ತಮಿಳುನಾಡಿನ ಶಾಲಾ ಕಾಲೇಜುಗಳಲ್ಲಿ ಸೆಲ್ ಫೋನ್ ಬ್ಯಾನ್

By Web DeskFirst Published Aug 20, 2018, 8:56 PM IST
Highlights

ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆಗಳ ಸಲಹೆಯಂತೆ ಈ ಕಾನೂನನ್ನು ಜಾರಿಗೊಳಿಸಲಾಗಿದೆ. ಆದಾಗ್ಯೂ ಸರ್ಕಾರದ ನಿರ್ಧಾರವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ವಿರೋಧಿಸಿದ್ದಾರೆ. 

ಚೆನ್ನೈ[ಆ.20]: ರಾಜ್ಯದ ಎಲ್ಲಾ ಶಾಲಾ - ಕಾಲೇಜುಗಳಲ್ಲಿ ಸೆಲ್ ಫೋನ್ ಗಳ ಬಳಕೆಯನ್ನು ನಿಷೇಧಿಸಿ ಸರ್ಕಾರ ಆದೇಶಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಸ್ವಯಂ ಆರ್ಥಿಕ ನಿಯಂತ್ರಿತ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲು ಕಾಲೇಜು ಶಿಕ್ಷಣ ನಿರ್ದೇಶಾನಾಲಯಕ್ಕೆ ಸರ್ಕಾರ ಆದೇಶಿಸಿದೆ. ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆಗಳ ಸಲಹೆಯಂತೆ ಈ ಕಾನೂನನ್ನು ಜಾರಿಗೊಳಿಸಲಾಗಿದೆ. ಆದಾಗ್ಯೂ ಸರ್ಕಾರದ ನಿರ್ಧಾರವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ವಿರೋಧಿಸಿದ್ದಾರೆ. 

ಕಾಲೇಜಿನ ವಿದ್ಯಾರ್ಥಿಗಳೆಲ್ಲರೂ ಪ್ರೌಢರಾಗಿದ್ದು ಅವರಿಗೆ ಯಾವ ಸಂದರ್ಭಗಳಲ್ಲಿ ಬಳಸಬೇಕೆಂಬ ಅರಿವಿರುತ್ತದೆ.  ಇದನ್ನು ಪ್ರಶ್ನಿಸುವ ಹಕ್ಕು ಯಾವುದೇ ಆಡಳಿತಕ್ಕೂ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಹೆಚ್ಚು ಅಗತ್ಯವಿದೆ. ಅಪಾಯದ ಸನ್ನಿವೇಶಗಳಲ್ಲಿ ಸೆಲ್ ಫೋನ್'ಗಳ ಅಗತ್ಯ ತುರ್ತಾಗಿ ಬೇಕಾಗಿರುತ್ತದೆ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ತೀರಾ ಹೆಚ್ಚಾಗಿದೆ. ಪಾಠ ಮಾಡುವ ಸಂದರ್ಭಗಳಲ್ಲಂತೂ ಎಗ್ಗಿಲ್ಲದೆ ಬಳಸುತ್ತಿರುತ್ತಾರೆ. ಹಲವು ಶಾಲಾ ಆಡಳಿತ ಮಂಡಳಿಗಳು ಮೊಬೈಲ್ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

 

click me!