ಮೋದಿ ಜೊತೆಗೆ ವಿದೇಶ ಪ್ರವಾಸದಲ್ಲಿದ್ದ ‘ಖಾಸಗಿ’ ವ್ಯಕ್ತಿಗಳ್ಯಾರು?: ಮಾಹಿತಿ ಆಯೋಗ!

By Web DeskFirst Published Sep 4, 2018, 7:22 PM IST
Highlights

ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿ ಖಾಸಗಿ ವ್ಯಕ್ತಿಗಳು! ಮಾಹಿತಿ ಕೊಡುವಂತೆ ವಿದೇಶಾಂಗ ಇಲಾಖೆಗೆ ಸೂಚನೆ! ವಿದೇಶಾಂಗ ಇಲಾಖೆಗೆ ಕೇಂದ್ರ ಮಾಹಿತಿ ಆಯೋಗದ ಆದೇಶ! 2016-17 ಅವಧಿಯಲ್ಲಿ ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು

ನವದೆಹಲಿ(ಸೆ.4): ವಿದೇಶ ಪ್ರವಾಸಗಳಲ್ಲಿ ಪ್ರಧಾನಿ ನರೇಂದ್ರಮೋದಿ ಜೊತೆಗೂಡಿದ್ದ ಖಾಸಗಿ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ  ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶಿಸಿದೆ.

ಪ್ರಧಾನಿ ನರೇಂದ್ರಮೋದಿ 2015-16 ಮತ್ತು  2016-17 ಅವಧಿಯಲ್ಲಿ ವಿದೇಶಕ್ಕೆ ತೆರಳಿದ್ದಾಗ, ಅವರ ಜೊತೆಗೂಡಿದ್ದ ಖಾಸಗಿ ವ್ಯಕ್ತಿಗಳ ಹೆಸರು ಜೊತೆಗೆ ವೆಚ್ಚದ ಬಗ್ಗೆ  ಮಾಹಿತಿ ನೀಡುವಂತೆ  ಕಳೆದ ಅಕ್ಬೋಬರ್ ನಲ್ಲಿ ಕರಾಬಿ ದಾಸ್  ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆದರೆ, ತೃಪ್ತಿಕರವಾದ ಮಾಹಿತಿ ದೊರೆತಿಲ್ಲವಾದ್ದರಿಂದ ದಾಸ್ ಮಾಹಿತಿ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ  ಅರ್ಜಿದಾರರು  224 ರೂ. ಪಾವತಿಸುವಂತೆ ಸಚಿವಾಲಯ ಬೇಡಿಕೆ ಹಾಕಿದೆ ಎಂದು ಮುಖ್ಯ ಮಾಹಿತಿ ಆಯುಕ್ತ ಆರ್. ಕೆ. ಮಥೂರ್  ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ  ಪ್ರವಾಸಕ್ಕೆ ಸಂಬಂಧಿಸಿದ ದಿನಾಂಕ, ವೇಳೆ ಮತ್ತು ವಿಮಾನಗಳ  ವೆಚ್ಚ ಹೊರತುಪಡಿಸಿದರೆ ಉಳಿದ ಯಾವುದೇ ಮಾಹಿತಿ ಇಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ಸಚಿವಾಲಯ ಹೇಳಿದೆ.

224 ರೂ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಗಮನ ಹರಿಸಲಾಗುವುದು ಮತ್ತು   ಹೊಸ ಮಾಹಿತಿಯನ್ನು  ನೀಡುವುದಾಗಿ  ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ.

click me!