
ನ್ಯಾಷನಲ್ ಹೈವೇ ಭೂಸ್ವಾದೀನಕ್ಕೆ ವಿಜಯಪುರ ಜಿಲ್ಲೆಯಲ್ಲಿ ನಡೆದ ಬೃಹತ್ ಹಗರಣವನ್ನು ಸುವರ್ಣ ನ್ಯೂಸ್ ಬಯಲು ಮಾಡಿತ್ತು. ಕೇಂದ್ರ ಸಚಿವ ಜಿಗಜಿಣಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ರು. ಇದೀಗ ಪ್ರಧಾನ ಮಂತ್ರಿ ಕಚೇರಿಯಿಂದಲೇ ತನಿಖೆಗೆ ಆದೇಶ ಬಂದಿದ್ದು , ಸಿಬಿಐನಲ್ಲೂ ಈ ಸಂಬಂಧ ದೂರು ದಾಖಲಾಗಿದೆ. ಇದು ಸುವರ್ಣ ನ್ಯೂಸ್ ವರದಿಗೆ ಸಂದ ಬಿಗ್ ಇಂಪ್ಯಾಕ್ಟ್.
ವಿಜಯಪುರ - ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿ 13ರ ಚತುಷ್ಪತಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ನೆಪದಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆಯಲಾಗಿತ್ತು. ಇದ್ರಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಸೇರಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆಂಬ ಆರೋಪ ಕೇಳಿ ಬಂದಿತ್ತು.
ಕವರ್ ಸ್ಟೋರಿ ವರದಿ ಬೆನ್ನಲ್ಲೇ ನಮೋ ಬ್ರಿಗೇಡ್ ನ ರಾಜ್ಯ ಉಸ್ತುವಾರಿ ರಘು ಅಣ್ಣಿಗೇರಿ ಪ್ರಧಾನಿ ಮೋದಿ ಅವರ ಪಬ್ಲಿಕ್ ಗ್ರೀವಿಯನ್ಸ್ ಸೆಲ್ ಗೆ ತನಿಖೆ ನಡೆಸುವಂತೆ ದೂರು ದಾಖಲಿಸಿದ್ರು. ದೂರನ್ನು ಗಂಭೀರವಾಗಿ ಸ್ವೀಕರಿಸಿರೋ ಪ್ರಧಾನಿ ಕಾರ್ಯಾಲಯ ಮಿನಿಸ್ಟರಿ ಆಫ್ ರೋಡ್ ಟ್ರಾನ್ಸ್ಪೋರ್ಟ್ ಆ್ಯಂಡ್ ಹೈವೇಸ್ ಇಲಾಖೆಯ ಜಾಯಿಂಟ್ ಸೆಕ್ರೆಟರಿ ದಕ್ಷಿತಾ ದಾಸ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಪ್ರಧಾನಿ ಕಾರ್ಯಾಲಯದ ಆದೇಶದ ಮೇರೆಗೆ ಕೇಂದ್ರದ ಹೆದ್ದಾರಿ-ಸಾರಿಗೆ ಹಾಗೂ ಸಂಪರ್ಕ ಇಲಾಖೆ ಜಂಟಿ ಕಾರ್ಯದರ್ಶಿ ದಕ್ಷಿತಾ ದಾಸ್ ಅವರು ತನಿಖೆ ಆರಂಭಿಸಿದ್ದಾರೆ. ತನಿಖೆ ಹಂತದಲ್ಲಿ ವಿಜಯಪುರ ಜಿಲ್ಲೆಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಇನ್ನು ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳನ್ನು ತಮ್ಮ ಆಭಿಪ್ರಾಯ ವೇನು ಎಂದು ಕೇಳಲು ಹೋದ್ರೆ ಸರಿಯಾಗಿ ಸ್ಪಂದಿಸದೇ ಉಡಾಫೆ ಉತ್ತರ ನೀಡಿದರು.
ಈ ಮಧ್ಯೆ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ವಿರುದ್ದ ಸಿಬಿಐಗೆ ದೂರು ದಾಖಲಿಸಿದ್ದಾರೆ. ರಮೇಶ್ ಜಿಗಜಿಣಗಿ ಟೋಲ್ ಪ್ಲಾಜಾ ಸ್ಥಳಾಂತರಿಸಿ 50 ಕೋಟಿ ಆಕ್ರಮವೆಸಗಿದ್ದಾರೆ ಎಂದು ಪೃಥ್ವಿ ರೆಡ್ಡಿ ದೂರಿನಲ್ಲಿ ಆರೋಪಿಸಿದ್ದಾರೆ .ಒಟ್ನಲ್ಲಿ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ನಡೆಸಿರುವ ಹೈವೇ ದರೋಡೆ ತನಿಖಾ ವರದಿಗೆ ಕೇಂದ್ರದಿಂದಲೇ ಮನ್ನಣೆ ಸಿಕ್ಕಿದ್ದು , ತನಿಖೆಗೆ ಆದೇಶಿಸಿರೋದು ಸುವರ್ಣನ್ಯೂಸ್ಗೆ ಸಂದ ಜಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.