ಅಧಿಕಾರ ಕಳೆದುಕೊಂಡ ನಂತರ 2 ಬೆಡ್‌ರೂಂ ಫ್ಲಾಟ್‌ಗೆ ಸುಷ್ಮಾ ಸ್ವರಾಜ್ ಶಿಫ್ಟ್!

By Web Desk  |  First Published Jul 2, 2019, 12:32 PM IST

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿವಾಸ ಬದಲು | ಅಧಿಕಾರ ಕಳೆದುಕೊಂಡ ನಂತರ ಖಾಸಗಿ ನಿವಾಸಕ್ಕೆ ಶಿಫ್ಟ್ | 


ಅಧಿಕಾರ ಕಳೆದುಕೊಂಡ ಒಂದು ತಿಂಗಳಲ್ಲಿಯೇ ಸುಷ್ಮಾ ಸ್ವರಾಜ್‌ ಸಫ್ದರ್ಜಂಗ್‌ ಲೇನ್‌ನಲ್ಲಿದ್ದ ತಮ್ಮ ದಶಕಗಳ ಅಧಿಕೃತ ನಿವಾಸ ಖಾಲಿ ಮಾಡಿ 2 ಬೆಡ್‌ ರೂಮ್‌ನ ಖಾಸಗಿ ಫ್ಲಾಟ್‌ಗೆ ಗಂಡ ಸ್ವರಾಜ್‌ ಕೌಶಲ್‌ ಜೊತೆ ತೆರಳಿದ್ದಾರೆ.

ಕಾವೇರಿ ಕಾವು: ಸುಮಲತಾ ನಡೆ ಹೇಗಿರಬಹುದು?

Tap to resize

Latest Videos

undefined

‘ಮುಂದಿನ 2 ತಿಂಗಳ ಕಾಲ ಖಾಸಗಿ ನಿವಾಸಕ್ಕೆ ಬರಬೇಡಿ. ಮನೆ ತಯಾರಾದ ನಂತರ ಬನ್ನಿ’ ಎಂದು ಬಿಜೆಪಿ ನಾಯಕರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಏನೇ ಇರಲಿ, ವಾಜಪೇಯಿ ಕುಟುಂಬ, ಜೇಟ್ಲಿ ಮತ್ತು ಸುಷ್ಮಾ ಮನೆ ಖಾಲಿ ಮಾಡಿ ಎಂದು ನೋಟಿಸ್‌ ಬರುವ ಮುನ್ನವೇ ಮನೆ ಬಿಟ್ಟಿದ್ದು ಜನಪ್ರತಿನಿಧಿಗಳು ಪಾಲಿಸಲೇಬೇಕಾದ ಸಂಗತಿ.

‘ಕೈ’ ಶಾಸಕರ ರಾಜೀನಾಮೆ: ದೇವೇಗೌಡ್ರ ಲೆಕ್ಕಾಚಾರವೇ ಬೇರೆ!

ಆದರೆ 2 ಎಕರೆ ವಿಸ್ತೀರ್ಣದ ಲಾನ್‌ ಸಮೇತ ಮನೆ, ಆಳು, ಕಾಳು, ಕಾರು, ಪ್ರತಿಷ್ಠೆಯ ಗುಂಗಿನಲ್ಲಿ ಅನೇಕರಿಗೆ ಇದು ಅರಗಿಸಿಕೊಳ್ಳಲು ಆಗುವುದೇ ಇಲ್ಲ. ಅಖಿಲೇಶ್‌ ಯಾದವ್‌ ಮನೆ ಬಿಡಲು 2 ವರ್ಷ ಕೊಡಿ ಎಂದು ಕೇಳಿದರೆ, ಅಜಿತ್‌ ಸಿಂಗ್‌ ಮನೆಯನ್ನು ದಿಲ್ಲಿಯಲ್ಲಿ ಹೊಡೆದಾಟ ಬಡಿದಾಟದ ನಂತರ ಖಾಲಿ ಮಾಡಿಸಲಾಯ್ತು. ಅಂದ ಹಾಗೆ ಇವರೆಲ್ಲ ಸಮಾಜವಾದಿಗಳು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಕ್ಲಿಕ್ ಮಾಡಿ 

click me!