
ಬೆಂಗಳೂರು: ಮೋದಿ ಸರಕಾರ ಹೊರತಂದಿರುವ 2 ಸಾವಿರ ರೂ ನೋಟು ದೇಶಾದ್ಯಂತ ಸಾಕಷ್ಟು ಚರ್ಚೆಯಲ್ಲಿದೆ. ಈ ನೋಟಿನಲ್ಲಿ ನ್ಯಾನೋ ಜಿಪಿಎಸ್ ಇದ್ದು ತೆರಿಗೆಗಳ್ಳರನ್ನು ಹಿಡಿದುಹಾಕಲು ಸರಕಾರ ಮಾಸ್ಟರ್'ಪ್ಲಾನ್ ಮಾಡಿದೆ ಎಂಬ ಸುದ್ದಿ ಬಹಳ ಗಟ್ಟಿಯಾಗಿ ಕೇಳಿಬರುತ್ತಿದೆ. ಇಂಥ ಇನ್ನೂ ಹಲವು ಅಚ್ಚರಿ ಅಂಶಗಳು ಈ ನೋಟಿನಲ್ಲಿವೆಯಂತೆ. ಅಂಥ ಕೆಲ ಅಂಶಗಳು ಇಲ್ಲಿವೆ.
1) ನೋಟಿನಲ್ಲಿರುವ ನ್ಯಾನೋ ಜಿಪಿಎಸ್ ಸಹಾಯದಿಂದ ಟ್ರಾಫಿಕ್ ನ್ಯಾವಿಗೇಶನ್ ಮಾಡಬಹುದು. ನಿಮ್ಮ ಕಾರಿನ ಡ್ಯಾಶ್'ಬೋರ್ಡ್'ನಲ್ಲಿ ನೋಟನ್ನು ಅಡ್ಡಡ್ಡವಾಗಿ ಹಿಡಿದು ಎಡದಿಂದ ಬಲಕ್ಕೆ ಸ್ವೈಪ್ ಮಾಡಿ. ಆಗ ಟ್ರಾಫಿಕ್'ನಲ್ಲಿ ಯಾವ ರೂಟ್'ನಲ್ಲಿ ಹೋಗಬೇಕೆಂಬ ಮಾಹಿತಿ ಪ್ರತ್ಯಕ್ಷವಾಗುತ್ತದೆ.
2) ನೋಟಿನಲ್ಲಿ ನ್ಯಾನೋ ಜಿಪಿಎಸ್ ಅಷ್ಟೇ ಅಲ್ಲ, ನ್ಯಾನೋ ಕ್ಯಾಮೆರಾ ಹಾಗೂ ವಾಯ್ಸ್ ರೆಕಾರ್ಡಿಂಗ್ ಸಾಧನವೂ ಇದೆ. ತೆರಿಗೆ ವಂಚಿಸುತ್ತಿರುವ ಜನರ ಫೋಟೋವನ್ನು ಮತ್ತು ಧ್ವನಿಯನ್ನು ತಾನಾಗೇ ರೆಕಾರ್ಡ್ ಮಾಡಿ ಸರಕಾರಕ್ಕೆ ಮಾಹಿತಿ ರವಾನಿಸುತ್ತದಂತೆ.
3) 2 ಸಾವಿರ ನೋಟಿನಲ್ಲಿ ಜಿಯೋದ ನ್ಯಾನೋ ಸಿಮ್ ಕಾರ್ಡ್ ಅಡಕವಾಗಿರುತ್ತದೆ. ನೀವು ನೋಟನ್ನು ಹರಿದಾಗ ಸಿಮ್ ಕಾರ್ಡನ್ನು ಪತ್ತೆಹಚ್ಚಬಹುದು.
4) ಈ ನೋಟಿನಲ್ಲಿ ವಿಶೇಷ ಮೆಮೋರಿ ಕೋಶಗಳಿದ್ದು, ಅದನ್ನು ಡೇಟಾ ಸಂಗ್ರಹಕ್ಕೂ ಬಳಸಬಹುದು. ಈ ನೋಟನ್ನು ಮುದ್ರಿಸುವಾಗಲೇ ಭಾರತೀಯ ಪರಂಪರೆ ಬಿಂಬಿಸುವ ಹಾಡು ಮತ್ತು ವಿಡಿಯೋಗಳನ್ನು ಸ್ಟೋರ್ ಮಾಡಲಾಗಿದೆ.
5) 2 ಸಾವಿರ ರೂಪಾಯಿಯ ಮತ್ತೊಂದು ವಿಶೇಷತೆ ಎಂದರೆ, ಇದರಲ್ಲಿರುವ ಸಾಫ್ಟ್'ವೇರು ಆಟೊಮ್ಯಾಟಿಕ್ ಆಗಿ ಅಪ್'ಗ್ರೇಡ್ ಆಗುತ್ತದೆ. ಇದಕ್ಕಾಗಿಯೇ ಇಸ್ರೋ ಹೊಸ ಸೆಟಿಲೈಟ್ ಲಾಂಚ್ ಮಾಡುತ್ತಿದೆ.
( ನೋಟಿನಲ್ಲಿ ನ್ಯಾನೋ ಜಿಪಿಎಸ್ ಇಲ್ಲ ಎಂದು ಆರ್'ಬಿಐ ಗವರ್ನರ್, ವಿತ್ತ ಸಚಿವರಾದಿಯಾಗಿ ಎಲ್ಲರೂ ಸ್ಪಷ್ಟಪಡಿಸಿಸುತ್ತಾ ಬಂದಿದ್ದಾರೆ. ಆದರೂ ಕೂಡ ಸಮಾಜದ ಎಲ್ಲಾ ವರ್ಗದ ಬಹಳಷ್ಟು ಜನರು ಜಿಪಿಎಸ್ ಇರುವಿಕೆಯನ್ನು ಈಗಲೂ ನಂಬಿಕೊಂಡಿದ್ದಾರೆ. ಮೇಲೆ ತಿಳಿಸಿರುವ ಅಷ್ಟೂ ವಿಚಾರಗಳೂ ಕೂಡ ಜನಸಾಮಾನ್ಯರ ಮಧ್ಯೆ ಚರ್ಚೆಯ ವಸ್ತುವಾಗಿರುವುದು ಸುಳ್ಳಲ್ಲ. ಇಂಥ ವಿಚಾರಗಳನ್ನು ನಂಬಬೇಡಿ ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.