ಸರ್ಕಾರದಿಂದ ಸಾಲ ಮನ್ನಾ,14 ಷರತ್ತು ವಿಧಿಸಿದ ರಾಜ್ಯ ಸರ್ಕಾರ: ಮಹಾರಾಷ್ಟ್ರದಿಂದಲೂ ಸಾಲಮನ್ನಾ

Published : Jun 24, 2017, 04:44 PM ISTUpdated : Apr 11, 2018, 01:11 PM IST
ಸರ್ಕಾರದಿಂದ ಸಾಲ ಮನ್ನಾ,14 ಷರತ್ತು ವಿಧಿಸಿದ ರಾಜ್ಯ ಸರ್ಕಾರ: ಮಹಾರಾಷ್ಟ್ರದಿಂದಲೂ ಸಾಲಮನ್ನಾ

ಸಾರಾಂಶ

ರೈತರ ಸಾಲಮನ್ನಾವನ್ನು ಮಾಡಿರುವ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಸಾಲ ಮನ್ನವಾಗಬೇಕಾದರೆ ಪ್ರಮುಖ 14 ಷರತ್ತುಗಳನ್ನು ವಿಧಿಸಿದೆ.  

ಬೆಂಗಳೂರು(ಜೂ.24): ಸಹಕಾರಿ ಸಂಘಗಳಲ್ಲಿ 50 ಸಾವಿರದೊಳಗಿನ ರೈತರ ಸಾಲಮನ್ನಾವನ್ನು ಮಾಡಿರುವ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಸಾಲ ಮನ್ನವಾಗಬೇಕಾದರೆ ಪ್ರಮುಖ 14 ಷರತ್ತುಗಳನ್ನು ವಿಧಿಸಿದೆ.

ಸಾಲಮನ್ನಾದಿಂದ  16 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 8,165 ಕೋಟಿ ರು ಹೊರೆಯಾಗಲಿದೆ.

ಸಾಲ ಮನ್ನಾ ಸುತ್ತೋಲೆಯ ಪ್ರಮುಖ ಷರತ್ತುಗಳು

1) ಪಶುಭಾಗ್ಯ ಸಾಲ, ಕೃಷಿಯೇತರ ಸಾಲಗಳು, ಮಧ್ಯಮಾವಧಿ, ದೀರ್ಘಾವಧಿ ಸಾಲ ಪಡೆದಿರುವವರ ಸಾಲ ಮನ್ನಾ ಇಲ್ಲ

2)50 ಸಾವಿರಕ್ಕಿಂತ ಹೆಚ್ಚು ಅಲ್ಪಾವಧಿ ಸಾಲ ಪಡೆದವರು 2018, ಜೂನ್ ಒಳಗೆ ಅಸಲು ಪಾವತಿಸಿದ್ರೇ ಮಾತ್ರ 50 ಸಾವಿರ ಸಾಲ ಮನ್ನಾ

3) ಅಲ್ಪಾವಧಿಯ ಸಾಲದಲ್ಲಿ ಸುಸ್ತಿ ಬಾಕಿ ಹೊಂದಿರುವ ರೈತರು ಡಿಸೆಂಬರ್ 31, 2017ರೊಳಗಾಗಿ ಮರುಪಾವತಿ ಮಾಡಿದ್ರೆ ಮಾತ್ರ 50 ಸಾಲ ಮನ್ನಾ, ಅಸಲು ಮತ್ತು ಬಡ್ಡಿ ಸೇರಿ ಸಾಲ ಮನ್ನಾ

4) ಸಾಲಮನ್ನಾ ದಿನಾಂಕದ ಗಡುವಿನ ಬಳಿಕವಷ್ಟೇ ಸಾಲಮನ್ನಾ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ಕೊಡುವುದು

5) ರೈತನೊಬ್ಬ ಒಂದಕ್ಕಿಂತ ಹೆಚ್ಚು ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ರೆ ಒಂದೇ ಬ್ಯಾಂಕಿನಲ್ಲಿ ಮಾತ್ರ ಸಾಲ ಮನ್ನಾ ಸೌಲಭ್ಯ

6) ಸಾಲ ಪಡೆದ ರೈತ ಮೃತಪಟ್ಟಿದ್ದಲ್ಲಿ ಸಂಬಂಧಪಟ್ಟ ವಾರಸುದಾರರು ಸಾಲ ಕಟ್ಟಿದ್ರೆ ಮಾತ್ರ ಸಾಲ ಮನ್ನಾ

ಮಹಾರಾಷ್ಟ್ರ ಸರ್ಕಾರದಿಂದಲೂ ಸಾಲ ಮನ್ನಾ

ಮಹಾರಾಷ್ಟ್ರ ಸರ್ಕಾರ ಕೂಡ ರೈತರ 1.5 ಲಕ್ಷ ರೂ.ವರೆಗಿನ ರೈತರ ಸಾಲಮನ್ನಗೊಳಿಸಿ ಆದೇಶಿಸಿದೆ. ಈ ಸಾಲಮನ್ನಾದಿಂದ ಆ ರಾಜ್ಯದ 19 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 34 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್​ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದನದಲ್ಲಿ ಹೆಸರು ತಪ್ಪಾಗಿ ಹೇಳಿದರೆ ದಂಡ ಫಿಕ್ಸ್‌!
'ಬೆಳಗಾವಿ ಜಿಲ್ಲೆ ವಿಭಜನಗೆ ಅಂತಲೇ ಸಿಎಂ ಬಂದಿದ್ದರು' ಸಿದ್ದರಾಮಯ್ಯ ಮನಸಲ್ಲಿದ್ದ ಬಿಗ್ ಪ್ಲಾನ್ ಬಿಚ್ಚಿಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!