
ಉಡುಪಿ (ನ.26): ನಾವು ನಮ್ಮ ಬಳಿ ಲಕ್ಷ ಬೆಲೆ ಮೊಬೈಲ್ ಇಡುತ್ತೇವೆ. ಆದರೆ ಖಡ್ಗ ಇಟ್ಟುಕೊಂಡಿಲ್ಲ. ಮನೆ ಮನೆಗಳಲ್ಲಿ ಮೊಬೈಲ್ ಜತೆ ನಿಮ್ಮ ಬಳಿ ಕತ್ತಿ ಇಟ್ಟುಕೊಳ್ಳಿ. ರಕ್ಷಣೆಗಾಗಿ ಕತ್ತಿ ಹಿಡಿಯಿರಿ ಎಂದು ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್'ನಲ್ಲಿ ನರೇಂದ್ರ ಬಾಯಿ ಕಾಶಿ ಸ್ವಾಮೀಜಿ ಹೇಳಿದ್ದಾರೆ.
ನಮ್ಮ ಮನೆಯಲ್ಲಿ ನಮ್ಮ ರಕ್ಷಣೆಗಾಗಿ ಯಾವುದೇ ಖಡ್ಗವನ್ನು ಇಟ್ಟುಕೊಳ್ಳುವುದಿಲ್ಲ. ಮೊದಲು ನಾವು ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು. ನಾವು ನಮ್ಮ ರಕ್ಷಣೆಗಾಗಿ ನಮ್ಮ ಮನೆಯಲ್ಲಿ ಕೋಲನ್ನು ಸಹ ಇಟ್ಟುಕೊಳ್ಳುವುದಿಲ್ಲ. ನಮ್ಮ ದೇಶದ ರಕ್ಷಣೆ ಮೊದಲು ಸಮರ್ಪಕವಾದರೆ ರಾಮಮಂದಿರ ಕಟ್ಟಿಕೊಳ್ಳಬಹುದು. ಮೊದಲು ನಮ್ಮ ದೇಶ ಸಶಕ್ತವಾಗಬೇಕಾಗಿದೆ ಎಂದು ನರೇಂದ್ರ ಬಾಯಿ ಕಾಶಿ ಸ್ವಾಮೀಜಿ ಹೇಳಿದ್ದಾರೆ.
ನಮ್ಮ ನಮ್ಮ ಮನೆಗಳಲ್ಲಿ ನಮ್ಮ ರಕ್ಷಣೆಗೆ ಕತ್ತಿ, ಕೋಲು ಹಿಡಿಬೇಕು. 50 ಸಾವಿರ ರೂಪಾಯಿ ಮೊಬೈಲ್ ಇಟ್ಟುಕೊಳ್ಳುವ ನಾವು ರಕ್ಷಣೆ ಬಗ್ಗೆ ಚಿಂತಿಸಿಲ್ಲ. ಆದ್ದರಿಂದ ಮೊಬೈಲ್ ಇಟ್ಟುಕೊಂಡರೂ ಮೊಬೈಲ್ ಜತೆ ಕತ್ತಿ, ಕೋಲು ಹಿಡಿಯಿರಿ ಎಂದು ಉಡುಪಿಯಲ್ಲಿ ಧರ್ಮ ಸಂಸದ್ ನಲ್ಲಿ ನರೇಂದ್ರ ಬಾಯಿ ಕಾಶಿ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.