ತಾಜ್ ಮಹಲ್ ಶೀಘ್ರದಲ್ಲಿ ತೇಜ್ ಮಂದಿರ?

By Suvarna Web DeskFirst Published Feb 5, 2018, 5:44 PM IST
Highlights

ಆಗ್ರಾದಲ್ಲಿ ಹಮ್ಮಿಕೊಳ್ಳಲಾಗಿರುವ ‘ತಾಜ್ ಮಹೋತ್ಸವ್’ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ

ಫೆ.18ರಿಂದ 10ದಿನಗಳ ಕಾಲ ಆಗ್ರಾದಲ್ಲಿ ತಾಜ್ ಮಹೋತ್ಸವ ಕಾರ್ಯಕ್ರಮ

ನವದೆಹಲಿ: ವಿಶ್ವವಿಖ್ಯಾತ ತಾಜ್ ಮಹಲ್ ಶೀಘ್ರದಲ್ಲೇ ‘ತೇಜ್ ಮಂದಿರ’ವಾಗಲಿರುವುದು ಎಂದು ಹೇಳುವ ಮೂಲಕ ಬಿಜೆಪಿ ಸಂಸದ ವಿನಯ ಕಟಿಯಾರ್ ವಿವಾದವನ್ನೆಬ್ಬಿಸಿದ್ದಾರೆ.

ಆಗ್ರಾದಲ್ಲಿ ಹಮ್ಮಿಕೊಳ್ಳಲಾಗಿರುವ ‘ತಾಜ್ ಮಹೋತ್ಸವ್’ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಕಟಿಯಾರ್, ತಾಜ್ ಮಹೋತ್ಸವ ಅಥವಾ ತೇಜ್ ಮಹೋತ್ಸವ ಎರಡೂ ಒಂದೇ. ಅವುಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಶೀಘ್ರದಲ್ಲೇ ತಾಜ್ ಮಹಲನ್ನು ತೇಜ್ ಮಂದಿರವಾಗಿ ಮಾರ್ಪಾಡು ಮಾಡಲಾಗುವುದು, ಎಂದು ಹೇಳಿದ್ದಾರೆ.

ಈ ಹಿಂದೆ, ತಾಜ್ ಮಹಲ್ ಶಿವ ಮಂದಿರವಾಗಿತ್ತು ಎಂದು ಹೇಳುವ ಮೂಲಕ ಕಟಿಯಾರ್ ವಿವಾದವನ್ನು ಸೃಷ್ಟಿಸಿದ್ದರು.

ತಾಜ್ ಮಹಲ್ ಈ ಹಿಂದೆ ಶಿವಮಂದಿರವಾಗಿತ್ತು. ಅದರಲ್ಲಿ ಶಿವಲಿಂಗವೂ ಇತ್ತು.  ಮೊಘಲರು ಅದನ್ನು ತೆಗೆದು ಹಾಕಿದ್ದಾರೆ, ಎಂದು ಅವರು ಹೇಳಿದ್ದರು.

ಫೆ.18ರಿಂದ 10ದಿನಗಳ ಕಾಲ ಆಗ್ರಾದಲ್ಲಿ ತಾಜ್ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.

click me!