ಮುಂಬೈ ಸ್ಫೋಟ: ಅಬುಲ್ ಸಲೆಂಗೆ ಜೀವಾವಧಿ ಶಿಕ್ಷೆ; ಇಬ್ಬರಿಗೆ ಮರಣ ದಂಡನೆ; ಕೋರ್ಟ್ ಮಹತ್ವದ ತೀರ್ಪು

By Suvarna Web DeskFirst Published Sep 7, 2017, 1:47 PM IST
Highlights

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಬು ಸಲೆಂಗೆ ಜೀವಾವಧಿ ಶಿಕ್ಷೆ ವಿಧಿಸಿ ಟಾಡಾ ಕೋರ್ಟ್ ತೀರ್ಪು ನೀಡಿದೆ. ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಎಂಬಿಬ್ಬರಿಗೆ ಮರಣದಂಡನೆ ಶಿಕ್ಷೆ ನೀಡಿದೆ. ಕರೀಮುಲ್ಲಾ ಖಾನ್ ಎಂಬಾತನಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ. ರಿಯಾಜ್ ಸಿದ್ದಿಕಿ ಎಂಬ ಅಪರಾಧಿಗೆ 10 ವರ್ಷ ಸೆರೆಮನೆವಾಸದ ಸಜೆ ನೀಡಿಲಾಗಿದೆ.

ಮುಂಬೈ(ಸೆ. 07): 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಬು ಸಲೆಂಗೆ ಜೀವಾವಧಿ ಶಿಕ್ಷೆ ವಿಧಿಸಿ ಟಾಡಾ ಕೋರ್ಟ್ ತೀರ್ಪು ನೀಡಿದೆ. ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಎಂಬಿಬ್ಬರಿಗೆ ಮರಣದಂಡನೆ ಶಿಕ್ಷೆ ನೀಡಿದೆ. ಕರೀಮುಲ್ಲಾ ಖಾನ್ ಎಂಬಾತನಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ. ರಿಯಾಜ್ ಸಿದ್ದಿಕಿ ಎಂಬ ಅಪರಾಧಿಗೆ 10 ವರ್ಷ ಸೆರೆಮನೆವಾಸದ ಸಜೆ ನೀಡಿಲಾಗಿದೆ.

ಯಾರಾರಿಗೆ ಶಿಕ್ಷೆ?
1) ಅಬು ಸಲೆಂ: ಜೀವಾವಧಿ
2) ಕರೀಮುಲ್ಲಾ ಖಾನ್: ಜೀವಾವಧಿ
3) ತಾಹಿರ್ ಮರ್ಚೆಂಟ್: ಮರಣದಂಡನೆ
4) ಫಿರೋಜ್ ಖಾನ್: ಮರಣದಂಡನೆ
5) ರಿಜಾಜ್ ಸಿದ್ದಿಕಿ: 10 ವರ್ಷ ಜೈಲು

ಜೂನ್ 16ರಂದು ಟಾಟಾ ನ್ಯಾಯಾಲಯವು ಈ ಪ್ರಕರಣದಲ್ಲಿ ಅಬು ಸಲೆಂ ಸೇರಿದಂತೆ 6 ಜನರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಇವರ ಪೈಕಿ ಮುಸ್ತಾಫಾ ದೋಸ್ಸಾ ಎಂಬಾತ ಸಾವನ್ನಪ್ಪಿದ್ದಾನೆ.

1993ರ ಮಾರ್ಚ್ 12ರಂದು ಮಧ್ಯಾಹ್ನದ ವೇಳೆ ಮುಂಬೈನ ವಿವಿಧೆಡೆ 12 ಬಾಂಬ್ ಸ್ಫೋಟಗಳಾಗಿದ್ದವು. ಈ ಕೃತ್ಯದಲ್ಲಿ 257 ಜನರು ಬಲಿಯಾಗಿ, 713 ಜನರಿಗೆ ಗಾಯಗಳಾಗಿದ್ದವು. ಮುಂಬೈ ಪೊಲೀಸರು ಈ ಪ್ರಕರಣದ ಆರಂಭಿಕ ತನಿಖೆ ಮಾಡಿದ್ದರಾದರೂ, ಸಿಬಿಐನಿಂದಲೇ ಬಹುತೇಕ ತನಿಖೆಯಾಗಿದೆ.

click me!