
ಕಂಪನಿಗಳಲ್ಲಿ ನೌಕರರಿಗೆ ನಿರ್ದಿಷ್ಟ ಗುರಿ ನೀಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ದೆಹಲಿಯಲ್ಲಿ ಕೆಲ ಕ್ರಿಮಿನಲ್‌ಗಳು ಬಾಲಾಪರಾಧಿಗಳನ್ನು ಬಳಸಿಕೊಂಡು, ಮೊಬೈಲ್ ಕಳ್ಳತನ ಜಾಲದಲ್ಲಿ ತೊಡಗಿದ್ದು, ವಾರದಲ್ಲಿ ಇಂತಿಷ್ಟು ಮೊಬೈಲ್‌ಗಳ ಕಳ್ಳತನ ನಡೆಸಬೇಕೆಂಬ ಗುರಿ ನಿಗದಿ ಪಡಿಸಿರುವ ವಿಷಯ ಬೆಳಕಿಗೆ ಬಂದಿದೆ.
ಸ್ಲಮ್ ಬಾಲಕರನ್ನು ಬಳಸಿಕೊಂಡು, ಹೊಸ ಕಾರ್ಯ ವಿಧಾನದ ಮೂಲಕ ಈ ಅಪರಾಧ ಎಸಗಲಾಗುತ್ತಿದೆ. ಈ ಸಂಬಂಧ ಇಬ್ಬರು ಬಾಲಪರಾಧಿ ಆರೋಪಿಗಳನ್ನು ಬಂಧಿಸಿದ ಬಳಿಕ ಪೊಲೀಸರಿಗೆ ಈ ವಿಷಯ ಗೊತ್ತಾಗಿದೆ. ಕಳವು ಮಾಡಿದ ಮೊಬೈಲ್‌ಗಳನ್ನು ನೇಪಾಳ, ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.