ತಮಿಳುನಾಡು ಸದನದಲ್ಲಿ ವಿಶ್ವಾಸ 'ಕಾಳಗ'

Published : Feb 16, 2017, 04:57 AM ISTUpdated : Apr 11, 2018, 12:42 PM IST
ತಮಿಳುನಾಡು ಸದನದಲ್ಲಿ ವಿಶ್ವಾಸ 'ಕಾಳಗ'

ಸಾರಾಂಶ

ವಿಶ್ವಾಸ ಮತ ಯಾಚನೆ ವೇಳೆ ನಡೆದ ಗದ್ದಲ, ಪ್ರತಿಭಟನೆಗಳಿಂದಾಗಿ ವಿಶ್ವಾಸಮತ ಯಾಚನೆ ಮುಂದೂಡಲಾಗಿದೆ.

ಚೆನ್ನೈ (ಫೆ.18):  ತಮಿಳುನಾಡು ಅಸೆಂಬ್ಲಿಯಲ್ಲಿ  ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಡೆದ ಗದ್ದಲ್ಲಕ್ಕೆ ಸ್ಪೀಕರ್ ಬೆದರಿ ಹೊರನಡೆದಿದ್ದು, ಪ್ರಕ್ರಿಯೆಯನ್ನು ಒಂದು ಗಂಟೆಯವರೆಗೆ ಮುಂದೂಡಿದ್ದಾರೆ.

ಸದನ ಆರಂಭವಾಗುತ್ತಿದ್ದಂತೆ ಪನ್ನೀರ್ ಸೆಲ್ವಂ ಬಣ, ಡಿಎಂಕೆ, ಹಾಗೂ ಇತರ ವಿಪಕ್ಷಗಳು ರಹಸ್ಯ ಮತದಾನ ನಡೆಸುವಂತೆ ಆಗ್ರಹಿಸಿದ್ದಾರೆ. ಆದರೆ ಅದಕ್ಕೊಪ್ಪದ ಸ್ಪೀಕರ್ ಧ್ವನಿ ಮತದಾನ ನಡೆಸಲು ಆರಂಭಿಸಿದ್ದಾರೆ.

ಅದರಿಂದ ಕುಪಿತರಾದ ಶಾಸಕರು ಸ್ಪೀಕರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸ್ಪೀಕರ್ ಮುಖಕ್ಕೆ ಕುರ್ಚಿ ಎಸದಿದ್ದು, ಟೇಬಲ್ ಮುರಿಯಲು ಮುಂದಾಗಿದ್ದಾರೆ.

ಶಾಸಕರ ಕೂಗಾಟ, ಹೊಡೆದಾಟ, ಬೈಗುಳಗಳ ಅಬ್ಬರಕ್ಕೆ ಸದನದಲ್ಲಿದ್ದ ಕುರ್ಚಿಗಳು ಪುಡಿಪುಡಿಯಾಗಿದ್ದು ಮೇಜುಗಳು ಜಖಂಗೊಂಡಿವೆ.

ಸ್ಪೀಕರ್​ ಮೈಕುಗಳನ್ನು ಕಿತ್ತೆಸೆದು ಆರ್ಭಟಿಸಿದ ಶಾಸಕರು, ಅವರ ಕುರ್ಚಿ ಮೇಲೇ ಹೋಗಿ ಕುಳಿತಿದ್ದಾರೆ.

ಶಾಸಕರ ಗೂಂಡಾ ವರ್ತನೆಗೆ ಬೆದರಿದ ಸ್ಪೀಕರ್, ವಿಶ್ವಾಸ ಮತಯಾಚನೆಯನ್ನು ಒಂದು ಗಂಟೆವೆರೆಗೆ ಮುಂದೂಡಿದ್ದಾರೆ.

ಅಸೆಂಬ್ಲಿ ಗಲಾಟೆಯಲ್ಲಿ ಅಧಿಕಾರಿಯೊಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದು ಪೊಲೀಸರು ಅವರನ್ನು ಅಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.  ಬಾಲಾಜಿ  ರಕ್ತದೊತ್ತಡದಿಂದ ಕುಸಿದು ಬಿದ್ದು ಗಾಯಗಳಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು