
ವಿಜಯಪುರ- ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿ 13ರ ಚತುಷ್ಪತ ಯೋಜನೆ ಹಗರಣದ ಕೂಪ ಆಗಿದ್ದು ಇದಕ್ಕೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯವರು ಬೆಂಬಲ ನೀಡಿರುವುದನ್ನು ಸುವರ್ಣ ನ್ಯೂಸ್ ಕವರ್ಸ್ಟೋರಿ ತಂಡ ಪತ್ತೆ ಹಚ್ಚಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು.
ಕೆಲ ಪ್ರಭಾವಿ ರೈತರು, ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ ಕೋಟಿ ಕೋಟಿ ಪರಿಹಾರ ಲೂಟಿ ಹೊಡೆದಿದ್ದಾರೆ. ಅಲ್ಲದೆ ಹಾಲಿ ಅಪರ ಜಿಲ್ಲಾಧಿಕಾರಿ ಬೂದೆಪ್ಪ, ಎಸಿ ಪರಶುರಾಮ ಶಾಮೀಲಾಗಿರುವುದನ್ನು ವಾಹಿನಿ ದಾಖಲೆ ಸಮೇತ ಬಯಲು ಮಾಡಿತ್ತು.
ಈ ವರದಿ ಇಂಪ್ಯಾಕ್ಟ್ ಆಗಿದ್ದು, ವಿಜಯಪುರದ ನಮೋ ಬ್ರಿಗೇಡ್ ಮುಖಂಡ ರಾಘವ ಅಣ್ಣಿಗೇರಿ , ಪ್ರಧಾನಿ ಮೋದಿಗೆ ದೂರು ನೀಡಿದ್ದಾರೆ. ರಮೇಶ್ ಜಿಗಜಿಣಗಿ ವಿರುದ್ಧ ಆನ್ ಲೈನ್ ಮೂಲಕ ರಾಘವ, ಪ್ರಧಾನಿ ಮೋದಿಯ ಸಾರ್ವಜನಿಕ ಕುಂದುಕೊರತೆ ವಿಭಾಗದಕ್ಕೆ ದೂರು ದಾಖಲಿಸಿದ್ದಾರೆ. ಇದಕ್ಕೆ ತಕ್ಷಣವೇ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ಸಮಗ್ರ ತನಿಖೆ ನಡೆಸುವುದಾಗಿ ಸ್ವೀಕೃತ ಪತ್ರ ಕಳುಹಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ನನ್ನದೇನೂ ತಪ್ಪಿಲ್ಲ. ಇದು ಷಡ್ಯಂತ್ರ ಅಂತಾ ಸಮಜಾಯಿಷಿ ನೀಡಿದ್ದಾರೆ. ಇನ್ನೂ ರಮೇಶ್ ಜಿಗಜಿಣಗಿಯನ್ನು ಕೇಂದ್ರ ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ಒತ್ತಾಯಿಸಿ ಟಿಪ್ಪು ಸೇನೆ ರೈತ ಘಟಕದ ಕಾರ್ಯಕರ್ತರು ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದರು.
ಇನ್ನೂ ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿದ್ದ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಕೂಡ ಅಕ್ರಮಕ್ಕೆ ಕೈಜೋಡಿಸಿರುವ ಆರೋಪ ಕೇಳಿಬಂದಿದೆ. ಒಟ್ಟಾರೆ ಎನ್'ಹೆಚ್13ರ ಚತುಷ್ಪತ ಯೋಜನೆಯಲ್ಲಿ ಭಾರೀ ಹಗರಣ ನಡೆದಿರೋದು ಸ್ಪಷ್ಟ. ಇದರ ಉನ್ನತ ಮಟ್ಟದ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.