ಸೀಟಿಗಾಗಿ ಜಗಳ, ಬೀಫ್ ವದಂತಿ: ಬರ್ಬರವಾಗಿ ಥಳಿಸಿ ಓರ್ವನ ಹತ್ಯೆ

Published : Jun 24, 2017, 05:03 PM ISTUpdated : Apr 11, 2018, 01:11 PM IST
ಸೀಟಿಗಾಗಿ ಜಗಳ, ಬೀಫ್ ವದಂತಿ: ಬರ್ಬರವಾಗಿ ಥಳಿಸಿ ಓರ್ವನ ಹತ್ಯೆ

ಸಾರಾಂಶ

 ರೈಲಿನಲ್ಲಿ ಸೀಟ್ ವಿಚಾರವಾಗಿ ಆರಂಭವಾದ ಜಗಳವು ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಹರ್ಯಾಣದ ಪಲ್ವಾಲ್’ನಲ್ಲಿ ನಡೆದಿದೆ. ಜುನೈದ್ ಹಾಗೂ ಆತನಿಬ್ಬರು ಸಹೋದರರು ಶುಕ್ರವಾರ ದೆಹಲಿಯಲ್ಲಿ ಈದ್ ಖರೀದಿ ಮುಗಿಸಿ ತಮ್ಮ ಊರು ಬಲ್ಲಾಬ್’ಗಢಕ್ಕೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಪಲ್ವಾಲ್, ಹರ್ಯಾಣ:  ರೈಲಿನಲ್ಲಿ ಸೀಟ್ ವಿಚಾರವಾಗಿ ಆರಂಭವಾದ ಜಗಳವು ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಹರ್ಯಾಣದ ಪಲ್ವಾಲ್’ನಲ್ಲಿ ನಡೆದಿದೆ.

ಜುನೈದ್ ಹಾಗೂ ಆತನಿಬ್ಬರು ಸಹೋದರರು ಗುರುವಾರ ದೆಹಲಿಯಲ್ಲಿ ಈದ್ ಖರೀದಿ ಮುಗಿಸಿ ತಮ್ಮ ಊರು ಬಲ್ಲಾಬ್’ಗಢಕ್ಕೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ರೈಲಿನಲ್ಲಿ ಸೀಟು ವಿಚಾರವಾಗಿ ಇತರ ಪ್ರಯಾಣಿಕರೊಂದಿಗೆ ಮಾತಿಗೆ ಮಾತು ಬೆಳೆದಿದೆ, ಆ ಸಂದರ್ಭದಲ್ಲಿ ಒಬ್ಬ ಜುನೈದ್’ಗೆ ಚಾಕುವಿನಿಂದ ಇರಿದಿದ್ದಾನೆ. ಗುಂಪು ಬಳಿಕ ಜುನೈದ್’ನ ಸಹೋದರರಿಗೆ ಬರ್ಬರವಾಗಿ ಥಳಿಸಿದೆ.

ಥಳಿಸುವ ಮುನ್ನ ಅವರು ತಮ್ಮ ಚೀಲಗಳಲ್ಲಿ ಗೋಮಾಂಸ ಕೊಂಡೊಯ್ಯುತ್ತಿದ್ದಾರೆಂದು ಗುಲ್ಲೆಬ್ಬಿಸಲಾಗಿತ್ತು ಎಂದು ವರದಿಯಾಗಿದೆ. ನಮ್ಮನ್ನು ಥಳಿಸುವಾಗ ಆ ಗುಂಪು ನಮ್ಮ ಧರ್ಮವನ್ನು ನಿಂದಿಸಿತಲ್ಲದೇ,  ಗೋಮಾಂಸ ತಿನ್ನುವವರೆಂದು ಹೀಯಾಳಿಸಲಾಯಿತೆಂದು ಓರ್ವ ಸಹೋದರ ಏಎನ್’ಐಗೆ ತಿಳಿಸಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?