ಪ್ರೀತಿಯ ಪಾಶದಲ್ಲಿ ಬಿದ್ದವ ನಿಗೂಢ ಸಾವು!: ಸತ್ತ ಮೂರು ತಿಂಗಳ ಬಳಿಕ ಅನುಮಾನದ ಹುತ್ತ

Published : Jan 20, 2017, 06:30 AM ISTUpdated : Apr 11, 2018, 01:00 PM IST
ಪ್ರೀತಿಯ ಪಾಶದಲ್ಲಿ ಬಿದ್ದವ ನಿಗೂಢ ಸಾವು!: ಸತ್ತ ಮೂರು ತಿಂಗಳ ಬಳಿಕ ಅನುಮಾನದ ಹುತ್ತ

ಸಾರಾಂಶ

ಮಗ ತೀರಿಕೊಂಡ ಮೂರು ತಿಂಗಳ ನಂತರ ತಾಯಿಗೆ ತನ್ನ ಮಗನ ಕೊಲೆ ಆಗಿದೆ ಎಂಬ ಅನುಮಾನ ಬಲವಾಗಿದ್ದು  ಮಗನ ಸಾವು ಸಂಭವಿಸಿ 3 ತಿಂಗಳ ನಂತರ ಅದು ಕೊಲೆ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ.

ಮೈಸೂರು(ಜ.20): ಮಗ ತೀರಿಕೊಂಡ ಮೂರು ತಿಂಗಳ ನಂತರ ತಾಯಿಗೆ ತನ್ನ ಮಗನ ಕೊಲೆ ಆಗಿದೆ ಎಂಬ ಅನುಮಾನ ಬಲವಾಗಿದ್ದು  ಮಗನ ಸಾವು ಸಂಭವಿಸಿ 3 ತಿಂಗಳ ನಂತರ ಅದು ಕೊಲೆ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರು ಗ್ರಾಮದ ಮಂಗಳಮ್ಮ ಎಂಬುವರು ತನ್ನ ಮಗನ ಕೊಲೆಯನ್ನು ಆತನ ಪ್ರೇಯಸಿ ಮನೆಯವರು ಮಾಡಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆಯ ಒಬ್ಬನೇ ಮಗ ಶಶಿಧರ್​ ವೃತ್ತಿಯಲ್ಲಿ ಡ್ರೈವರ್​ ಆಗಿದ್ದು, ಇದೇ ಗ್ರಾಮದಲ್ಲಿ ಎಂ.ಟೆಕ್ ಓದುತ್ತಿದ್ದ ಅಕ್ಷತಾ ಎಂಬುವಳನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿ ಕಳೆದ 4 ವರ್ಷಗಳಿಂದ ನಡೆಯುತ್ತಿತು. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಜೊತೆಯಾಗಿ ಮೈಸೂರಿನ ಸುತ್ತಮುತ್ತ, ಮಂಡ್ಯ, ಮಡಿಕೇರಿ ಹಾಗೂ ದೂರದ ಆಂಧ್ರಪ್ರದೇಶದ ನೂರಾರು ಪ್ರವಾಸಿತಾಣಗಳನ್ನು ಸುತ್ತಾಡಿದ್ದಾರೆ. ಈ ವಿಚಾರ ಶಶಿಧರ್​ ತಾಯಿಗೂ ಕೂಡ ಗೊತ್ತಾಗಿದ್ದು, ಪರೀಕ್ಷೆಗಳು ಮುಗಿದ ತಕ್ಷಣ ತನ್ನನ್ನ ಅಕ್ಷತಾ ಮದುವೆ ಆಗುವುದಾಗಿ ಹೇಳುದ್ದಾಳೆ ಎಂದಯ ತಾಯಿಗೆ ಹೇಳಿದ್ದಾನೆ.

ಆದರೆ ಕಳೆದ ಸೆಪ್ಟಂಬರ್​ 8 ರಂದು ಬೆಳಿಗ್ಗೆ ಶಶಿಧರ್​ ಯಾವುದೋ ಮುಖ್ಯವಾದ ಕೆಲಸಕ್ಕಾಗಿ ಮೈಸೂರಿಗೆ ಹೋಗಿದ್ದ. ಅವತ್ತು ಅಕ್ಷತಾ ಹಾಗೂ ಆಕೆಯ ತಂದೆ ಗಂಗಾಧರ್​ ಜೊತೆ ಮಾತನಾಡಿ ವಾಪಸ್​ ಬರುತ್ತೇನೆಂದು ಹೋಗಿ ಬಂದಿದ್ದು ಹೆಣವಾಗಿ. ಆತನ ಗೆಳೆಯರೆಲ್ಲರೂ ನಿಮ್ಮ ಮಗ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿ ಆತನ ಶವವನ್ನು ಊರಿಗೆ ತಂದು ಮರಣೋತ್ತರ ಪರೀಕ್ಷೆಯನ್ನೂ ಮಾಡಿಸದೆ ಅಂತ್ಯಕ್ರಿಯೆ ಮಾಡಿದ್ದಾರೆ.

ಒಂದು ದಿನದ ನಂತರ ಆತನ ಮೊಬೈಲ್​ ಕೊಟ್ಟಾಗ ಅದರಲ್ಲಿ ಯಾವುದೇ ದಾಖಲಾತಿಗಳು ಇರಲಿಲ್ಲ. ಇದೆಲ್ಲಕ್ಕೂ ಮೇಲಾಗಿ ಶಶಿಧರ್​ ತಾನು ಮತ್ತು ಅಕ್ಷತಾ ಜೊತೆಯಾಗಿದ್ದ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ ನಂತರ ಆತನ ಸಾವು ಅನುಮಾನಾಸ್ಪದವಾಗಿ ಆಗಿರುವುದರಿಂದ ಅನುಮಾನಗಳು ಹೆಚ್ಚಾಗಿದ್ದು, ಈಗ ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಮೈಸೂರು ಎಸ್'ಪಿ ರವಿಚನ್ನಣ್ಣನವರ್​ ಮೊರೆ ಹೋಗಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!
ಕರೆಂಟ್‌ ಅಕೌಂಟಲ್ಲಿ ₹150 ಕೋಟಿ ಅಲ್ಲ, ₹1 ಸಾವಿರ ಕೋಟಿ ವಹಿವಾಟು