಟು ಹೋಗು.

ಹರೀಶ್ : ಸೋ ನನ್ನಿಂದ ದೂರ ಆಗ್ಬೇಕು ಅಂತ ಡಿಸೈಡ್ ಆಗ್ಬಿಟ್ಟಿದ್ದೀಯಾ ಹಾಗಾದ್ರೆ..

ಮೇಘನಾ : ಆಫ್​ ಕೋರ್ಸ್​.. ನಿನ್ ಹತ್ರ ಅನ್ನಿಸಿಕೊಂಡು ಬದುಕೋ ನೆಸೆಸಿಟಿ ನನಗೆ ಬಂದಿಲ್ಲ. Because ನನ್ನ ಕಾಲ ಮೇಲೆ ನಾನು ನಿಂತಿರೋಳು. ನಿನಗೆ ಯಾವತ್ತೂ ಡಿಪೆಂಡ್​ ಆಗಿ ಬದುಕಿರೋಳಲ್ಲ. 

ಹರೀಶ್ : ಓಕೆ ಓಕೆ ಓಕೆ.. ನೋಡೋಣ. ನಾನು ಟು, ಥ್ರೀ ಡೇಸ್ ಇದ್ದು ಸ್ವಲ್ಪ ದುಡ್ಡಿನದು ಲೆಕ್ಕಾಚಾರ ಮಾಡಿಕೊಳ್ಳೋದಿತ್ತು ಅದಕ್ಕೋಸ್ಕರ.

ಮೇಘನಾ : ಮಾಡ್ಕೋ ಯಾರ್ ಬೇಡ ಅಂದ್ರು

ಹರೀಶ್ : ನನಗೆ ಅಲ್ಲಿ ಇರೋದಿಕ್ಕೆ ಪ್ರಾಬ್ಲಮ್ ಆಗಿದೆ ಅಲ್ವಾ ಅದಕ್ಕೆ. ಅದನ್ನ ಸೇಲ್ ಮಾಡಿ ನಾನ್​ ಬೇರೆ ಮನೆ ಮಾಡ್ಕೋ ಬೇಕು ಅದಕ್ಕೆ

ಮೇಘನಾ : ಮಾಡ್ಕೋ...

ಹರೀಶ್: ಸೋ ಟು ಥ್ರಿ ಡೇಸ್ ಇರ್ತೀನಿ ಅಲ್ಲಿ ಅದಕ್ಕೆ.. ವಿತ್ ಯೂವರ್ ಪರ್ಮಿಷನ್...  

ಮೇಘನಾ : ನಾನ್ ಹೋದ್ಮೇಲೆ ಬಂದು ಏನಾದ್ರೂ ಮಾಡ್ಕೋ...

ಹರೀಶ್ : ಓಕೆ.. ಥ್ಯಾಂಕ್ಯೂ...

ಇದು ಹರೀಶ್​ ಮತ್ತು ಮೇಘನ ನಡುವಿನ ಫೋನ್ ಸಂಭಾಷಣೆ. ಕೊನೆಯ ದಿನಗಳಲ್ಲಿ ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದಿಕೆ ಇದೇ ಸಾಕ್ಷಿ. ಇದು ಮೇಘನಾ ಮೇಲಿನ ಹಲ್ಲೆ ಪ್ರಕರಣದಲ್ಲಿ ಯಾವ ಪಾತ್ರ ವಹಿಸುತ್ತೆ ಎಂಬುದನ್ನು ಕಾದು ನೋಡಬೇಕು.

ವರದಿ: ರಮೇಶ್​ ಕೆ.ಹೆಚ್., ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮರ್ಡರ್ ಕೇಸ್ ಟ್ರಯಲ್ ಶುರು.. ಡಿಜಿಪಿ ಅಲೋಕ್ ಬಳಿ ದರ್ಶನ್ ಹೇಳಿದ್ದೇನು? ಸೀಕ್ರೆಟ್ ಇಲ್ಲಿದೆ..
ಬುರ್ಖಾ ಹಾಕದೆ ಹೊರಗೆ ಹೋಗಿದ್ದಕ್ಕೆ ಪತ್ನಿ, ಇಬ್ಬರು ಹೆಣ್ಮಕ್ಕಳ ಕೊಂದ ಪಾಪಿ, ಮನೆಯ ಅಂಗಳದಲ್ಲಿ ಹೂತುಹಾಕಿದ!