ಸುವರ್ಣನ್ಯೂಸ್ ಫಲಶ್ರುತಿ: ಗರ್ಭಿಣಿಗೆ ಹೆರಿಗೆ ಮಾಡಲು ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಜಾ

By Suvarna Web DeskFirst Published Oct 28, 2016, 3:57 AM IST
Highlights

ವೈದ್ಯರ ನಿರ್ಲಕ್ಷ್ಯದ ಕುರಿತು ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಸುವರ್ಣನ್ಯೂಸ್ ವರದಿ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​​ ಮಾಡುವ ಮೂಲಕ ಅಮಾನವೀಯ ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದರು.

ಬೀದರ್ (ಅ.28): ಔರಾದ್​​ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಹೆರಿಗೆ ಮಾಡಲು ನಿರ್ಲಕ್ಷ್ಯ ತೋರಿದ್ದ  ಮೂವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಅಕ್ಟೋಬರ್​​ 12 ರಂದು ನಸುಕಿನ ಜಾವ ಯಡೂರು ಗ್ರಾಮದ ಸುರೇಖಾ ಹೆರಿಗೆಗೆ ಬಂದಿದ್ದರು.. ಆದರೆ ಆ ವೇಳೆ ಆಸ್ಪತ್ರೆಯಲ್ಲಿದ್ದ  ವೈದ್ಯೆ ಡಾ. ಶಿಲ್ಪಾ ಸಿಂಧೆ ಚಿಕಿತ್ಸೆ ನೀಡುವುದನ್ನು ಬಿಟ್ಟು ಬೀದರ್ ಗೆ ಹೊಗುವಂತೆ ಹೇಳಿ ಅಮಾನವೀಯವಾಗಿ ಹೊರ ಹಾಕಿದ್ದರು.

Latest Videos

ದಿಕ್ಕು ಕಾಣದ ಬಡ ಮಹಿಳೆ ತೆರಳುತ್ತಿದ್ದ ವೇಳೆ ಬಸವೇಶ್ವರ ವೃತದ ನಡು ರಸ್ತೆಯಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ವೈದ್ಯರ ನಿರ್ಲಕ್ಷ್ಯದ ಕುರಿತು ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಸುವರ್ಣನ್ಯೂಸ್ ವರದಿ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​​ ಮಾಡುವ ಮೂಲಕ ಅಮಾನವೀಯ ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದರು.

ಇದೀಗ ಸಿಎಂ ಸೂಚನೆ ಮೇರೆಗೆ ಆಸ್ಪತ್ರೆಯ ನರ್ಸ್ ರೇಣುಕಾ, ಸಂದೀಪ್ ಮತ್ತು ಕಿರಿಯ ಪ್ರಯೋಗ ಶಾಲೆ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಆದರೆ ಚಿಕಿತ್ಸೆ ನೀಡಲು ನಿರಾಕರಿಸಿದ ಡಾ. ಶಿಲ್ಪಾ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

click me!