ಭಾರೀ ಪ್ರಮಾಣದಲ್ಲಿ ಕುಸಿದ ಜುಕರ್ ಬರ್ಗ್ ಆಸ್ತಿ

By Web DeskFirst Published Jul 27, 2018, 11:07 AM IST
Highlights

ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರ ಆಸ್ತಿಯಲ್ಲಿ ಒಂದೇ ದಿನ ಭಾರೀ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ.  

ನ್ಯೂಯಾರ್ಕ್: ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಬುಧವಾರ 2 ಗಂಟೆಯಲ್ಲಿ 1.29 ಲಕ್ಷ ಕೋಟಿ ರು. (18.8 ಬಿಲಿಯನ್) ಕಳೆದುಕೊಂಡು 8ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಜುಕರ್‌ಬರ್ಗ್ ಹೊಂದಿದ್ದ 5.66 ಲಕ್ಷ ಕೋಟಿ ರು. ಮೊತ್ತದ ಆಸ್ತಿ 2 ಗಂಟೆಗಳ ಮಾರುಕಟ್ಟೆ ವ್ಯವಹಾರದಲ್ಲಿ 4.36 ಲಕ್ಷ ಕೋಟಿ ರು.ಗೆ ಇಳಿಕೆಯಾಗಿತ್ತು. 

ವಾಲ್‌ಸ್ಟ್ರೀಟ್‌ನ ಪ್ರಗತಿ ಅಂದಾಜು ತಲುಪಲು ವಿಫಲವಾದ ಮತ್ತು ತ್ರೈಮಾಸಿಕ ಆದಾಯದಲ್ಲಿ ಇಳಿಕೆ ಕಂಡುಬಂದಿದ್ದುದು, ಫೇಸ್‌ಬುಕ್ ಷೇರುಗಳು ಶೇ.16 ರಷ್ಟು ಕುಸಿಯಲು ಕಾರಣವಾಯಿತು. ದತ್ತಾಂಶ ಸೋರಿಕೆ ಪ್ರಕರಣದ ಬಳಿಕ, ಬಳಕೆದಾರರ ಸಂಖ್ಯೆ ಕುಸಿದಿರುವ ಕಾರಣ ಫೇಸ್‌ಬುಕ್ ಆದಾಯ ಇಳಿಮುಖದತ್ತ ಸಾಗಲು ಕಾರಣ ಎನ್ನಲಾಗಿದೆ.

click me!