ಒಮ್ಮೆ ಚಾರ್ಜ್ ಮಾಡಿದರೆ 800 ಕಿ.ಮೀ ಸಂಚಾರ

By Web DeskFirst Published Aug 6, 2018, 11:02 AM IST
Highlights

ಚಂದ್ರಬಾಬು ನಾಯ್ಡು ವಿಶ್ವದ ಮೊದಲ ಥರ್ಮಲ್ ಬ್ಯಾಟರಿ ಘಟಕ ಸೋಮವಾರ ಲೋಕಾರ್ಪಣೆ ಗೊಳಿಸಲಿದ್ದಾರೆ. ಭಾರತ್ ಎನರ್ಜಿ ಸ್ಟೋರೇಜ್ ಟೆಕ್ನಾಲಜಿ (ಬೆಸ್ಟ್) ಎಂಬ ಕಂಪನಿ ಈ ಬ್ಯಾಟರಿಯನ್ನು ತಯಾರಿಸಿದೆ. ದೂರಸಂಪರ್ಕ, ವಾಣಿಜ್ಯೋ ದ್ಯಮ, ಎಲೆಕ್ಟ್ರಿಕ್ ವಾಹನ ಹಾಗೂ ಹೆದ್ದಾರಿ ಚಾರ್ಜಿಂಗ್ ಕೇಂದ್ರಗಳಿಗೆ ನೆರವಾಗಲಿದೆ. 

ಅಮರಾವತಿ: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ವಿಶ್ವದ ಮೊದಲ ಥರ್ಮಲ್ ಬ್ಯಾಟರಿ ಘಟಕ ಸೋಮವಾರ ಲೋಕಾರ್ಪಣೆ ಗೊಳಿಸಲಿದ್ದಾರೆ. ಭಾರತ್ ಎನರ್ಜಿ ಸ್ಟೋರೇಜ್ ಟೆಕ್ನಾಲಜಿ (ಬೆಸ್ಟ್) ಎಂಬ ಕಂಪನಿ ಈ ಬ್ಯಾಟರಿಯನ್ನು ತಯಾರಿಸಿದೆ. ದೂರಸಂಪರ್ಕ, ವಾಣಿಜ್ಯೋ ದ್ಯಮ, ಎಲೆಕ್ಟ್ರಿಕ್ ವಾಹನ ಹಾಗೂ ಹೆದ್ದಾರಿ ಚಾರ್ಜಿಂಗ್ ಕೇಂದ್ರಗಳಿಗೆ ನೆರವಾಗಲಿದೆ. 

ಈ ಕಂಪನಿ 660 ಕೋಟಿ ರು. ವೆಚ್ಚದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲಿದ್ದು, ಒಮ್ಮೆ ಚಾರ್ಜ್ ಮಾಡಿದರೆ 800 ಕಿ.ಮೀ. ದೂರ ಕ್ರಮಿಸುವ ವಿದ್ಯುತ್ ಬಸ್ ಉತ್ಪಾದನೆಗೂ ಮುಂದಾಗಿದೆ. ಬೆಸ್ಟ್ ಕಂಪನಿಯ ಆಂಧ್ರಪ್ರದೇಶ ಘಟಕ 2019 ರ ಮೇನಲ್ಲಿ ವಾಣಿಜ್ಯ ಉತ್ಪಾದನೆ ಆರಂಭಿಸಲಿದೆ. ಸದ್ಯ ಲೀಥಿಯಂ ಆಧರಿತ ಬ್ಯಾಟರಿಗಳನ್ನು ಜಗತ್ತಿನಾದ್ಯಂತ ಬಳಸಲಾಗುತ್ತಿದೆ. ಅವು ಕಡಿಮೆ ಜೀವಿತಾವಧಿ ಹೊಂದಿರುವುದರಿಂದ ವೆಚ್ಚ ಅಧಿಕವಾಗಿದೆ. 

ಹೆಚ್ಚು ಶಕ್ತಿಯನ್ನೂ ಅವು ಶೇಖರಿಸಿಕೊಳ್ಳುವುದಿಲ್ಲ. ಅಲ್ಲದೆ ನಿರ್ದಿಷ್ಟ ತಾಪಮಾನದಲ್ಲೇ ಅವನ್ನು ಸಂಗ್ರಹಿಸಿಡ ಬೇಕಾಗುತ್ತದೆ. ಬೆಸ್ಟ್ ಕಂಪನಿ ಅಭಿವೃದ್ಧಿಪಡಿಸಿರುವ ಥರ್ಮಲ್ ಬ್ಯಾಟರಿಗೆ ಡಾ| ಪ್ಯಾಟ್ರಿಕ್ ಗ್ಲಿನ್ ಅವರು 2016 ರಲ್ಲಿ  ಪೇಟೆಂಟ್ ಪಡೆದುಕೊಂಡಿ ದ್ದಾರೆ. ಹೆಚ್ಚು ಜೀವಿತಾವಧಿ ಹೊಂದಿರುವುದಲ್ಲದೆ, ಅಧಿಕ ಸಂಗ್ರಹ ಸಾಮರ್ಥ್ಯ ಈ ಬ್ಯಾಟರಿಗಳಿಗೆ ಇದೆ. ಶೇ.100 ರಷ್ಟು ಪರಿಸರಸ್ನೇಹಿಯಾಗಿದೆ. 

click me!