
ನವದೆಹಲಿ (ಡಿ.07): ಆಗ್ರಾದ ತಾಜ್ ಮಹಲ್ ಒಂದು ಕಾಲದಲ್ಲಿ ಹಿಂದೂ ದೇವಸ್ಥಾನವಾಗಿತ್ತು ಎಂದು ಈ ಹಿಂದೆ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದ ಬಿಜೆಪಿ ಸಂಸದ ವಿನಯ್ ಕಟಿಯಾರ್ ಇದೀಗ ದಿಲ್ಲಿಯ ಜಾಮಾ ಮಸೀದಿ 'ಜಮುನಾ ದೇವಿ ದೇವಸ್ಥಾನ'ವಾಗಿತ್ತು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಮೊಘಲರ ಆಡಳಿತಕ್ಕಿಂತ ಮುಂಚೆ ಜಾಮಾ ಮಸೀದಿ 'ಜಮುನಾ ದೇವಿ ದೇವಸ್ಥಾನ'ವಾಗಿತ್ತು. ಈ 17ನೇ ಶತಮಾನದ ಮಸೀದಿಯ ನಿರ್ಮಾಣಕ್ಕೆ ತಾಜ್ ಮಹಲ್ ಮತ್ತು ಕೆಂಪು ಕೋಟೆ ನಿರ್ಮಿಸಿದ್ದ ಶಹಜಹಾನ್ ಕಾರಣನಾಗಿದ್ದ. ಮೊಘಲ್ ಅರಸರು ನಾಶಗೈದ ಸುಮಾರು 6,000 ಸ್ಥಳಗಳಿವೆ. ದಿಲ್ಲಿಯ ಜಾಮಾ ಮಸೀದಿ ಮೂಲತಃ ಜಮುನಾ ದೇವಿ ದೇವಸ್ಥಾನವಾಗಿದ್ದರೆ, ತಾಜ್ ಮಹಲ್ ತೇಜೋ ಮಹಾಲಯವಾಗಿತ್ತು'' ಎಂದು ಕಟಿಯಾರ್ ಹೇಳಿದ್ದಾರೆ. ಉತ್ತರ ಪ್ರದೇಶ ಸರಕಾರ ತನ್ನ ಪ್ರವಾಸೋದ್ಯಮ ಕೈಪಿಡಿಯಿಂದ ತಾಜ್ ಮಹಲ್ ಅನ್ನು ಕೈಬಿಟ್ಟಿದ್ದಾಗ ಅದೊಂದು ಹಿಂದೂ ದೇವಾಲಯ ಹಾಗೂ ಅಲ್ಲಿ ಶಿವನ ಮೂರ್ತಿಯಿತ್ತು ಎಂದು ಕಟಿಯಾರ್ ಹೇಳಿದ್ದರು. ಅಯೋಧ್ಯೆ ವಿವಾದದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಇದೀಗ ಕಟಿಯಾರ್ ಅವರ ವಿವಾದಾತ್ಮಕ ಹೇಳಿಕೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.