ಶಿಕ್ಷಕರ ವರ್ಗಾವಣೆ ನೀತಿ ಪ್ರಕಟ; ನೂತನ ನೀತಿಯಲ್ಲಿ ವರ್ಗಾವಣೆ ಪ್ರಮಾಣ ಶೇ.15ಕ್ಕೆ ಏರಿಕೆ

By Suvarna Web DeskFirst Published Sep 7, 2017, 7:56 PM IST
Highlights

ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಶಾಸಕರ ಪ್ರತಿಭಟನೆಗೆ ಮಣಿದ ರಾಜ್ಯ ಶಿಕ್ಷಣ ಇಲಾಖೆ ಕಡೆಗೂ ವರ್ಗಾವಣೆ ನೀತಿ ಪ್ರಕಟಿಸಿದೆ. ನೂತನ ವರ್ಗಾವಣೆ ನೀತಿಯಲ್ಲಿ ವರ್ಗಾವಣೆ ಪ್ರಮಾಣವನ್ನು ಶೇಕಡಾ 15ಕ್ಕೆ ಏರಿಕೆ ಮಾಡಲಾಗಿದೆ. 

ಬೆಂಗಳೂರು (ಸೆ.07): ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಶಾಸಕರ ಪ್ರತಿಭಟನೆಗೆ ಮಣಿದ ರಾಜ್ಯ ಶಿಕ್ಷಣ ಇಲಾಖೆ ಕಡೆಗೂ ವರ್ಗಾವಣೆ ನೀತಿ ಪ್ರಕಟಿಸಿದೆ. ನೂತನ ವರ್ಗಾವಣೆ ನೀತಿಯಲ್ಲಿ ವರ್ಗಾವಣೆ ಪ್ರಮಾಣವನ್ನು ಶೇಕಡಾ 15ಕ್ಕೆ ಏರಿಕೆ ಮಾಡಲಾಗಿದೆ. 

ಪ್ರಮುಖವಾಗಿ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ನಿಗದಿ ಮಾಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 10 ವರ್ಷಗಳಿಂದ ಬೀಡು ಬಿಟ್ಟಿದ್ದವರಿಗೆ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ವರ್ಗಾವಣೆ ಮಾಡಲು, ಹಾಗೂ ನಗರಸಭೆ,ಪುರಸಭೆ ವ್ಯಾಪ್ತಿಯಲ್ಲಿ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ನೆಲೆಯೂರಿದ್ದವರಿಗೆ ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆ ಮಾಡಲು ಹಾಗೂ ಗ್ರಾಮಾಂತರದಲ್ಲಿ 10 ವರ್ಷಗಳಿಂದ ಬೀಡು ಬಿಟ್ಟಿದ್ದವರಿಗೆ ನಗರಕ್ಕೆ ವರ್ಗಾವಣೆ ಮಾಡುವ ನಿಯಮ ಮಾಡಲಾಗಿದೆ. ಗಂಡ-ಹೆಂಡತಿ, ಆನಾರೋಗ್ಯಪೀಡಿತರು, ವಿಧವೆಯರು, ಅಂಗವಿಕಲರು ಹಾಗೂ ಮಾಜಿ ಸೈನಿಕರಿಗೆ ಆದ್ಯತೆಯ ಮೇಲೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಇನ್ನು ತಾಲೂಕು ವ್ಯಾಪ್ತಿಯೊಳಗಷ್ಟೇ ಇದ್ದ ವರ್ಗಾವಣೆ ಇನ್ನು ಮುಂದೆ ಜಿಲ್ಲಾವ್ಯಾಪ್ತಿಗೆ ವಿಸ್ತರಣೆ ಮಾಡಲಾಗಿದ್ದು, ಜಿಲ್ಲಾವ್ಯಾಪ್ತಿಯೊಳಗೇ ನಡೆಯುತ್ತಿದ್ದ ವರ್ಗಾವಣೆ ಇನ್ನು ವಲಯ ವ್ಯಾಪ್ತಿಗೆ ವಿಸ್ತರಣೆ ಮಾಡಲಾಗಿದೆ. ಹಾಗೆಯೇ ವಲಯ ವ್ಯಾಪ್ತಿಯೊಳಗಿನ ವರ್ಗಾವಣೆ ಇನ್ನು ಮುಂದೆ ರಾಜ್ಯ ವ್ಯಾಪ್ತಿಗೆ ವಿಸ್ತರಣೆ ಮಾಡಿ ವರ್ಗಾವಣೆ ನೀತಿ ಪ್ರಕಟಿಸಲಾಗಿದೆ.

click me!