ಶಾಸಕನ ಜತೆ ಮದುವೆ ಒಲ್ಲೆ..ಪ್ರಿಯಕರನೊಂದಿಗೆ ಯುವತಿ ಭಲ್ಲೆ ಭಲ್ಲೆ!

Published : Sep 04, 2018, 10:17 PM ISTUpdated : Sep 09, 2018, 09:11 PM IST
ಶಾಸಕನ ಜತೆ ಮದುವೆ ಒಲ್ಲೆ..ಪ್ರಿಯಕರನೊಂದಿಗೆ ಯುವತಿ ಭಲ್ಲೆ ಭಲ್ಲೆ!

ಸಾರಾಂಶ

ಪಾಪ ಆ ಶಾಸಕ ನೂರೆಂಟು ಕನಸು ಕಟ್ಟುಕೊಂಡು ಮದುವೆಗೆ ಸಿದ್ಧವಾಗಿದ್ದರು. ಇನ್ನೇನು ಹಸೆ ಮಣೆ ಏರಿ ಹೊಸ ಜೀವನಕ್ಕೆ ಡಿಯಿಡಬೇಕು ಎಂದುಕೊಂಡಿದ್ದಾಗ ಮದುವೆಗಾಬೇಕಿದ್ದ ವಧು ಮಾಡಿದ ಕೆಲಸ ಅವರ ಸಾವಿರ ಕನಸನ್ನು ನೂಚ್ಚು ನೂರು ಮಾಡಿತು.

ಚೆನ್ನೈ[ಸೆ.4]  ತಮಿಳುನಾಡಿನ ಈರೋಡು ಜಿಲ್ಲೆಯಲ್ಲಿ 43 ವರ್ಷದ ಶಾಸಕನ ಜೊತೆ ಮದುವೆ ನಿಶ್ಚಯವಾಗಿದ್ದ ವಧು ಪ್ರಿಯಕರನ ಜೊತೆ ಓಡಿ ಹೋಗಿದ್ದು ಮದುವೆ ರದ್ದಾಗಿದೆ.  43 ವರ್ಷದ ತಮಿಳುನಾಡಿನ ಭವಾನಿಸಾಗರದ ಎಐಡಿಎಂಕೆ ಶಾಸಕನಾದ ಈಶ್ವರನ್  ಗೆ ಹಾಗೂ 23 ವರ್ಷದ ಎಂಸಿಎ ಪದವೀಧರೆ ಸಂಧ್ಯಾಳ ಜೊತೆ ವಿವಾಹ ನಿಶ್ಚಯವಾಗಿತ್ತು. ಅಲ್ಲದೇ ಇದೇ ತಿಂಗಳ 12 ರಂದು ಸತ್ಯಮಂಗಲದ ಬನ್ನಾರಿ ಅಮ್ಮನ್ ದೇವಸ್ಥಾನದಲ್ಲಿ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಮದುವೆಗೆ ಎರಡು ಕುಟುಂಬಗಳು ಭರ್ಜರಿಯಾಗಿ ಸಿದ್ಧತೆ ನಡೆಸಿದ್ದ ವೇಳೆ ವಧು ಪ್ರಿಯಕರನ ಜತೆ ಪರಾರಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ತನ್ನ ಸಹೋದರಿ ಮನೆಗೆ ಹೋಗುತ್ತೇನೆಂದು ಹೇಳಿ ಹೊರಟಿರುವ ಯುವತಿ ಹಿಂದೆ ಬಂದಿಲ್ಲ. ಕೂಡಲೇ ಆಕೆಯ ಮೊಬೈಲಿಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗಿಲ್ಲ. ಅನುಮಾನಗೊಂಡ ಪೋಷಕರು ಕಡತೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶಾಸಕನೊಂದಿಗೆ ಮದುವೆಗೆ ಸಂಧ್ಯಾಳಿಗೆ ಇಷ್ಟವಿರಲಿಲ್ಲ. ಅಲ್ಲದೇ ಆಕೆಯು ವಿಘ್ನೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಆತನೊಂದಿಗೆ ಓಡಿ ಹೋಗಿದ್ದಾಳೆಂದು ಹೇಳಲಾಗಿದೆ. ದ

ಮದುವೆಗೆ ಕೇವಲ 11 ದಿನಗಳು ಬಾಕಿ ಇರುವಂತೆ ಯುವತಿ ನಾಪತ್ತೆಯಾಗಿದ್ದಾಳೆ. ಮದುವೆಗೆ ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ ಸೆಲ್ವಂ ಹಾಗೂ ಸಭಾಪತಿ ಪಿ ಧನಪಾಲ್ ಸೇರಿದಂತೆ ಅನೇಕರನ್ನು ಆಹ್ವಾನಿಸಲಾಗಿದ್ದು ಇದೀಗ ಶಾಸಕ ಏನೂ ಮಾಡದ ಸ್ಥಿತಿಯಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐದು ವರ್ಷ ಬಳಿಕ ಖುಲಾಯಿಸಿದ ಅದೃಷ್ಠ, 24 ಲಕ್ಷ ರೂ ದುಬೈ ಲಾಟರಿ ಗೆದ್ದ ಭಾರತ ಮೂಲದ ನರ್ಸ್‌
ಕೆಎಚ್‌ಬಿ ಬಡಾವಣೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ, ದಾಖಲೆಗಳಲ್ಲಿ ಒಂದು, ವಾಸ್ತವದಲ್ಲಿ ಇನ್ನೊಂದು!