ಕಿಕಿ ದೇಶದಲ್ಲಿ ಬ್ಯಾನ್ - ತೆಲಂಗಾಣದವರಿಗೆ ಜನ ಫ್ಯಾನ್

By Web DeskFirst Published Aug 6, 2018, 11:28 AM IST
Highlights

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಲಂಬಿಡಿಪಳ್ಳಿಯ ಗೀಲಾ ಅನಿಲ್ ಕುಮಾರ್ (24) ಹಾಗೂ ಅವರ ಅಣ್ಣ ಪಿಳ್ಳಿ ತಿರುಪತಿ (28) ಅವರೇ ಈ ಸವಾಲು ಸ್ವೀಕರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಲಂಬಡಿಪಳ್ಳಿ (ತೆಲಂಗಾಣ): ಇತ್ತೀಚೆಗೆ ‘ಕೀ ಕಿ ಚಾಲೆಂಜ್’ ಎಂಬ ಅಪಾಯ ಕಾರಿ ‘ಸವಾಲಿನ ಆಟ’ವೊಂದು ಅನೇಕ ಜನರ ಪ್ರಾಣಕ್ಕೆ ಎರವಾದ ಪ್ರಸಂಗಗಳು ನಡೆದಿವೆ. 
ಆದರೆ ತೆಲಂಗಾಣದ ರೈತ ಸೋದರರಿಬ್ಬರು ವಿಭಿನ್ನವಾಗಿ ಮತ್ತು ಸುರಕ್ಷಿತವಾಗಿ ‘ಕೀ ಕಿ ಚಾಲೆಂಜ್’ ಆಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗದ್ದೆಯಲ್ಲಿ ಎತ್ತುಗಳೊಂದಿಗೆ ಉಳುಮೆ ಮಾಡುತ್ತ ಇವರು ‘ಕಿಕಿ ಚಾಲೆಂಜ್’ ಸ್ವೀಕರಿಸುವ ದೃಶ್ಯಗಳು ವೈರಲ್ ಆಗಿವೆ.

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಲಂಬಿಡಿಪಳ್ಳಿಯ ಗೀಲಾ ಅನಿಲ್ ಕುಮಾರ್ (24) ಹಾಗೂ ಅವರ ಅಣ್ಣ ಪಿಳ್ಳಿ ತಿರುಪತಿ (28) ಅವರೇ ಈ ಸವಾಲು ಸ್ವೀಕರಿಸಿ ಮೆಚ್ಚುಗೆಗೆ ಪಾತ್ರರಾದರು.

ವಿಭಿನ್ನವಾಗಿ ಹಾಗೂ ಸುರಕ್ಷಿತವಾಗಿ ಈ ಚಾಲೆಂಜ್ ಆಟ ಆಡಬೇಕೆಂದು ನಿರ್ಧರಿಸಿದ ಅನಿಲ್ ಹಾಗೂ ತಿರುಪತಿ ಅವರು ಸಂಪೂರ್ಣ ಕೆಸರಿನಿಂದ ತುಂಬಿದ್ದ ಗದ್ದೆಯಲ್ಲಿ ಎತ್ತುಗಳೊಂದಿಗೆ ನೇಗಿಲು ಹೊಡೆಯುತ್ತ ‘ಇನ್ ಮೈ ಫೀಲಿಂಗ್’ ಹಾಡಿಗೆ ನೃತ್ಯ ಮಾಡುತ್ತ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. ಬಳಿಕ ತಮ್ಮ ತಂತ್ರಜ್ಞಾನ-ಸ್ನೇಹಿ ಗೆಳೆಯ ಶ್ರೀಕಾಂತ್ ನೆರವಿನೊಂದಿಗೆ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂಗೆ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.ಈಗ ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಜನರು ‘ರೈತರ ಕಿಕಿ ಚಾಲೆಂಜ್’ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮೊದಲು ಈ ರೈತ ಸೋದರರು ಚಾಲೆಂಜ್ ಸ್ವೀಕರಿಸುವ ದೃಶ್ಯ ಹರಿದಾಡಿದಾಗ ಇವರಾರು ಎಂಬುದು ತಿಳಿದಿರಲಿಲ್ಲ.ಕೊನೆಗೆ ಮಾಧ್ಯಮಗಳು ಇದರ ಜಾಡು ಹಿಡಿದು ಹೊರಟಾಗ ಲಂಬಿಡಿಪಳ್ಳಿಯ ಈ ಅಣ್ಣ-ತಮ್ಮಂದಿರು ‘ಪತ್ತೆ’ಯಾಗಿದ್ದಾರೆ

click me!