
ಕೋಲ್ಕತಾ: ಸೊಳ್ಳೆಗಳು ಹರಡದಂತೆ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಅದನ್ನು ಪಾಲಿಸುವುದೇ ಇಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪಶ್ಚಿಮ ಬಂಗಾಳ ವಿಧಾನನಭೆ, ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿರುವ ಮನೆಯ ಮಾಲೀಕರಿಗೆ ಭಾರೀ ದಂಡ ವಿಧಿಸಲು ಮುಂದಾಗಿದೆ.
ಕೋಲ್ಕತಾ ಮತ್ತು ಹೌರಾ ನಗರ ಪಾಲಿಕೆಗಳಿಗೆ ಸೊಳ್ಳೆಗಳು ಕಾರಣವಾಗುವ ಮನೆಗಳಿಗೆ 1 ಲಕ್ಷ ರು. ವರೆಗೂ ದಂಡ ವಿಧಿಸಲು ಅಧಿಕಾರ ನೀಡುವ ಎರಡು ಮಸೂದೆಗಳನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಗಿದೆ.
ಕೋಲ್ಕತಾದಲ್ಲಿ ಸದ್ಯ ಸೊಳ್ಳೆಗಳನ್ನು ಹರಡುತ್ತಿರುವ ಮನೆಗಳಿಗೆ ಗರಿಷ್ಠ 5000 ರು. ವರೆಗೂ ದಂಡ ವಿಧಿಸಲಾಗುತ್ತಿದೆ. ಮಸೂದೆ ಜಾರಿಗೆ ಬಂದ ಬಳಿಕ ಕನಿಷ್ಠ ದಂಡದ ಪ್ರಮಾಣ 500 ರು.ನಿಂದ 1000 ರು.ಗೆ ಏರಿಕೆಯಾಗಲಿದೆ. ಅದೇ ರೀತಿ ಹೌರಾ ನಗರ ಪಾಲಿಕೆಗೂ ಪ್ರತ್ಯೇಕ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಮನೆ ಅಥವಾ ಆವರಣದ ಮಾಲಿಕರಿಗೆ ಸೊಳ್ಳೆ ಹರಡುವುದನ್ನು ತಡೆಗಟ್ಟಲು ಕಾಲಾವಕಾಶ ನೀಡಲಾಗುತ್ತದೆ. ಆದಾಗ್ಯೂ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ದಂಡ ವಿಧಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.