ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ ಏನಂದ್ರು ನೋಡಿ!

By Web DeskFirst Published Mar 9, 2019, 7:50 PM IST
Highlights

ಪ್ರಧಾನಿ ಮೋದಿ ನಮ್ಮ ಡ್ಯಾಡಿ ಎಂದ ತಮಿಳುನಾಡು ಸಚಿವ| ಮೋದಿ ಇಡೀ ದೇಶಕ್ಕೆ ತಂದೆಯಂತಿದ್ದಾರೆ ಎಂದ ಕೆಟಿ ರಾಜೇಂದ್ರ ಬಾಲಾಜಿ| ಮೋದಿ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುವುದಾಗಿ ಬಾಲಾಜಿ ಹೇಳಿಕೆ| ‘ಅಮ್ಮ(ಜಯಲಲಿತಾ) ನಿಧನದ ಬಳಿಕ ಮೋದಿಯೇ ನಮಗೆ ಡ್ಯಾಡಿ’|

ಚೆನ್ನೈ(ಮಾ.09): ಪ್ರಧಾನಿ ಮೋದಿ ನಮ್ಮ ತಂದೆಯ ಸಮಾನರಾಗಿದ್ದು ಅವರು ದೇಶಕ್ಕೂ ತಂದೆ ಇದ್ದಂತೆ, ಹೀಗಾಗಿ ಮೋದಿ ನಾಯಕತ್ವ ಒಪ್ಪಿದ್ದೇವೆ ಎಂದು ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.

Tamil Nadu Minister K T Rajendra Balaji: Amma's (Jayalalithaa) decisions were her own. So it was different, but in today's context due to absence of Amma, Modi is our daddy, he is our daddy, India's daddy. (8.3.19) pic.twitter.com/2zzETpaEIo

— ANI (@ANI)

'ಎಐಎಡಿಎಂಕೆ ಪಕ್ಷಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ತಂದೆ ಸಮಾನರು ಹೀಗಾಗಿ ಅವರ ನಾಯಕತ್ವದಲ್ಲಿ ಮತ್ತು ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಬಾಲಾಜಿ ಸ್ಪಷ್ಟಪಡಿಸಿದ್ದಾರೆ.

Tamil Nadu Minister K T Rajendra Balaji: When Amma(Jayalalithaa) was alive she was in full control, her decisions were her own. So,it was different but in today's context due to absence of Amma, Modi is our daddy. He is India's daddy. So we have accepted his leadership. (8.3.19) pic.twitter.com/ex9c1MT96W

— ANI (@ANI)

ನಮ್ಮ ನಾಯಕಿ ಜಯಲಲಿತಾ ನಿಧನವಾದ ನಂತರ ಮೋದಿಯೇ ನಮಗೆ ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ಅಮ್ಮ (ಜಯಲಲಿತಾ) ನಿಧನದ ನಂತರ ಅವರೇ (ಮೋದಿ) ನಮಗೆಲ್ಲಾ ಡ್ಯಾಡಿ ಎಂದು ಬಾಲಾಜಿ ಹೇಳಿದ್ದಾರೆ.

 

click me!