ತೇಜ್ ಬಹದ್ದೂರ್ ಯಾದವ್ ಮದ್ಯ ವ್ಯಸನಿಯಾಗಿದ್ದ: ಸತ್ಯ ಬಿಚ್ಚಿಟ್ಟ ಯೋಧನ ವಿರುದ್ಧವೇ ಗಂಭೀರ ಆರೋಪ!

By Suvarna Web DeskFirst Published Jan 10, 2017, 8:31 AM IST
Highlights

ಭಾರತೀಯ ಗಡಿಯಲ್ಲಿ ಕೆಲಸ ನಿರ್ವಹಿಸುವ ಯೋಧರಿಗೆ ನೀಡುತ್ತಿರುವ ಕಳಪೆ ಊಟ'ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಯೋಧ ಮದ್ಯ ವ್ಯಸನಿ ಅಂತ ಗಡಿ ಭದ್ರತಾ ಪಡೆ ಆರೋಪಿಸಿದೆ.

ನವದೆಹಲಿ(ಜ.10): ಭಾರತೀಯ ಗಡಿಯಲ್ಲಿ ಕೆಲಸ ನಿರ್ವಹಿಸುವ ಯೋಧರಿಗೆ ನೀಡುತ್ತಿರುವ ಕಳಪೆ ಊಟ'ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಯೋಧ ಮದ್ಯ ವ್ಯಸನಿ ಅಂತ ಗಡಿ ಭದ್ರತಾ ಪಡೆ ಆರೋಪಿಸಿದೆ.

ಯೋಧ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಸ್ಪಷ್ಟನೆ ನೀಡಿರುವ ಬಿಎಸ್‌ಎಫ್‌, ವೀಡಿಯೋದಲ್ಲಿರುವ ಸೈನಿಕ ಮದ್ಯ ವ್ಯಸನಿಯಾಗಿದ್ದು, ಸೇನೆಗೆ ಸೇರಿದಾಗಿನಿಂದಲೂ ಆತನಿಗೆ ನಿರಂತರ ಕೌನ್ಸಿಲಿಂಗ್ ಮಾಡಲಾಗುತ್ತಿದೆ ಅಂತ ವಿವರಿಸಿದೆ. ಅಲ್ಲದೇ, ಪೂರ್ವಾನುಮತಿಯಿಲ್ಲದೇ ಆತ ಸೇವೆಗೆ ಗೈರು ಹಾಜರಾಗುತ್ತಾನೆ.  ಹಿರಿಯ ಅಧಿಕಾರಿಗಳೊಂದಿಗೂ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಈ ಕಾರಣದಿಂದಲೇ ತೇಜ್ ಬಹೂದ್ದೂರ್ ಬಹುತೇಕ ಹಿರಿಯ ಅಧಿಕಾರಿಗಳ ಕಣ್ಗಾವಲಿನಲ್ಲಿಯೇ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸುವಂತೆ ನಿಯೋಜಿಸಲಾಗಿದೆ' ಅಂತ ಬಿಎಸ್​ಎಫ್​ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ

29 ಬೆಟಾಲಿಯನ್ ಸಶಸ್ತ್ರ ಸೀಮಾ ಬಲ್‌ನ 29 ವರ್ಷದ ಯೋಧ ತೇಜ್ ಬಹದ್ದೂರ್ ಯಾದವ್, ಯೋಧರಿಗೆ ನೀಡುತ್ತಿರುವ ಕಳಪೆ ಆಹಾರದ ಬಗ್ಗೆ  ಫೇಸ್‌ಬುಕ್‌ನಲ್ಲಿ ವಿಡಿಯೋ ಹಾಕಿದ್ದರು. ಭ್ರಷ್ಟಾಚಾರದಿಂದ ವ್ಯವಸ್ಥೆ ಹದಗೆಟ್ಟಿದೆ. ದೇಶದ ಗಡಿ ಕಾಯುವ ಸೈನಿಕರಿಗೆ ನೀಡುವ ಕಳಪೆ ಆಹಾರ ನೀಡಲಾಗುತ್ತಿದೆ.  ಈ ಬಗ್ಗೆ ಪ್ರಧಾನಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.

For such reasons, individual has served mostly in headquarters under supervision of some dedicated superior officer: BSF

— ANI (@ANI_news) January 9, 2017
click me!