
ಪಾಟ್ನಾ[ಜು.24]: ಶ್ರಾವಣ ಮಾಸ ಆರಂಭವಾಗಿದ್ದು, ಶಿವ ಭಕ್ತರು ಭಗವಂತನ ಆರಾಧನೆ ಮಾಡುತ್ತಾರೆ ಹಾಗೂ ವ್ರತ ಕೈಗೊಳ್ಳುತ್ತಾರೆ. ಹೀಗಿರುವಾ ಬಿಹಾರದ ಆರ್‌ಜೆರಡಿ ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಶಿವನ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗಳು ಸದ್ಯ ಭಾರೀ ವೈರಲ್ ಆಗುತ್ತಿವೆ.
ಹೌದು 30 ವರ್ಷದ ತೇಜ್ ಪ್ರತಾಪ್ ಯಾದವ್ ಪಾಟ್ನಾದ ಶಿವನ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ತನ್ನ ತಂದೆಗಾಗಿ ನಾನು ಈ ಪೂಜೆ ನಡೆಸಿರುವುದಾಗಿ ತೇಜ್ ಹೇಳಿದ್ದಾರೆ. ಅಂಗರಕ್ಷಕರೊಂದಿಗೆ ದೇಗುಲಕ್ಕೆ ತೆರಳಿದ ತೇಜ್ ಪ್ರತಾಪ್ ಯಾದವ್ ಶಿವನಿಗೆ ಹಾಲು ಹಾಗೂ ಗಂಗಾಜಲದ ಅಭಿಷೇಕ ಮಾಡಿದ್ದಾರೆ.
ತೇಜ್ ಪ್ರತಾಪ್ ಯಾದವ್ ಹೀಗೆ ವೇಷ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೃಷ್ಣ ವೇಷಧಾರಿಯಾಗಿ ಕೊಳಲನ್ನು ಊದುತ್ತಾ ಗೋವುಗಳೊಂದಿಗಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.