ನಾವೇ ಸರ್ಕಾರ್ ಎಂದ ಕ್ರೇಜಿಸ್ಟಾರ್

By Web DeskFirst Published Aug 20, 2018, 8:09 PM IST
Highlights

ಸರ್ಕಾರ ಮಾಡುತ್ತೆ ಅಂತ ಕಾಯುತ್ತ ಕೂರುವುದು ಬೇಡ. ನಾವೇ ಸರ್ಕಾರದ ರೀತಿ ಕೆಲಸ ಮಾಡಬೇಕಿದೆ. ಇನ್ನು ಮಳೆ ನಿಂತ ನಂತರ ಅಲ್ಲಿನ ಜನರಿಗೆ ಒಂದು ಊರು ಕಟ್ಟಿ ಕೊಡೊ ಕೆಲಸ ಆಗಬೇಕು

ಬೆಂಗಳೂರು[ಆ.20]: ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಸಹ ಕೊಡಗು ಜನಗಳ ಕಷ್ಟಗೆ ಮರುಗಿದ್ದಾರೆ. ಕೊಡಗು ಪ್ರವಾಹ ಸಂತ್ರಸ್ತರಿಗೆ ಜನರು ಎಲ್ಲವನ್ನೂ ಮಾಡ್ತಿದ್ದಾರೆ. ಮಳೆ ನಿಂತ ಮೇಲೆ ಅಲ್ಲಿ ಬೇಕಾದ ಅಗತ್ಯ ಪರಿಹಾರವನ್ನ ಮಾಡಬೇಕಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಾಡುತ್ತೆ ಅಂತ ಕಾಯುತ್ತ ಕೂರುವುದು ಬೇಡ. ನಾವೇ ಸರ್ಕಾರ. ಈಗಾಗಲೇ ಎಲ್ಲ ನಟರು ಹಾಗೂ ಜನರು ಸಹಾಯ ಮಾಡಿದ್ದಾರೆ. ಮಳೆ ನಿಂತ ಮೇಲೆ ಅಲ್ಲಿ ಬೇಕಾದ ಅಗತ್ಯ ಪರಿಹಾರವನ್ನು ಮಾಡಬೇಕಿದೆ.

ಸರ್ಕಾರ ಮಾಡುತ್ತೆ ಅಂತ ಕಾಯುತ್ತ ಕೂರುವುದು ಬೇಡ. ನಾವೇ ಸರ್ಕಾರದ ರೀತಿ ಕೆಲಸ ಮಾಡಬೇಕಿದೆ. ಇನ್ನು ಮಳೆ ನಿಂತ ನಂತರ ಅಲ್ಲಿನ ಜನರಿಗೆ ಒಂದು ಊರು ಕಟ್ಟಿ ಕೊಡೊ ಕೆಲಸ ಆಗಬೇಕು. ಅವರು ತಮ್ಮ ಸಂತೋಷವನ್ನು ಮರಳಿ ಪಡೆಯುವ ಕೆಲಸ ಆಗಬೇಕು ಎಂದು ಹೇಳಿದರು. 

ಸರ್ಕಾರ ನಿಭಾಯಿಸಬೇಕು
ಕೊಡಗು ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿದ ನಟ ಉಪೇಂದ್ರ,  ಕೊಡಗು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳು ಅಗತ್ಯಕ್ಕಿಂತ ಜಾಸ್ತಿ ತಲುಪಿದೆ. ಜನರೆಲ್ಲಾ ಸೇರಿ ಅವರಿಗೆ ಅಗತ್ಯಗಳನ್ನ ಪೂರೈಸಿದ್ದಾರೆ. ಈಗ ಅಲ್ಲಿನ ಜನರಿಗೆ ಅದೆಲ್ಲವನ್ನೂ ಮೀರಿದ ಬೇರೆ ಸಮಸ್ಯೆಗಳಿವೆ.

ಜನರಿಗಿಂತ ಹೆಚ್ಚಾಗಿ ಈಗ ಸರ್ಕಾರದ ಜವಾಬ್ದಾರಿ ಅವರೇ ಎಲ್ಲವನ್ನು ನಿಭಾಯಿಸಬೇಕಿದೆ. ಸರ್ಕಾರದಿಂದಲೇ ಒಂದು ರಕ್ಷಣಾ ತಂಡ ಯಾವಾಗಲೂ ಸಿದ್ಧವಿರಬೇಕು. ಇಂತಹ ಪ್ರಕೃತಿ ವಿಕೋಪಗಳು ಉಂಟಾದಾಗ ತಕ್ಷಣವೇ ಕಾರ್ಯಾಚರಣೆ ಶುರು ಮಾಡುವಂತಿರಬೇಕು ಎಂದು ತಿಳಿಸಿದ್ದಾರೆ.

 

click me!