ತೈವಾನ್‌ನಲ್ಲಿ ಸಲಿಂಗ ವಿವಾಹ ಸಕ್ರಮ: ಏಷ್ಯಾದ ಮೊದಲ ದೇಶ

By Web DeskFirst Published May 18, 2019, 9:16 AM IST
Highlights

ತೈವಾನ್‌ನಲ್ಲಿ ಸಲಿಂಗ ವಿವಾಹ ಸಕ್ರಮ: ಇಂಥ ಕ್ರಮ ಕೈಗೊಂಡ ಏಷ್ಯಾದ ಮೊದಲ ದೇಶ

ತೈಪೆ[ಮೇ.18]: ಸಲಿಂಗ ವಿವಾಹಕ್ಕೆ ಅನುಮತಿ ನೀಡುವ ಕಾನೂನಿಗೆ ತೈವಾನ್‌ ಸಂಸತ್ತು ಶುಕ್ರವಾರ ಅನುಮೋದನೆ ನೀಡಿದೆ. ಈ ಮೂಲಕ ಇಲ್ಲಿನ ಸಲಿಂಗಕಾಮಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ತೈವಾನ್‌ ಏಷ್ಯಾದಲ್ಲೇ ಇಂಥ ಮಹತ್ವದ ಕ್ರಮ ಕೈಗೊಂಡ ಮೊದಲ ದೇಶ ಎಂಬ ಇತಿಹಾಸ ಸೃಷ್ಟಿಸಿದೆ.

ಸಲಿಂಗಕಾಮದ ಕುರಿತು ದ್ವೇಷ ಭಾವನೆ ಹೊಂದಿದ ವಿರೋಧಿ ದಿನಾಚರಣೆಯಂದೇ ಸಲಿಂಗ ವಿವಾಹಕ್ಕೆ ಅನುಮತಿ ನೀಡುವ ಮಸೂದೆಯನ್ನು ತೈವಾನ್‌ ಸಂಸತ್ತು ಅನುಮೋದನೆಗೊಳಿಸಿದೆ. ಈ ಮೂಲಕ ತೈವಾನ್‌ನಲ್ಲಿ ಒಂದೇ ಲಿಂಗದ ಮದುವೆಗೆ ಕಾನೂನು ಮಾನ್ಯತೆ ನೀಡಿದೆ. ಹಾಗಾಗಿ, ಒಂದೇ ಲಿಂಗದ ಪುರುಷರು ಅಥವಾ ಮಹಿಳೆಯರು ಸಹ ತಮ್ಮ ವಿವಾಹವನ್ನು ನೋಂದಾಯಿಸಬಹುದಾಗಿದೆ.

ಈ ಸಂದರ್ಭದಲ್ಲಿ ಸಂಸತ್ತಿನ ಹೊರಗೆ ಧಾರಾಕಾರ ಮಳೆ ಸುರಿಯುತ್ತಿದ್ದರೂ, ರೇನ್‌ಬೋ ಬಾವುಟಗಳನ್ನು ಸಲಿಂಗಕಾಮಿಗಳು ಪ್ರದರ್ಶಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

click me!