
ಯಳಂದೂರು(ನ.26): ವಿದ್ಯುತ್ ತಂತಿಗಳು ಒಂದಕ್ಕೊಂದು ಸ್ಪರ್ಶಿಸಿದ್ದರಿಂದ ಹೊತ್ತಿದ ಬೆಂಕಿ ಕಿಡಿಗೆ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಫಸಲು ಆಹುತಿಯಾಗಿರುವ ಘಟನೆ ತಾಲೂಕಿನ ಯರಿಯೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ರೈತರಾದ ಮಹದೇವಶೆಟ್ಟಿ, ಸಿದ್ದಶೆಟ್ಟಿ, ಗೋವಿಂದಶೆಟ್ಟಿ, ಕೆಂಪಶೆಟ್ಟಿ, ಮಹೇಶ್ ಎಂಬ ರೈತರು ಕಬ್ಬಿನ ಫಸಲು ಕಳೆದು ಕೂಂಡಿದ್ದಾರೆ. ರೈತರ ಜಮೀನಿನ ನಡುವೆ ಹಾದು ಹೋಗಿದ್ದ ವಿದ್ಯುತ್ ತಂತಿಗಳು ಶನಿವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಜೋರಾಗಿ ಬಿಸಿದ ಗಾಳಿ ರಭಸಕ್ಕೆ ಒಂದಕ್ಕೊಂದು ತಾಗಿ ಬೆಂಕಿ ಉಂಟಾಗಿದ್ದರಿಂದ ಕಬ್ಬಿನ ಗದ್ದೆ ಕೆನ್ನಾಲಿಗೆಗೆ ಸಿಲುಕಿದೆ. ರೈತರು ನೋಡುತ್ತಿದಂತೆಯೇ ಬೆಂಕಿಯ ಆರ್ಭಟಕ್ಕೆ ಹುಲುಸಾಗಿ ಬೆಳೆದಿದ್ದ ಕಬ್ಬು ಭಸ್ಮವಾಗಿದೆ.
ಕಣ್ಣೀರಿಟ್ಟ ರೈತರು: ವಿದ್ಯುತ್ ತಂತಿಗಳು ಜೋತು ಬಿದ್ದಿರುವುದನ್ನು ಚೆಸ್ಕಾಂ ಎಂಜಿನಿಯರ್ ಮತ್ತು ಲೈನ್ ಮ್ಯಾನ್'ಗಳ ಗಮನಕ್ಕೆ ತಂದರೂ ಕೂಡಾ ಚೆಸ್ಕಾಂ ಅಧಿಕಾರಿಗಳ ತಂತಿಗಳನು ದುರಸ್ತಿಪಡಿಸಲು ಉಡಾಫೆ ತೋರಿದ್ದರಿಂದ ನಾವು ಬೆಳೆದ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಇದಕ್ಕೆ ಚೆಸ್ಕಾಂ ಅಧಿಕಾರಿಗಳೇ ಸಂಪೂರ್ಣ ಹೊಣೆ ಎಂದು ಫಸಲು ಕಳೆದುಕೊಂಡ ರೈತರು ಆರೋಪಿಸಿದರು.
ಬಣ್ಣಾರಿ ಅಮ್ಮನ್ ಕರ್ಖಾನೆ ನಿರ್ಲಕ್ಷ್ಯ: ರೈತರು ಈಗಾಗಲೇ ಬೆಳೆದಿದ್ದ ಕಬ್ಬಿಗೆ 14 ತಿಂಗಳು ಮುಗಿದಿತ್ತು. ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕರ್ಖಾನೆಗೆ ಕಬ್ಬು ತರಿಯಲು ರೈತರು ಮನವಿ ಮಾಡಿದ್ದರು. ಕಾರ್ಖಾನೆ ಅಧಿಕಾರಿಗಳು ಸಕಾಲದಲ್ಲಿ ಕಬ್ಬು ಕಟಾವ್ ಮಾಡಿದ್ದರೆ ಉತ್ತಮ ಲಾಭ ಬರುತ್ತಿತ್ತು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಬ್ಬು ಆಕಸ್ಮಿಕ ವಿದ್ಯುತ್ ತಂತಿಯ ಸ್ಪರ್ಶಕ್ಕೆ ಆಹುತಿಯಾಗಿದೆ ಎಂದು ಬಣ್ಣಾರಿ ಅಮ್ಮನ್ ಅಧಿಕಾರಿಗಳ ವಿರುದ್ಧ ಕೆಲವು ರೈತರು ಬೇಸರ ವ್ಯಕ್ತಪಡಿಸಿದರು. ಘಟನೆಗೆ ಸಂಬಂದಿಸಿದಂತೆ ರೈತರು ಪರಿಹಾರ ನೀಡಬೇಕೆಂದು ಯಳಂದೂರು ಪೊಲೀಸ್ ಠಾಣೆ ಮತ್ತು ತಹಸೀಲ್ದಾರ್ ಕಚೇರಿ ಮತ್ತು ಚೆಸ್ಕಾಂ ಇಲಾಖೆ ದೂರು ನೀಡಿದ್ದಾರೆ.
ಪರಿಹಾರಕ್ಕೆ ಆಗ್ರಹ: ವಿದ್ಯುತ್ ಅವಘಡದಿಂದ ರೈತರಿಗೆ 4 ಲಕ್ಷ ರು. ನಷ್ಟವಾಗಿದೆ. ಇದಕ್ಕೆ ಚೆಸ್ಕಾಂ ಇಲಾಖೆ ಅಧಿಕಾರಿಗಳೇ ನೇರ ಹೊಣೆ. ಅಧಿಕಾರಿಗಳು ರೈತರು ಕಳೆದುಕೊಂಡಿರುವ ಕಬ್ಬಿನ ಫಸಲಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಯರಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಕ್ಯಾತಯ್ಯನ ಮಹೇಶ್ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.