ಫರೀದಾಬಾದ್'ನಲ್ಲಿ ಬಿಜೆಪಿ ಹೊಸ ಇತಿಹಾಸ; ಕಾಂಗ್ರೆಸ್ ವಾಶ್'ಔಟ್

By Suvarna Web DeskFirst Published Jan 10, 2017, 7:15 AM IST
Highlights

ನೋಟು ಅಮಾನ್ಯ ಕ್ರಮದ ಬಳಿಕ ವಿವಿಧೆಡೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಗಮನಾರ್ಹವೆನಿಸಿದೆ. ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಚಂಡೀಗಢ ಮೊದಲಾದೆಡೆ ಸ್ಥಳೀಯ ಚುನಾವಣೆಗಳಲ್ಲಿ ಕೇಸರಿಪಾಳಯ ಅದ್ವಿತೀಯ ಪ್ರದರ್ಶನ ನೀಡಿದೆ.

ಚಂಡೀಗಢ(ಜ. 10): ಹರಿಯಾಣದ ಫರೀದಾಬಾದ್ ನಗರಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಪಾಲಿಕೆಯ 40 ಕ್ಷೇತ್ರಗಳಲ್ಲಿ ಕೇಸರೀಪಾಳಯ ಮೂವತ್ತರಲ್ಲಿ ಜಯಭೇರಿ ಭಾರಿಸಿದೆ. ಉಳಿದ 10 ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕಂಪ್ಲೀಟ್ ವಾಶೌಟ್ ಆಗಿವೆ.

ಪಕ್ಷದ ಅಭಿವೃದ್ಧಿಪರ ಸಿದ್ಧಾಂತಕ್ಕೆ ಸಿಕ್ಕ ಜಯ ಇದೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರಕಾರದ ನೋಟು ಅಮಾನ್ಯ ಕ್ರಮಕ್ಕೆ ಸಿಕ್ಕ ಬೆಂಬಲವೂ ಇದಾಗಿದೆ ಎಂದವರು ಹೇಳಿದ್ದಾರೆ.

click me!