ಸುವರ್ಣ ನ್ಯೂಸ್ ನಿರಂತರ ಅಭಿಯಾನದ ದೊಡ್ಡ ಯಶಸ್ಸು: ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಿದ ಸರ್ಕಾರ

By Suvarna Web DeskFirst Published Oct 28, 2016, 8:57 AM IST
Highlights

ನವೆಂಬರ್​ 2ರಿಂದ ರಾಜ್ಯ ಸರ್ಕಾರ ಮಾರುಕಟ್ಟೆ ಪ್ರವೇಶ ಮಾಡಲಿದ್ದು, ಎಲ್ಲಾ ಎಪಿಎಂಸಿಗಳಲ್ಲಿ ಟಿಎಪಿಸಿಎಂಎಸ್​ ಮೂಲಕ ಈರುಳ್ಳಿ ಖರೀದಿ ನಡೆಯಲಿದೆ. ಖರೀಸಿದ ಈರುಳ್ಳಿ ದಾಸ್ತಾನು ಮತ್ತು ರಪ್ತು ಬಗ್ಗೆ ಇನ್ನಷ್ಟೇ ನಿರ್ಧಾರ ಆಗಬೇಕಾಗಿದ್ದು, ಧಾರವಾಡ,  ಗದಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಚಿಕ್ಕಮಗಳೂರು, ಹಾವೇರಿ, ಬೆಳಗಾವಿ, ವಿಜಯಪುರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಖರೀದಿ ನಡೆಯಲಿದೆ. ಈರುಳ್ಳಿ ಬೆಳೆಗಾರರ ಸಂಕಷ್ಟದ ಬಗ್ಗೆ ಸುವರ್ಣ ನ್ಯೂಸ್​ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

ಬೆಂಗಳೂರು(ಅ.28): ಕೊನೆಗೂ ರಾಜ್ಯದ ಈರುಳ್ಳಿ ಬೆಳೆಗಾರರ ನೆರವಿಗೆ ಕೊನೆಗೂ ರಾಜ್ಯ ಸರ್ಕಾರ ಧಾವಿಸಿದೆ. ಮೂರುವರೆ ಲಕ್ಷ ಎಕರೆಯಲ್ಲಿ ಬೆಳೆದಿರುವ 23 ಲಕ್ಷ ಮೆಟ್ರಿಕ್​ ಟನ್​ ಈರುಳ್ಳಿಯನ್ನು ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರತಿ ಕೆಜಿಗೆ 6 ರೂ. 24 ಪೈಸೆ ಬೆಲೆ ನಿಗದಿ ಮಾಡಿದೆ.

ನವೆಂಬರ್​ 2ರಿಂದ ರಾಜ್ಯ ಸರ್ಕಾರ ಮಾರುಕಟ್ಟೆ ಪ್ರವೇಶ ಮಾಡಲಿದ್ದು, ಎಲ್ಲಾ ಎಪಿಎಂಸಿಗಳಲ್ಲಿ ಟಿಎಪಿಸಿಎಂಎಸ್​ ಮೂಲಕ ಈರುಳ್ಳಿ ಖರೀದಿ ನಡೆಯಲಿದೆ. ಖರೀಸಿದ ಈರುಳ್ಳಿ ದಾಸ್ತಾನು ಮತ್ತು ರಪ್ತು ಬಗ್ಗೆ ಇನ್ನಷ್ಟೇ ನಿರ್ಧಾರ ಆಗಬೇಕಾಗಿದ್ದು, ಧಾರವಾಡ,  ಗದಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಚಿಕ್ಕಮಗಳೂರು, ಹಾವೇರಿ, ಬೆಳಗಾವಿ, ವಿಜಯಪುರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಖರೀದಿ ನಡೆಯಲಿದೆ.

Latest Videos

ಈರುಳ್ಳಿ ಬೆಳೆಗಾರರ ಸಂಕಷ್ಟದ ಬಗ್ಗೆ ಸುವರ್ಣ ನ್ಯೂಸ್​ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

click me!