ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹೊಸ ಮನೆಗಾಗಿ ಹುಡುಕಾಟ ನಡೆಸುತಿದ್ದಾರೆ. ಸದ್ಯ ವಾಸವಿರುವ ಮನೆ ಧ್ವಂಸ ಮಾಡುವ ಭೀತಿಯಿಂದ ಮನೆ ನೋಡುತಿದ್ದಾರೆ.
ಹೈದ್ರಾಬಾದ್ [ಜೂ.28] : ತಾವು ಸಿಎಂ ಆಗಿದ್ದಾಗ ನಿರ್ಮಿಸಿದ್ದ ಪ್ರಜಾವೇದಿಕೆ ಸರ್ಕಾರಿ ಕಟ್ಟಡವನ್ನು ನೂತನ ಸಿಎಂ ಜಗನ್‌ಮೋಹನ್ ರೆಡ್ಡಿ ಸರ್ಕಾರ ಉರುಳಿಸಿದ ಬೆನ್ನಲ್ಲೇ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ತಾವು ವಾಸ ಇರುವ ಮನೆಯನ್ನು ಸರ್ಕಾರ ಉರುಳಿಸುವ ಭೀತಿ ಎದುರಾಗಿದೆ.
ಹೀಗಾಗಿ ತಮಗೆ ಸೂಕ್ತ ಹೊಸ ಮನೆ ಹುಡುಕಿ ಎಂದು ಆಪ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ನಾಯ್ಡು ಅವರು ಹಾಲಿ ಕೃಷ್ಣಾ ನದಿ ತೀರದಲ್ಲಿ ಉದ್ಯಮಿಯೊಬ್ಬರು ನಿರ್ಮಿಸಿರುವ ಐಷಾರಾಮಿ ಬೃಹತ್ ಬಂಗಲೆ ಲೀಸ್ ಪಡೆದು ವಾಸವಿದ್ದಾರೆ.
ಆದರೆ ಇದು ನದಿ ತೀರದಲ್ಲಿ ಕಟ್ಟಿದ ಕಾರಣ ಅಕ್ರಮ ಎಂದು ವೈಎಸ್‌ಎಸ್ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿದೆ.