ನನ್ನ ಸಭೆಯಲ್ಲಿ ಹೆಣ್ಮಕ್ಳು ಮುಂದಿರಬೇಕು: ತೇಜ್ ಪ್ರತಾಪ್!

Published : Jul 06, 2019, 03:07 PM ISTUpdated : Jul 06, 2019, 03:08 PM IST
ನನ್ನ ಸಭೆಯಲ್ಲಿ ಹೆಣ್ಮಕ್ಳು ಮುಂದಿರಬೇಕು: ತೇಜ್ ಪ್ರತಾಪ್!

ಸಾರಾಂಶ

ಹೆಣ್ಮಕ್ಳಿದ್ದರೆ ತೇಜ್ ಪ್ರತಾಪ್ ಭಾಷಣ ಮಾಡೋದಂತೆ| ‘ಪ್ರತಿ ಸಭೆಯಲ್ಲೂ ಮಹಿಳೆಯರು ಮುಂದಿನ ಸಾಲಿನಲ್ಲಿರಬೇಕು’| RJD ಯುವನಾಯಕ ತೇಜ್ ಪ್ರತಾಪ್ ಯಾದವ್ ಫರ್ಮಾನು| RJD ಸಂಸ್ಥಾಪನಾ ದಿನಾಚರಣೆ ವೇಳೆ ತೇಜ್ ಪ್ರತಾಪ್ ಭಾಷಣ| ಮಹಿಳಾ ಸಬಲೀಕರಣಕ್ಕೆ ಪಕ್ಷ ಉತ್ತೇಜನ ನೀಡುತ್ತದೆ ಎಂದ ತೇಜ್ ಪ್ರತಾಪ್|

ಪಾಟ್ನಾ(ಜು.06): ತಮ್ಮ ಭಾಷಣದ ವೇಳೆ ಮಹಿಳೆಯರು ಮುಂದಿನ ಸಾಲಿನಲ್ಲಿ ಕುಳಿತ ಪರಿಣಾಮ, ಸಭೆಯನ್ನು ಮೊಟಕುಗೊಳಿಸಿ ಸ್ವಾಮಿ ಜ್ಞಾನವತ್ಸಲ ಹೊರ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ.

ಆದರೆ RJD ಯುವ ನಾಯಕ, ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಮಾತ್ರ ಇದಕ್ಕೆ ತದ್ವಿರುದ್ಧ.

‘ನನ್ನ ಪ್ರತಿ ಸಮಾರಂಭದಲ್ಲೂ ಮಹಿಳೆಯರು ಮುಂದಿನ ಸಾಲಿನಲ್ಲಿ ಕುಳಿತಿರಬೇಕು..’ಇದು RJD ಯುವ ನಾಯಕ ತೇಜ್ ಪ್ರತಾಪ್ ಯಾದವ್ ಹೊರಡಿಸಿರುವ ಫರ್ಮಾನು.

ಹೌದು, RJD ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ತೇಜ್ ಪ್ರತಾಪ್, ಮಹಿಳಾ ಸಬಲೀಕರಣಕ್ಕೆ ಪಕ್ಷ ಒತ್ತು ನೀಡುತ್ತದೆ ಎಂದು ಹೇಳಿದರು.

ಇದೇ ಕಾರಣಕ್ಕೆ ತಂದೆ ಲಾಲೂ  ತಮ್ಮ ಪ್ರತಿ ಸಭೆಯಲ್ಲೂ ಮಹಿಳೆಯರಿಗೆ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಅದೇ ರೀತಿ ತಮ್ಮ ಪ್ರತಿ ಸಭೆಯಲ್ಲೂ ಮಹಿಳೆಯರು ಮುಂದಿನ ಸಾಲಿನಲ್ಲಿ ಕುಳಿತಿರಬೇಕು ಎಂಬುದು ತಮ್ಮ ಆಶಯ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ