ಎಟಿಎಂ ಓಪನ್ ಆಗುತ್ತೆ ಅಂತ ಕಾಯುತ್ತಿರುವವರಿಗೆ ಶಾಕಿಂಗ್ ಸುದ್ದಿ...!

By suvarna web deskFirst Published Nov 12, 2016, 4:19 AM IST
Highlights

ದೇಶದಲ್ಲಿ ಎಟಿಎಂ ಗಳ ಸಂಖ್ಯೆ ಸಾಕಷ್ಟು ದೊಡ್ಡದೇ ಇದೆ. ಆದರೆ ಅದಕ್ಕೆ ಹಣ ತುಂಬುವ ಸೇವಾದಾರರು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಮತ್ತು ಸದ್ಯಕ್ಕೆ ಎಟಿಎಂ ಬಳಕೆದಾರರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿರುವುದರಿಂದ ಒಟ್ಟಾರೆಯಾಗಿ ಎಟಿಎಂ ಸೇವೆ ಮಾಮೂಲಿಗೆ ಬರಲು ಕನಿಷ್ಠ ಹತ್ತು ಇನ್ನೂ ದಿನಗಳು ಬೇಕಾಗಬಹುದು ಎಂದು ಎಸ್‌ಬಿಐ ಹೇಳಿದೆ.

ಬೆಂಗಳೂರು(ನ.12): 500 ಹಾಗೂ 1000 ರುಪಾಯಿ ನೋಟ್ ನಿಷೇಧದಿಂದಾಗಿ ಬ್ಯಾಂಕ್ ಹಾಗೂ ಎಟಿಎಂ ಮುಂದೆ ಕ್ಯೂ ನಿಂತು, ಹಣಕ್ಕಾಗಿ ಪರದಾಡುತ್ತಿರುವ ಜನಕ್ಕೆ ಇದೊಂದು ಶಾಕಿಂಗ್ ಸುದ್ದಿ. ಎಟಿಎಂ ಸೇವೆ ಸಹಜ ಸ್ಥಿತಿಗೆ ಬರಲು ಇನ್ನೂ ಹತ್ತು ದಿನಗಳು ಬೇಕಾಗಬಹುದು ಎಂದು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ದೇಶದಲ್ಲಿ ಎಟಿಎಂ ಗಳ ಸಂಖ್ಯೆ ಸಾಕಷ್ಟು ದೊಡ್ಡದೇ ಇದೆ. ಆದರೆ ಅದಕ್ಕೆ ಹಣ ತುಂಬುವ ಸೇವಾದಾರರು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಮತ್ತು ಸದ್ಯಕ್ಕೆ ಎಟಿಎಂ ಬಳಕೆದಾರರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿರುವುದರಿಂದ ಒಟ್ಟಾರೆಯಾಗಿ ಎಟಿಎಂ ಸೇವೆ ಮಾಮೂಲಿಗೆ ಬರಲು ಕನಿಷ್ಠ ಹತ್ತು ಇನ್ನೂ ದಿನಗಳು ಬೇಕಾಗಬಹುದು ಎಂದು ಎಸ್‌ಬಿಐ ಹೇಳಿದೆ.

Latest Videos

ಆರ್ ಬಿಐ ಹೇಳಿರುವ ಪ್ರಕಾರ ಇಂದಿನಿಂದಲೇ ದೇಶಾದ್ಯಂತ ಎಟಿಎಂ ಸೇವೆಗಳು ಬಳಕೆದಾರರಿಗೆ ಲಭ್ಯವಾಗಲಿದ್ದು ನಗದಿಗಾಗಿ ಪರದಾಡುತ್ತಿರುವ ಜನರ ಸಮಸ್ಯೆ ಬಹುಮಟ್ಟಿಗೆ ನಿವಾರಣೆಯಾಗಲಿದೆ.

ಸರ್ಕಾರದ ಹೊಸ ಸೂಚನೆಯ ಪ್ರಕಾರ ಎಟಿಎಂ ಗಳಲ್ಲಿ ದಿನಕ್ಕೆ ಒಬ್ಬ ಬಳಕೆದಾರರ ಗರಿಷ್ಠ 2,000 ರೂ. ನಗದನ್ನು ಮಾತ್ರವೇ ಪಡೆಯುವುದಕ್ಕೆ ಅವಕಾಶವಿದೆ. ಆ ಪ್ರಕಾರ ಎಟಿಎಂ ವ್ಯವಸ್ಥೆಯನ್ನು  ಕಾನ್‌ಫಿಗರೇಶನ್‌ಮಾಡಬೇಕಿದೆ. ಇದನ್ನು ಒಂದರ ಬಳಿಕ ಒಂದಾಗಿ ಮಾಡಲಾಗುತ್ತಿದೆ. ಎಲ್ಲ ಬ್ಯಾಂಕುಗಳ ಎಟಿಎಂ ಸೇರಿ ದೇಶದಲ್ಲಿ ಒಟ್ಟು ಎರಡು ಲಕ್ಷ ಎಟಿಎಂ ಗಳಿವೆ. ಆದರೆ ಇವುಗಳ ಸೇವಾ ಪೂರೈಕೆದಾರರು ಕೇವಲ ಮೂರರಿಂದ ನಾಲ್ಕರ ಸಂಖ್ಯೆಯಲ್ಲಿದ್ದಾರೆ; ಜನರು ಇದನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕಾಗಿದೆ ಎಂದು ಬ್ಯಾಂಕ್‌ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ತಿಳಿಸಿದ್ದಾರೆ.

click me!