ಕೆಪಿಸಿಸಿ ಸಭೆಯಲ್ಲಿ ಸಂಚಲನ ಮೂಡಿಸಿದೆ 'ಸುವರ್ಣ ನ್ಯೂಸ್-ಕನ್ನಡ ಪ್ರಭ' ಸಮೀಕ್ಷೆ

Published : Dec 07, 2017, 05:32 PM ISTUpdated : Apr 11, 2018, 12:44 PM IST
ಕೆಪಿಸಿಸಿ ಸಭೆಯಲ್ಲಿ ಸಂಚಲನ ಮೂಡಿಸಿದೆ 'ಸುವರ್ಣ ನ್ಯೂಸ್-ಕನ್ನಡ ಪ್ರಭ' ಸಮೀಕ್ಷೆ

ಸಾರಾಂಶ

ಕಾಂಗ್ರೆಸ್ ಸಭೆಯಲ್ಲಿ  ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ನಡೆಸಿದ ಚುನಾವಣಾ ಸಮೀಕ್ಷೆ ಸದ್ದು ಮಾಡಿದೆ.

ಬೆಂಗಳೂರು (ಡಿ.07): ಕಾಂಗ್ರೆಸ್ ಸಭೆಯಲ್ಲಿ  ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ನಡೆಸಿದ ಚುನಾವಣಾ ಸಮೀಕ್ಷೆ ಸದ್ದು ಮಾಡಿದೆ.

ಇಂದು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ ಗುಂಡೂರಾವ್, ಎಸ್ ಆರ್ ಪಾಟೀಲ್ ಹಾಗೂ ಎಐಸಿಸಿ ಇತರೆ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಸುವರ್ಣ ನ್ಯೂಸ್-ಕನ್ನಡ ಪ್ರಭ ಚುನಾವಣಾ ಸಮೀಕ್ಷೆ ಚರ್ಚೆಯಾಗಿದೆ. ಸಮೀಕ್ಷೆ ಪ್ರಕಾರ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಕಳಪೆ ಎಂದು ಬಂದಿದ್ದರ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದು,  ಮುಂಬೈ, ಮಧ್ಯ ಕರ್ನಾಟಕದಲ್ಲೂ ಪಕ್ಷ ಬಲಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸಮೀಕ್ಷೆಯನ್ನ ಲಘುವಾಗಿ ಪರಿಗಣಿಸಬೇಡಿ ಎಂದು  ಕಾಂಗ್ರೆಸ್ ಅನ್ನು ಎಚ್ಚರಿಸಿದ್ದಾರೆ.

ಜೆಡಿಎಸ್, ಬಿಜೆಪಿ ಪ್ರಬಲವಾಗಿರುವ ಭಾಗದಲ್ಲಿ ಪಕ್ಷ ಬಲಪಡಿಸಲು ವೇಣುಗೋಪಾಲ್ ಸೂಚನೆ ನೀಡಿದ್ದು,  ಈ ಸಮೀಕ್ಷೆ ನಮ್ಮ ತಪ್ಪುಗಳನ್ನ ಎತ್ತಿ ತೋರಿಸಿದೆ ಎಂದೇ ಭಾವಿಸಿ. ಗಂಭೀರವಾಗಿ  ಪಕ್ಷ ಸಂಘಟಿಸುವಂತೆ ಸೂಚನೆ ನೀಡಿದ್ದಾರೆ. ಉತ್ಸುಕರಾಗಿಯೇ ವೇಣುಗೋಪಾಲ್ ಸುವರ್ಣ ನ್ಯೂಸ್-ಕನ್ನಡ ಪ್ರಭ  ಸಮೀಕ್ಷೆಯ ವಿವರವನ್ನ ಪಡೆದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶತ್ರುಗಳನ್ನು ಕ್ಷಮಿಸುವುದಕ್ಕೇ ಹುಟ್ಟಿದ ಯೇಸು.. ಒಳ್ಳೆಯದಕ್ಕೆ ಸಿಕ್ಕಿದ್ದು ಶಿಕ್ಷೆ ಮಾತ್ರ!
ತಮಿಳುನಾಡು ಹೆದ್ದಾರಿಯಲ್ಲೂ ಚಿತ್ರದುರ್ಗ ಮಾದರಿ ದುರಂತ, ಸರ್ಕಾರಿ ಬಸ್‌ ಪಂಚರ್‌ ಆಗಿ 9 ಮಂದಿ ಸಾವು!