ಮಹದಾಯಿ ಸರ್ವಪಕ್ಷ ಸಭೆಯಲ್ಲಿ ಮೂಡದ ಒಮ್ಮತ; ಪ್ರಧಾನಿ ಭೇಟಿಗೆ ಸಿಎಂ ಪ್ರಸ್ತಾಪ

By Suvarna Web DeskFirst Published Jan 27, 2018, 1:40 PM IST
Highlights

ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಮಹದಾಯಿ ನದಿ ನೀರು ಹಂಚಿಕೆ ವಿವಾದ ವಿಚಾರವಾಗಿ ಇದು ನಡೆದ ಸರ್ವ ಪಕ್ಷ ಸಭೆಯಲ್ಲಿ  ಒಮ್ಮತ ಮೂಡದ ಕಾರಣ  ಪ್ರಧಾನಿ ಭೇಟಿಗೆ ನಿಯೋಗ ಒಯ್ಯುವ ಬಗ್ಗೆ ಸಿಎಂ ಪ್ರಸ್ತಾಪಿಸಿದ್ದಾರೆ.

ಬೆಂಗಳೂರು (ನ.27): ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಮಹದಾಯಿ ನದಿ ನೀರು ಹಂಚಿಕೆ ವಿವಾದ ವಿಚಾರವಾಗಿ ಇದು ನಡೆದ ಸರ್ವ ಪಕ್ಷ ಸಭೆಯಲ್ಲಿ  ಒಮ್ಮತ ಮೂಡದ ಕಾರಣ  ಪ್ರಧಾನಿ ಭೇಟಿಗೆ ನಿಯೋಗ ಒಯ್ಯುವ ಬಗ್ಗೆ ಸಿಎಂ ಪ್ರಸ್ತಾಪಿಸಿದ್ದಾರೆ.

ಕಾರ್ಯಕ್ರಮದ ನೆಪವೊಡ್ಡಿ ಸಭೆಯ ಅರ್ಧದಲ್ಲಿಯೇ ಡಿ ವಿ ಸದಾನಂದ ಗೌಡ ಎದ್ದು ಹೊರ ನಡೆದಿದ್ದಾರೆ.

ಗೋವಾ ಸಿಎಂ ಹಿಂದೇಟಿನ ಬಗ್ಗೆ  ವಾಕ್ಸಮರ ನಡೆದಿದೆ. ಪ್ರತಿಪಕ್ಷ ನಾಯಕರ ವಿರುದ್ಧ ಎಂ.ಬಿ.ಪಾಟೀಲ್,ವಿನಯ್ ಕುಲಕರ್ಣಿ ಗದಾ ಪ್ರಹಾರ ಮಾಡಿದ್ದಾರೆ.

ಸಮಸ್ಯೆಯತ್ತ ನೀವು ಗಮನಹರಿಸುತ್ತಿಲ್ಲ. ನೀರಿನ‌ ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದೀರ  ಎಂದು ವಿನಯ್ ಕುಲಕರ್ಣಿ,ಎಂ.ಬಿ.ಪಾಟೀಲ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ಕೂತು ರಾಜಕೀಯ ಮಾಡೋದು ಬೇಡ.  ಇಲ್ಲಿ ನಾವು ಹೇಗೆ ಒಗ್ಗಟ್ಟಿನಿಂದ ಇದ್ದಿವೋ ಅಲ್ಲಿಯೂ ಹಾಗೆ ಒಗ್ಗಟ್ಟಿನಲ್ಲಿ ಇರೋಕೆ ಹೇಳಿ.  ಗೋವಾ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸ್ತಾ ಇದ್ದಾರೆ.  ಅವರನ್ನು ಮೊದಲು ಸರಿ ಮಾಡಿ. ಆಮೇಲೆ ಪ್ರಧಾನಿ ಜೊತೆ ಮಾತನಾಡೋಣ.  ಅಲ್ಲಿ ಹೋಗಿ ಕೈ ನಾಯಕರ ಜೊತೆ ಮಾತನಾಡಿ.  ನಮ್ಮವರ ಜೊತೆ ನಾವು ಮಾತುಕತೆ ಮಾಡ್ತೇವೆ  ಎಂದು ಸಭೆಯಲ್ಲಿ ಸದಾನಂದ ಗೌಡ ಸಿಎಂಗೆ ಸಲಹೆ ನೀಡಿದ್ದಾರೆ.

 

click me!