‘ಯಶ್ ಬಣ್ಣ ಹಾಕಿ ನಾಟಕ ಮಾಡಿದ್ದಾರೆ, ನಾವು ಬಣ್ಣ ಹಾಕದೇ ನಾಟಕ ಮಾಡುತ್ತೇವೆ’ ಡಿಕೆಶಿ ಚಟಾಕಿ

Published : Mar 22, 2019, 10:30 PM ISTUpdated : Mar 22, 2019, 11:28 PM IST
‘ಯಶ್ ಬಣ್ಣ ಹಾಕಿ ನಾಟಕ ಮಾಡಿದ್ದಾರೆ, ನಾವು ಬಣ್ಣ ಹಾಕದೇ ನಾಟಕ ಮಾಡುತ್ತೇವೆ’ ಡಿಕೆಶಿ ಚಟಾಕಿ

ಸಾರಾಂಶ

ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ರಾಜಕಾರಣವನ್ನು ಹೊರತುಪಡಿಸಿ ಅನೇಕ ವಿಚಾರ ಮಾತನಾಡಿದರು. 

ಬೆಂಗಳೂರು[ಮಾ. 22]  ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅಸಾಮಾನ್ಯ ಕನ್ನಡಿಗರನ್ನು ಆಯ್ಕೆ ಮಾಡುವುದು ಕಷ್ಟದ ಸಂಗತಿ. ಅಸಾಮಾನ್ಯ ಕನ್ನಡಿಗರನ್ನ ಆಯ್ಕೆ ಮಾಡಿದ ಎಲ್ಲರಿಗೂ ನನ್ನ ಧನ್ಯವಾದಗಳು. ಇದೊಂದು ಪವಿತ್ರ ಕಾರ್ಯಕ್ರಮ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂತಹ ಅಸಾಮಾನ್ಯ ಕನ್ನಡಿಗರಾಗಬೇಕು ಅಂದರೆ ಅವರ ಕುಟುಂಬದವರು ಸಾಕಷ್ಟು ಬೆಂಬಲ ನೀಡಿರುತ್ತಾರೆ. ಅವರಿಗೂ ನನ್ನ ಧನ್ಯವಾದಗಳು. ರಾಜಕಾರಣ ಮಾತನಾಡಲು ನನಗೆ ಇಷ್ಟವಿಲ್ಲ. ನಾವು ನಮ್ಮ ನಂಬಿಕೆಯಿಂದ ಬದುಕುತ್ತೇವೆ. ಕೆಲವರು ಒಳ್ಳೆಯವರನ್ನು ನಂಬುತ್ತಾರೆ, ಕೆಲವರು ಕೆಟ್ಟವರನ್ನು ನಂಬುತ್ತಾರೆ. ಅದು ಅವರವರಿಗೆ ಬಿಟ್ಟಿದ್ದು. ಇಂತಹ ಕಾರ್ಯಕ್ರಮಗಳಿಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಯಶ್ ದಿನ ಬಣ್ಣ ಹಾಕಿ ನಾಟಕ ಮಾಡಿದ್ದಾರೆ.  ಆದರೆ ನಾವು ಬಣ್ಣ ಹಾಕದೇ ನಾಟಕ ಮಾಡುತ್ತೇವೆ ಎಂದು ಡಿಕೆಶಿ ಹಾಸ್ಯ ಚಟಾಕಿ ಹಾರಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!
Bengaluru: ಹಾರ್ಟ್‌ ಅಟ್ಯಾಕ್‌ ಆಗಿ ರಸ್ತೆಯಲ್ಲಿ ಬಿದ್ದ ವ್ಯಕ್ತಿ, ಪತ್ನಿಯ ಗೋಳಾಟ ಕೇಳಿಯೂ ನೆರವಿಗೆ ಬಾರದ ಜನ!