ಸಬೂಬು ಬಿಡಿ, ಕಾರ್ಡ್ ಬಳಸಿ ದಂಡ ಕಟ್ಟಿ: ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ದಂಡ ಪಾವತಿ

Published : Aug 15, 2017, 09:05 AM ISTUpdated : Apr 11, 2018, 01:09 PM IST
ಸಬೂಬು ಬಿಡಿ, ಕಾರ್ಡ್ ಬಳಸಿ ದಂಡ ಕಟ್ಟಿ: ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ದಂಡ ಪಾವತಿ

ಸಾರಾಂಶ

ಇನ್ಮುಂದೆ ನೀವು ಸಂಚಾರ ನಿಯಮ ಉಲ್ಲಂಘಿಸಿ ಜೇಬಿನಲ್ಲಿ ಹಣವಿಲ್ಲ ಎಂದು ಸಬೂಬು ಹೇಳುವಂತಿಲ್ಲ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇದ್ದರೂ ಸ್ಥಳದಲ್ಲೇ ಟ್ರಾಫಿಕ್ ಪೊಲೀಸರಿಗೆ ದಂಡ ಪಾವತಿಸಬಹುದು.

ಬೆಂಗಳೂರು(ಆ.15): ಇನ್ಮುಂದೆ ನೀವು ಸಂಚಾರ ನಿಯಮ ಉಲ್ಲಂಘಿಸಿ ಜೇಬಿನಲ್ಲಿ ಹಣವಿಲ್ಲ ಎಂದು ಸಬೂಬು ಹೇಳುವಂತಿಲ್ಲ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇದ್ದರೂ ಸ್ಥಳದಲ್ಲೇ ಟ್ರಾಫಿಕ್ ಪೊಲೀಸರಿಗೆ ದಂಡ ಪಾವತಿಸಬಹುದು.

ನೋಟು ಅಮ್ಯಾನೀಕರಣ ಬಳಿಕ ವಾಣಿಜ್ಯ ವಹಿವಾಟು ಸೇರಿದಂತೆ ಎಲ್ಲೆಡೆ ಕಂಡು ಬಂದ ‘ಡಿಜಿಟಲ್ ಮನಿ’ ವ್ಯವಸ್ಥೆಯನ್ನು ಈಗ ಸಂಚಾರ ಪೊಲೀಸರು ಅಳವಡಿಸಿಕೊಂಡಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದಲೇ ಇಲಾಖಾ ಮಟ್ಟದಲ್ಲಿ ಚರ್ಚೆಗೆ ಬಂದಿತು. ಈಗ ಕೊನೆಗೆ ನಗರದ ವ್ಯಾಪ್ತಿಯಲ್ಲಿ ಕಾರ್ಡ್ ಸ್ವೈಪ್ ಮೂಲಕ ಟ್ರಾಫಿಕ್ ದಂಡ ಪಾವತಿ ವ್ಯವಸ್ಥೆ ಜಾರಿಗೊಂಡಿದೆ.

ಪಾನಮತ್ತ ಚಾಲನೆ, ಸಿಗ್ನಲ್ ಜಂಪಿಂಗ್, ಹೆಲ್ಮಟ್ ಧರಿಸದೆ ಚಾಲನೆ, ತ್ರಿಬಲ್ ರೈಡಿಂಗ್, ಪಾರ್ಕಿಂಗ್ ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿದಂತೆ ಸಂಚಾರ ನಿಯಮ ಮೀರಿದರೆ ದಂಡವನ್ನು ಕಾರ್ಡ್ ಉಪಯೋಗಿಸಿ ಪಾವತಿಸಬಹುದು ಎಂದು ಅಧಿಕಾರಗಳು ಮಾಹಿತಿ ನೀಡಿದ್ದಾರೆ. ಗರಿಷ್ಠ ನೋಟುಗಳ ಚಲಾವಣೆ ರದ್ದುಗೊಂಡ ನಂತರ ನಾಗರಿಕರಿಗೆ ನಗದು ಹಣ ಪಾವತಿಸಲು ಸಮಸ್ಯೆ ಹೇಳುತ್ತಿದ್ದರು. ಇದು ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ದಂಡ ವಸೂಲಿ ಮೇಲೆ ಪರಿಣಾಮ ಉಂಟಾಯಿತು. ಹೀಗಾಗಿ ಜನರಿಗೆ ಸ್ವೈಪಿಂಗ್ ಮೂಲಕ ದಂಡ ಪಾವತಿಗೆ ಅವಕಾಶ ಕೊಡಲು ನಿರ್ಧರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಆರು ತಿಂಗಳ ಹಿಂದೆ ದಂಡ ವಸೂಲಿಗೆ ಸಂಚಾರ ಠಾಣೆ ಪೊಲೀಸರು ಬಳಸುತ್ತಿದ್ದ ಬ್ಲಾಕ್ ಬೆರ್ರಿ ಸಾಧನವನ್ನು ಬದಲಿಸಿ ಪಿಡಿಎ (ಪರ್ಸನಲ್ ಡಿಜಿಟಲ್ ಆಸ್ಟಿಟೆಂಟ್ಸ್) ಸಾಧನ ನೀಡಲಾಯಿತು. ಈಗ ಆ ಡಿವೈಸ್‌ಗೆ ಸ್ವೆ‘ಪಿಂಗ್ ಅಳವಡಿಸಲಾಗಿದೆ. ಎರಡು ದಿನಗಳ ಹಿಂದೆ ಮೊದಲ ಹಂತವಾಗಿ ಕೆಲ ಆಯ್ದ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು.

ಕಾರ್ಯನಿರ್ವಹಣೆಗೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆ ಭಾನುವಾರದಿಂದ ನಗರ ವ್ಯಾಪ್ತಿಯಲ್ಲಿ ಸ್ವೈಪಿಂಗ್ ಮೂಲಕ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಪಿಡಿಎ ಸಾಧನದಲ್ಲಿ ಕ್ಯಾಮೆರಾ ಸಹ ಅಳವಡಿಸಲಾಗಿದೆ. ಹೀಗಾಗಿ ದಂಡ ಪಾವತಿಸುವ ವೇಳೆ ನಾಗರಿಕರು ದುಂಡಾವರ್ತನೆ ತೋರಿದರೂ ಆ ದೃಶ್ಯಾವಳಿಗಳು ಪಿಡಿಎ ಸಾ‘ನದಲ್ಲಿ ಸೆರೆಯಾಗಲಿದೆ. ಇದರಿಂದ ಪುಂಡಾಟಿಕೆ ನಿಯಂತ್ರಣ ಬಿದ್ದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌