ಭಾರತೀಯ ರಕ್ತ ಇರೋರು ಸಾಕ್ಷಿ ಕೇಳಲ್ಲ: ಪ್ರಧಾನಿ ಮೋದಿ!

Published : Mar 09, 2019, 06:59 PM ISTUpdated : Mar 09, 2019, 07:00 PM IST
ಭಾರತೀಯ ರಕ್ತ ಇರೋರು ಸಾಕ್ಷಿ ಕೇಳಲ್ಲ: ಪ್ರಧಾನಿ ಮೋದಿ!

ಸಾರಾಂಶ

ಸಾಕ್ಷಿ ಕೇಳುತ್ತಿರುವ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ| ಭಾರತೀಯ ರಕ್ತ ಇರುವವರು ಸಾಕ್ಷಿ ಕೇಳೊದಿಲ್ಲ ಎಂದ ಮೋದಿ| ಬಾಲಾಕೋಟ್ ಸಾಕ್ಷಿ ಕೇಳಿದವರಿಗೆ ಪ್ರಧಾನಿ ಗುದ್ದು| ಮುಂಬೈ ದಾಳಿಯ ಬಳಿಕ ಕ್ರಮ ಕೈಗೊಳ್ಳದ ಯುಪಿಎ ಸರ್ಕಾರಕ್ಕೆ ಛಿಮಾರಿ| 

ನವದೆಹಲಿ(ಮಾ.09): ಭಾರತೀಯ ರಕ್ತ ಹೊಂದಿರುವವರು ಯಾರೂ ಬಾಲಕೋಟ್ ವೈಮಾನಿಕ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ನೊಯ್ಡಾದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉಗ್ರರನ್ನು ಮಟ್ಟಹಾಕಲು ಭಾರತ ನಮ್ಮ ಅವಧಿಯಲ್ಲಿ ಹೊಸ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.

ಆದರೆ ಕೆಲವರು ಬಾಲಾಕೋಟ್ ದಾಳಿಯ ಸಾಕ್ಷಿ ಕೇಳುತ್ತಿದ್ದು, ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಮೋದಿ ಗುಡುಗಿದರು. ಭಾರತೀಯ ರಕ್ತ ಹೊಂದಿರುವವರು ಸೇನೆಯಿಂದ ಸಾಕ್ಷಿ ಕೇಳುವುದಿಲ್ಲ ಎಂದು ಪ್ರಧಾನಿ ವಿಪಕ್ಷಗಳನ್ನು ಕಿಚಾಯಿಸಿದರು.

ಮುಂಬೈ ದಾಳಿಯ ನಂತರ ನಮ್ಮ ಸೇನಾಪಡೆಗಳು ಉಗ್ರರ ವಿರುದ್ಧ ಪ್ರತೀಕಾರಕ್ಕೆ ಸಿದ್ಧವಾಗಿದ್ದವು. ಆದರೆ ಹಿಂದಿನ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಸೇನಾಪಡೆಗಳು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮೋದಿ ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!